ಮನೆ ಸುದ್ದಿ ಜಾಲ ಹೈಸ್ಪೀಡ್ ರೈಲುಗಳಿ​​ಗೆ ಸಂಪುಟ ಅಸ್ತು: ರಾಜ್ಯದಲ್ಲಿ 7  ರೈಲ್ವೆ ನಿಲ್ದಾಣ

ಹೈಸ್ಪೀಡ್ ರೈಲುಗಳಿ​​ಗೆ ಸಂಪುಟ ಅಸ್ತು: ರಾಜ್ಯದಲ್ಲಿ 7  ರೈಲ್ವೆ ನಿಲ್ದಾಣ

0

ಬೆಂಗಳೂರು: ಕೇಂದ್ರ ಸರ್ಕಾರ ಪ್ರಾಯೋಜಿತ ಹೈದರಾಬಾದ್-ಬೆಂಗಳೂರು ಮತ್ತು ಚೆನ್ನೈ-ಬೆಂಗಳೂರು ನಡುವಿನ ಹೈ ಸ್ಪೀಡ್ ರೈಲು ಕಾರಿಡಾರ್ ಅನುಷ್ಠಾನಗೊಳಿಸಲು ಸಚಿವ ಸಂಪುಟ ಸಭೆ ಆಡಳಿತಾತ್ಮಕ ಅನುಮೋದನೆ ನೀಡಿದೆ ಎನ್ನಲಾಗಿದೆ. ಕೇಂದ್ರ ಬಜೆಟ್​​ನಲ್ಲಿ ಘೋಷಿಸಲಾದ ಈ ಎರಡು ಹೈ ಸ್ಪೀಡ್ ರೈಲು ಯೋಜನೆಗಳ ಅನುಷ್ಠಾನಕ್ಕೆ ರಾಜ್ಯ ಸಚಿವ ಸಂಪುಟ ಸಭೆ ಇದೀಗ ಆಡಳಿತಾತ್ಮಕ ಅಸ್ತು ನೀಡಿದೆ ಎನ್ನಬಹುದು. ರೈಲ್ವೆ ಸಚಿವಾಲಯ ಈ ಯೋಜನೆಗಳ ಮೇಲ್ವಿಚಾರಣೆಗಾಗಿ ರಾಷ್ಟ್ರೀಯ ಹೈ ಸ್ಪೀಡ್ ರೈಲು ನಿಗಮ ಲಿಮಿಟೆಡ್ ಅನ್ನು ನೋಡಲ್ ಏಜೆನ್ಸಿಯಾಗಿ ನೇಮಿಸಿದೆ.ಅದರಿಂದ ಅಂತಿಮ ಸ್ಥಳ ಸಮೀಕ್ಷೆ ಮತ್ತು ಯೋಜನೆಗಾಗಿ DPR ತಯಾರಿಕೆಯನ್ನು ಕೈಗೊಳ್ಳಲು M/s RITES (P) Ltd. ಅನ್ನು ಸಲಹಾ ಸಂಸ್ಥೆಯಾಗಿ ನೇಮಿಸಲಾಗಿದೆ ಹಾಗೂ ಕಾರಿಡಾರ್‌ನ ಯೋಜನೆ, ವಿನ್ಯಾಸ, ಕಾರ್ಯಗತಗೊಳಿಸುವಿಕೆ ಮತ್ತು ಕಾರ್ಯಾ ಆರಂಭಕ್ಕಾಗಿ NHSRCL ಅನ್ನು ಅನುಷ್ಠಾನಗೊಳಿಸುವ ಸಂಸ್ಥೆಯಾಗಿ ನೇಮಿಸಲಾಗಿದೆ ಎಂಬ ಮಾಹಿತಿ ಬಂದಿದೆ.

ಹೈದರಾಬಾದ್-ಬೆಂಗಳೂರು ಹೈ-ಸ್ಪೀಡ್ ರೈಲು ಕಾರಿಡಾರ್ ಒಟ್ಟು 15 ನಿಲ್ದಾಣಗಳನ್ನು ಒಳಗೊಂಡಿದೆ. ಕರ್ನಾಟಕದಲ್ಲಿ ಅಲಿಪುರ, ದೇವನಹಳ್ಳಿ ಮತ್ತು ಕೋಡಿಹಳ್ಳಿ ಸೇರಿ ಮೂರು ನಿಲ್ದಾಣಗಳು ಬರಲಿದೆ. ಈ ಕಾರಿಡಾರ್‌ನ ಒಟ್ಟು ಉದ್ದ 607.03 ಕಿ.ಮೀ. ಇದೆ. ಅದರಲ್ಲಿ ತುಮಕೂರು, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆ ಒಳಗೊಂಡಂತೆ 101.03 ಕಿ.ಮೀ. ಕರ್ನಾಟಕ ರಾಜ್ಯದೊಳಗೆ ಬರುತ್ತದೆ. ಹೀಗೆ ಕರ್ನಾಟಕದ 101.03 ಕಿ.ಮೀ. ಉದ್ದದ ಈ ರಸ್ತೆಗೆ ಒಟ್ಟು ಸುಮಾರು 237.50 ಹೆಕ್ಟೇರ್ ಭೂಮಿಯ ಅವಶ್ಯಕತೆ ಇದೆ. ಪ್ರತಿ ಸಾರಿಗೆ ಆಧಾರಿತ ಅಭಿವೃದ್ಧಿ ಗೆ ಅಂದರೆ ಅಲಿಪುರ ನಿಲ್ದಾಣ ಮತ್ತು ದೇವನಹಳ್ಳಿ ನಿಲ್ದಾಣಗಳಿಗೆ ಹೆಚ್ಚುವರಿಯಾಗಿ 80 ಹೆಕ್ಟೇರ್ ಅಗತ್ಯವಿದೆ ಎನ್ನಲಾಗಿದೆ. ಆದ್ದರಿಂದ, ಒಟ್ಟು ಭೂಸ್ವಾಧೀನ ಸುಮಾರು 398 ಹೆಕ್ಟೇರ್ ಆಗಲಿದೆ. ಇದರಿಂದ ಈ ಒಟ್ಟು ಭೂಮಿಯ ಅವಶ್ಯಕತೆಯಲ್ಲಿ, 5.032 ಹೆಕ್ಟೇರ್ ಅರಣ್ಯ ಇಲಾಖೆಯ ವ್ಯಾಪ್ತಿಗೆ ಬರುತ್ತದೆ.

100% ಎತ್ತರದ ಕಾರಿಡಾರ್ ಆಗಲಿದ್ದು, ಇದು ಭೂ ವಿಭಜನೆಯನ್ನು ಕಡಿಮೆ ಮಾಡಲು, ಲೆವೆಲ್ ಕ್ರಾಸಿಂಗ್‌ಗಳನ್ನು ಕಡಿಮೆ ಮಾಡಲು ಮತ್ತು ಅಸ್ತಿತ್ವದಲ್ಲಿರುವ ರಸ್ತೆ, ರೈಲು ಮತ್ತು ಉಪಯುಕ್ತತೆ ಮೂಲಸೌಕರ್ಯಗಳಿಗೆ ಅಡ್ಡಿಯಾಗುವುದನ್ನು ಕಡಿಮೆ ಮಾಡಿ ವಿನ್ಯಾಸಗೊಳಿಸಲಾಗಿದೆ ಎನ್ನಲಾಗಿದೆ.

ಚೆನ್ನೈ-ಬೆಂಗಳೂರು ಹೈ ಸ್ಪೀಡ್ ರೈಲು ಮಾರ್ಗ ಕುರಿತು ವಿವರವಾದ ಯೋಜನಾ ವರದಿ ಸಿದ್ಧಪಡಿಸಿದೆ ಎನ್ನಲಾಗಿದೆ, 2024ರ ಸಪ್ಟೆಂಬರ್ ತಿಂಗಳಲ್ಲಿ ರೈಲ್ವೆ ಸಚಿವಾಲಯಕ್ಕೆ ಸಲ್ಲಿಸಲಾಗಿದೆ. ಕೇಂದ್ರ ಸರ್ಕಾರ 2026-27ರ ಕೇಂದ್ರ ಬಜೆಟ್​​ನಲ್ಲಿ ಚೆನ್ನೈ-ಬೆಂಗಳೂರು ಯೋಜನೆಯನ್ನು ಘೋಷಿಸಿದೆ ಎನ್ನಲಾಗಿದೆ.

ಕರ್ನಾಟಕದಲ್ಲಿ 4 ನಿಲ್ದಾಣಚೆನ್ನೈ-ಬೆಂಗಳೂರು ಹೈ ಸ್ಪೀಡ್ ರೈಲು ಕಾರಿಡಾರ್ ಒಟ್ಟು 8 ನಿಲ್ದಾಣಗಳನ್ನು ಒಳಗೊಂಡಿದ್ದು, ಅವುಗಳಲ್ಲಿ ನಾಲ್ಕು ನಿಲ್ದಾಣಗಳು ಕೋಲಾರ, ಕೊಡಿಹಳ್ಳಿ, ವೈಟ್‌ಫೀಲ್ಡ್ ಮತ್ತು ಬೈಯ್ಯಪ್ಪನಹಳ್ಳಿ ಕರ್ನಾಟಕ ರಾಜ್ಯದಲ್ಲಿ ಬರಲಿವೆ. ಈ ಮಾರ್ಗದ ಒಟ್ಟು ಉದ್ದ 306 ಕಿ.ಮೀ ಆಗಿದ್ದು, ಅದರಲ್ಲಿನ 100 ಕಿ.ಮೀ ಭಾಗ ಕೋಲಾರ, ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ನಗರ ಜಿಲ್ಲೆಗಳ ಮೂಲಕ ಕರ್ನಾಟಕ ರಾಜ್ಯದ ವ್ಯಾಪ್ತಿಯಲ್ಲಿ ಬರುತ್ತದೆ. ಹೀಗೆ ಕರ್ನಾಟಕದ 100 ಕಿ.ಮೀ. ಉದ್ದದ ಈ ರಸ್ತೆಗೆ ಒಟ್ಟು ಸುಮಾರು 1,358.96 ಹೆಕ್ಟೇರ್ ಭೂಮಿಯ ಅವಶ್ಯಕತೆ ಇದೆ. ಪ್ರತಿ ಸಾರಿಗೆ ಆಧಾರಿತ ಅಭಿವೃದ್ಧಿಗೆ ಹೆಚ್ಚುವರಿಯಾಗಿ 80 ಹೆಕ್ಟೇರ್ ಭೂಮಿ ಅಗತ್ಯವಿದೆ,

ಅಂದರೆ ಕೊಡಿಹಳ್ಳಿ ನಿಲ್ದಾಣ ಮತ್ತು ಕೋಲಾರ ನಿಲ್ದಾಣಗಳಿಗೆ ತಲಾ 80 ಹೆಕ್ಟೇರ್ ಅಗತ್ಯವಿದೆ. ಹೀಗಾಗಿ ಒಟ್ಟು ಭೂಸ್ವಾಧೀನ ಸುಮಾರು 1,519 ಹೆಕ್ಟೇರ್ ಆಗಿರುತ್ತದೆ. ಚೆನ್ನೈ-ಬೆಂಗಳೂರು ಹೈ ಸ್ಪೀಡ್ ರೈಲು ಮಾರ್ಗಕ್ಕಾಗಿ ಕರ್ನಾಟಕದಲ್ಲಿ ಅರಣ್ಯ ಭೂಮಿಯ ಅಗತ್ಯವಿಲ್ಲ. ಈ ಕಾರಿಡಾರ್​​ನ ಶೇ.90ಕ್ಕಿಂತ ಹೆಚ್ಚು ಮಾರ್ಗವನ್ನು elevated corridor ರೂಪದಲ್ಲಿ ಪ್ರಸ್ತಾಪಿಸಲಾಗಿದೆ ಉಳಿದ ಭಾಗವನ್ನು ಭೂ-ಸುರಂಗ ಮಾರ್ಗದ ಮೂಲಕ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದೆ.

ಚೆನ್ನೈ-ಬೆಂಗಳೂರು ಮಾರ್ಗವು ಬೆಂಗಳೂರಿನ ಬೈಯ್ಯಪ್ಪನಹಳ್ಳಿ ನಿಲ್ದಾಣದಲ್ಲಿ ಅಂತ್ಯಗೊಳ್ಳಲಿದೆ. ಬೈಯಪ್ಪನಹಳ್ಳಿ ಹಾಗೂ ವೈಟ್‌ ಫೀಲ್ಡ್ ನಿಲ್ದಾಣಗಳನ್ನು ಭೂ ಸುರಂಗ ನಿಲ್ದಾಣಗಳಾಗಿ ಪ್ರಸ್ತಾಪಿಸಲಾಗಿದೆ. ಕೊಡಿಹಳ್ಳಿ ನಿಲ್ದಾಣ ಹೈದರಾಬಾದ್-ಬೆಂಗಳೂರು ಹಾಗೂ ಚೆನ್ನೈ-ಬೆಂಗಳೂರು ಹೈ ಸ್ಪೀಡ್ ರೈಲು ಮಾರ್ಗಗಳ ಜಂಕ್ಷನ್ ನಿಲ್ದಾಣವಾಗಲಿದೆ. ಜೊತೆಗೆ, ಕಾರ್ಯಾಗಾರ ಮತ್ತು ಡಿಪೋ ಹಾಗೂ ಕಾರ್ಯಾಚರಣಾ ನಿಯಂತ್ರಣ ಕೇಂದ್ರವನ್ನು ಕೊಡಿಹಳ್ಳಿಯಲ್ಲಿ ಸ್ಥಾಪಿಸುವುದಾಗಿ ವಿಷಯ ಪ್ರಸ್ತಾಪಿಸಲಾಗಿದೆ.