ಬೆಂಗಳೂರು ಶುಕ್ರವಾರ (ಮೇ.1): ಮೇ ತಿಂಗಳ ಪ್ರಾರಂಬದಲ್ಲೆ ಬೆಸ್ಕಾಂ ನಲ್ಲಿ ವಿದ್ಯುತ್ ದರ ಹೆಚ್ಚಾಗಿದ್ದು ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಗೃಹಬಳಕೆಯಿಂದ ಪ್ರತಿ ಯೂನಿಟ್ಗೆ 56 ಪೈಸೆ ವಿದ್ಯುತ್ ದರವನ್ನು ಹೆಚ್ಚಳ ಮಾಡಲಾಗಿದೆ ಎನ್ನಲಾಗಿದೆ, ಇಂದಿನಿಂದ ಅಂದರೆ ಶುಕ್ರವಾರ (ಮೇ 1) ರೀಂದ ಜನರೇಟ್ ಆಗುವ ಬಿಲ್ಗಳಲ್ಲಿ ಹೊಸ ದರ ಅನ್ವಯವಾಗಲಿದೆ ಎಂದು ತಿಳಿಸಲಾಗಿದೆ. ಮೇ 15ರವರೆಗೆ ಬಿಲ್ಲಿಂಗ್ ಪ್ರಕ್ರಿಯೆ ನಡೆಯಲಿದ್ದು, ಈ ಸಮಯದಲ್ಲಿ ಗ್ರಾಹಕರು ಪಡೆಯುವ ವಿದ್ಯುತ್ ದರ ಬಿಲ್ಗಳಲ್ಲಿ ಪರಿಷ್ಕೃತ ದರ ನಮೂದಿಸಲಾಗಿದೆ. ಕಳೆದ ವರ್ಷದ ಆರ್ಥಿಕ ಸಮಸ್ಯೆಯಿಂದ ಸರಿಪಡಿಸಲು ಬೆಸ್ಕಾಂ ಸಲ್ಲಿಸಿದ್ದ ಪ್ರಸ್ತಾವನೆಗೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ಈ ಹಿಂದೆ ಅನುಮೋದನೆ ನೀಡಿತ್ತು ಎನ್ನಲಾಗಿದೆ.
ದರ ಏರಿಕೆಗೆ ಬೆಸ್ಕಾಂ ಅನುಭವಿಸುತ್ತಿರುವ ಆರ್ಥಿಕ ನಷ್ಟವೇ ಈ ದರ ಏರಿಕೆಗೆ ಮುಖ್ಯ ಕಾರಣವಾಗಿದೆ ಎನ್ನಬಹುದು. ಹೀಗೆ 2024-25ರ ಆರ್ಥಿಕ ವರ್ಷದಲ್ಲಿ ಕೆಇಆರ್ಸಿ ವಿದ್ಯುತ್ ಮಾರಾಟದಿಂದ 34,084 ಕೋಟಿ ರೂ. ಆದಾಯದ ನಿರೀಕ್ಷೆ ಹೋಂದಿತ್ತು. ಆದರೆ ವಾಸ್ತವವಾಗಿ ಸೇರಿದ ಆದಾಯ ಕೇವಲ 32,019 ಕೋಟಿ ರೂ. ಮಾತ್ರ ಆಗಿತ್ತು . ಇದರಿಂದಾಗಿ ಬೆಸ್ಕಾಂಗೆ ಬರೊಬ್ಬರಿ 2,068 ಕೋಟಿ ರೂ. ಗಳಷ್ಟು ಆದಾಯದ ಕೊರತೆ ಉಂಟಾಗಿದ್ದು. ಈ ನಷ್ಟವನ್ನು ತುಂಬಿಕೊಳ್ಳಲು ಈಗ ಗ್ರಾಹಕರ ಮೇಲೆ ಹೊರೆ ಹಾಕಲಾಗುತ್ತಿದೆ ಎನ್ನ ಬಹುದಾಗಿದೆ.
ಇದರಿಂದ ಪ್ರತಿ ಯೂನಿಟ್ಗೆ 56 ಪೈಸೆ ಹೆಚ್ಚಾಗಿರುವುದರಿಂದ, ಪ್ರತಿ ತಿಂಗಳಿಗೆ ಸುಮಾರು 100 ರಿಂದ 200 ಯೂನಿಟ್ ಬಳಸುವ ಸಾಮಾನ್ಯ ಕುಟುಂಬಗಳ ಬಿಲ್ನಲ್ಲಿ ಗಮನಾರ್ಹ ಹೆಚ್ಚಾಗಲಿದೆ ಎನ್ನಬಹುದು. ಗೃಹಜ್ಯೋತಿ ಯೋಜನೆಯ ವ್ಯಾಪ್ತಿಗೆ ಬಾರದ ಅಥವಾ ಮಿತಿ ಮೀರಿದ ವಿದ್ಯುತ್ ಬಳಸುವ ಗ್ರಾಹಕರಿಗೆ ಈ ದರ ಏರಿಕೆ ನೇರವಾಗಿ ಹೆಚ್ಚು ಪೆಟ್ಟು ಬೀಳಲಿದೆ ಎನ್ನಬಹುದು.














