ಮನೆ ಸುದ್ದಿ ಜಾಲ ರೈತರಿಗೆ ಎಚ್ಚರಿಕೆ, 3 ದಿನದೊಳಗೆ ಈ ಕೆಲಸ ಮಾಡದಿದ್ದಲ್ಲಿ ಕೈತಪ್ಪಲಿದೆ ಬೆಳೆಹಾನಿ ಪರಿಹಾರ!

ರೈತರಿಗೆ ಎಚ್ಚರಿಕೆ, 3 ದಿನದೊಳಗೆ ಈ ಕೆಲಸ ಮಾಡದಿದ್ದಲ್ಲಿ ಕೈತಪ್ಪಲಿದೆ ಬೆಳೆಹಾನಿ ಪರಿಹಾರ!

0

ಧಾರವಾಡದಲ್ಲಿ ಮಳೆ ಆಲಿಕಲ್ಲು ಹಾನಿಗೊಳಗಾದ ರೈತರಿಗೆ ಪರಿಹಾರಕ್ಕೆ ಫ್ರೂಟ್ಸ್ ಐಡಿ ಕಡ್ಡಾಯ, 567 ರೈತರಿಗೆ ಫ್ರೂಟ್ಸ್  ಐಡಿ ಇಲ್ಲದೆ ಹಣ ತಡೆ, 3 ದಿನದಲ್ಲಿ ಐಡಿ ಮಾಡಿಸದಿದ್ದಲ್ಲಿ  ಹೆಸರು ಕೈಬಿಡುವ ಎಚ್ಚರಿಕೆಯನ್ನು  ನೀಡಲಾಗಿದೆ .

ಧಾರವಾಡ: ಕಳೆದ ಮಾರ್ಚ್ ತಿಂಗಳ ಅಕಾಲಿಕ ಮಳೆ, ಬಿರುಗಾಳಿ ಮತ್ತು ಆಲಿಕಲ್ಲು ಮಳೆಯಿಂದಾಗಿ ಬೆಳೆ ಕಳೆದುಕೊಂಡ ಧಾರವಾಡ ಜಿಲ್ಲೆಯ ರೈತರಿಗೆ ಜಿಲ್ಲಾಡಳಿತ ಮಹತ್ವದ ಸೂಚನೆಯೊಂದನ್ನು ನೀಡಿದೆ. ನೀವು ಕಷ್ಟಪಟ್ಟು ಬೆಳೆದ ಬೆಳೆ ಮಳೆಗೆ ಆಹುತಿಯಾಗಿದ್ದರೆ, ಸರ್ಕಾರ ನೀಡುವ ಪರಿಹಾರದ ಹಣ ನಿಮ್ಮ ಕೈ ಸೇರಬೇಕಾದರೆ  ನಿಮ್ಮ ಬಳಿ ಫ್ರೂಟ್ಸ್ ಐಡಿ’ ಇರಲೇಬೇಕು .

ಧಾರವಾಡ ಜಿಲ್ಲೆಯ ಕುಂದಗೋಳ, ಹುಬ್ಬಳ್ಳಿ ಮತ್ತು ಕಲಘಟಗಿ ತಾಲೂಕುಗಳಲ್ಲಿ ಸುಮಾರು 1,980 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಕೃಷಿ  ಮತ್ತು ತೋಟಗಾರಿಕಾ ಇಲಾಖೆಯು ಸಮೀಕ್ಷೆ ನಡೆಸಿ ವರದಿ ಸಿದ್ಧಪಡಿಸಿದೆ. ಸಾವಿರಾರು ರೈತರ ಖಾತೆಗೆ ಹಣ ಜಮೆಯಾಗುವ ಪ್ರಕ್ರಿಯೆ ಆರಂಭವಾಗಿದೆಯಾದರೂ, ಇನ್ನೂ 567 ರೈತರ ಹೆಸರಿನಲ್ಲಿ ಫ್ರೂಟ್ಸ್ ಐಡಿ ಇಲ್ಲದ ಕಾರಣ ಅವರ ಪರಿಹಾರ ಹಣವನ್ನು ತಡೆಹಿಡಿಯಲಾಗಿದೆ ಎಂದು ತಿಳಿದುಬಂದಿದೆ.