ಮನೆ ಸುದ್ದಿ ಜಾಲ  ಟ್ರಂಪ್ ಮೇಲಿನ ದಾಳಿ :  ಸತ್ಯವೋ ಅಥವಾ ಸಂಚೋ?

 ಟ್ರಂಪ್ ಮೇಲಿನ ದಾಳಿ :  ಸತ್ಯವೋ ಅಥವಾ ಸಂಚೋ?

0

ವಾಷಿಂಗ್ಟನ್: ಶನಿವಾರ ರಾತ್ರಿ ವಾಷಿಂಗ್ಟನ್‌ನ ಪ್ರತಿಷ್ಠಿತ ಹೋಟೆಲ್‌ನಲ್ಲಿ ನಡೆದ ಪತ್ರಕರ್ತರ ವಾರ್ಷಿಕ ಭೋಜನಕೂಟದಲ್ಲಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ನಡೆದ ಗುಂಡಿನ ದಾಳಿ ಈಗ ಜಗತ್ತಿನಾದ್ಯಂತ ಸಂಚಲನ ಮೂಡಿಸಿದೆ. ಆದರೆ, ಘಟನೆ ನಡೆದ ಬೆನ್ನಲ್ಲೇ ಇದರ ಸತ್ಯಾಸತ್ಯತೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಂಶಯದ ಸುನಾಮಿಯೇ ಎದ್ದಿದೆ.

ಜಾಲತಾಣಗಳಲ್ಲಿ ಸಂಶಯದ ಸುರಿಮಳೆ

ಈ ಘಟನೆಯು ಕೇವಲ ಒಂದು ಅಪಘಾತವಲ್ಲ, ಇದೊಂದು ‘ಪೂರ್ವ ನಿಯೋಜಿತ ನಾಟಕ’ ಎಂಬ ವಾದಗಳು ಇಂಟರ್ನೆಟ್‌ನಲ್ಲಿ ಬಲವಾಗಿ ಕೇಳಿಬರುತ್ತಿವೆ. ನೆಟ್ಟಿಗರು ಈ ಬಗ್ಗೆ ಹಲವು ವಿಶ್ಲೇಷಣೆಗಳನ್ನು ಮುಂದಿಡುತ್ತಿದ್ದಾರೆ.

ಗುಂಡಿನ ಸದ್ದು ಕೇಳಿದಾಗ ಟ್ರಂಪ್ ಪತ್ನಿ ಮೆಲಾನಿಯಾ ಅವರ ವರ್ತನೆ ಸಹಜವಾಗಿರಲಿಲ್ಲ ಎಂಬುದು ಹಲವರ ವಾದ. ಅವರ ಪ್ರತಿಕ್ರಿಯೆಯ ವಿಡಿಯೋ ತುಣುಕುಗಳನ್ನು ಹಂಚಿಕೊಳ್ಳುತ್ತಿರುವ ಜನರು, ಇದು ಮುಂಚಿತವಾಗಿ ತರಬೇತಿ ಪಡೆದವರಂತೆ ಇತ್ತು ಎಂದು ಕಮೆಂಟ್ ಮಾಡುತ್ತಿದ್ದಾರೆ.

ಘಟನೆಯ ಗಂಭೀರತೆ ತಿಳಿಯುವ ಮೊದಲೇ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರನ್ನು ಸ್ಥಳಾಂತರಿಸಿದ್ದು ಏಕೆ? ಟ್ರಂಪ್ ಅವರಿಗಿಂತ ಮೊದಲೇ ಅವರನ್ನು ರಕ್ಷಿಸಿದ್ದು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ. ದಾಳಿಗೆ ಕೆಲವೇ ಕ್ಷಣಗಳ ಮೊದಲು ಒಬ್ಬ ವ್ಯಕ್ತಿ ಟ್ರಂಪ್ ಅವರೊಂದಿಗೆ ಸಮಾಲೋಚಿಸುತ್ತಿದ್ದ ವಿಡಿಯೋ ವೈರಲ್ ಆಗಿದೆ. ಆತ ಒಬ್ಬ ಮನೋವಿಜ್ಞಾನಿ ಅಥವಾ ಪ್ರಭಾವಶಾಲಿ ಕಲಾವಿದ ಎಂಬ ಚರ್ಚೆಗಳು ನಡೆಯುತ್ತಿದ್ದು, ಆತನ ಕೈಯಲ್ಲಿದ್ದ ಚೀಟಿಯಲ್ಲಿ ‘ಸೂಚನೆ’ಗಳಿದ್ದವೇ ಎಂಬ ಸಂಶಯ ವ್ಯಕ್ತವಾಗಿದೆ.

ಭದ್ರತಾ ಲೋಪವೋ ಅಥವಾ ತಂತ್ರವೋ?

ದಾಳಿಕೋರನನ್ನು ಭದ್ರತಾ ಸಿಬ್ಬಂದಿ ಗುರುತಿಸಿದರೂ ತಕ್ಷಣವೇ ಆತನನ್ನು ತಟಸ್ಥಗೊಳಿಸದಿದ್ದಕ್ಕೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭದ್ರತಾ ವ್ಯವಸ್ಥೆಯ ಮೇಲಿನ ನಂಬಿಕೆಯನ್ನೇ ಈ ಘಟನೆ ಪ್ರಶ್ನಿಸುವಂತೆ ಮಾಡಿದೆ.

ಅಚ್ಚರಿಯ ವಿಷಯವೆಂದರೆ, 1981 ರಲ್ಲಿ ಅಂದಿನ ಅಧ್ಯಕ್ಷ ರೊನಾಲ್ಡ್ ರೇಗನ್ ಮೇಲೆ ಇದೇ ಸ್ಥಳದಲ್ಲಿ ಗುಂಡಿನ ದಾಳಿ ನಡೆದಿತ್ತು. ಈಗ ಅದೇ ಮಾದರಿಯಲ್ಲಿ ಟ್ರಂಪ್ ಅವರ ಮೇಲೆಯೂ ದಾಳಿ ನಡೆದಿರುವುದು ಇದು ಕೇವಲ ಕಾಕತಾಳೀಯವೇ ಅಥವಾ ರಾಜಕೀಯ ಲಾಭಕ್ಕಾಗಿ ಸೃಷ್ಟಿಸಿದ ಕಥೆಯೇ ಎಂಬ ಅನುಮಾನಗಳನ್ನು ದಟ್ಟವಾಗಿಸಿದೆ.