ಮೈಸೂರು : ಹೋಟಗಳಿ ನಗರಸಭೆಯ ಕಂದಾಯ ನಿರೀಕ್ಷಿತ ಶ್ರೀ ರಾಮಸ್ವಾಮಿ ಅವರನ್ನು ಲೋಕಾಯುಕ್ತರ ಆದೇಶದ ಮೇರೆಗೆ ಅಮಾನತ್ತಿನಲ್ಲಿಡದೆ ಅಥವಾ ಮದ್ದೂರು ಪುರಸಭೆಗೆ ವರ್ಗಾವಣೆ ಮಾಡದೆ ರಮ್ನಳ್ಳಿ ಪಟ್ಟಣ ಪಂಚಾಯಿತಿಗೆ ವರ್ಗಾವಣೆ ಮಾಡಲಾಗಿದ್ದು ಇದಕ್ಕೆ ರಾಜಕೀಯ ಪ್ರಭಾವ ಕಾರಣವಾಗಿದೆ ಎಂದು ರೋಬಿ ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಮಂಜುನಾಥ್ ಆರೋಪಿಸಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಾತನಾಡಿದ ಮಂಜುನಾಥ್ ರವರು ರಂಗಸ್ವಾಮಿ ಸತ್ಯವನ್ನು ಮರೆಮಾಚಿ ಮುಖ್ಯಮಂತ್ರಿಗಳಿಗೆ ತಮ್ಮ ಮಾಹಿತಿ ನೀಡುವ ಮೂಲಕ ರಾಜಕೀಯ ಪ್ರಭಾವವನ್ನು ಬಳಸಿ ರಮ್ಮನಹಳ್ಳಿ ಪಟ್ಟಣ ಪಂಚಾಯಿತಿಗೆ ವರ್ಗಾವಣೆ ಮಾಡಿಸಿ ಕೊಂಡಿರುವುದು ಖಂಡನೀಯವಾಗಿದೆ. ಇದಕ್ಕೂ ಮೊದಲು ಹೋಟಗಳಿ ನಗರಸಭೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ರೆವೆನ್ಯೂ ಜಾಗಗಳಿಗೆ ಅಧಿಕೃತ ಕಾತ್ತೆ ಮೊದಲಾದ ಅಕ್ರಮಗಳಲ್ಲಿ ತೊಡಗಿದ್ದರು.
ಸಾರ್ವಜನಿಕರು ಸಹ ಹಲವಾರು ದೂರುಗಳು ನೀಡಿದ್ದರು. ಆಗ ಸರ್ಕಾರವು ತನಿಖೆ ಒಳಪಡಿಸಿತು ಜೊತೆಗೆ ಲೋಕಾಯುಕ್ತರಿಂದಲೇ ಇವರ ವಾಸದ ಮನೆ ಕರ್ತವ್ಯ ನಿರ್ವಹಿಸುತ್ತಿದ್ದ ಕಚೇರಿ ಮತ್ತು ಇತರೆ ಸ್ಥಳಗಳಲ್ಲಿ ಪಂಚ ಸಾಕ್ಷಿಗಳ ಸಮಕ್ಷಮ ದಾಖಲಾತಿಗಳನ್ನು ಪರಿಶೀಲನೆ ಮಾಡಿ ಪ್ರಾರ್ಥಮಿಕ ತನಿಖೆಯಿಂದ ಇವರು ಆದಾಯಕ್ಕಿಂತ ಹೆಚ್ಚು ಅಕ್ರಮ ಸಂಪತ್ತನ್ನು ಗಳಿಸಿರುವುದು ಕಂಡುಬಂದಿರುತ್ತದೆ. ಮೈಸೂರು ಜಿಲ್ಲೆಯಲ್ಲಿಯೇ ಮುಂದುವರೆದರೆ ಸಾಕ್ಷಿ ನಾಶ ಗೊಳಿಸಬಹುದು ಎಂಬ ಶಂಕೆಯಿಂದ ಕ್ರಮಕ್ಕೆ ಆದೇಶಿಸಲಾಗಿತ್ತು.
ಆದರೆ ಮದ್ದೂರು ಪುರಸಭೆಗೆ ವರದಿ ಮಾಡಿಕೊಳ್ಳದೆ ರಾಜಕೀಯ ಪ್ರಭಾವವನ್ನು ಬಳಸಿ ರಮ್ಮನಹಳ್ಳಿ ಗೆ ವರ್ಗಾವಣೆ ಮಾಡಿಸಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಈ ಕೂಡಲೇ ರಮನಹಳ್ಳಿ ಪಟ್ಟಣ ಪಂಚಾಯಿತಿಗೆ ಆಗಿರುವ ವರ್ಗಾವಣೆ ತಡೆಯಬೇಕು ಎಂದು ರಂಗಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಅವರ ಜೊತೆ ಪತ್ರಿಕಾಗೋಷ್ಠಿಯಲ್ಲಿ ರಮೇಶ್, ಸಿದ್ದರಾಜು, ಸುಬ್ರಹ್ಮಣ್ಯ ಉಪಸ್ಥಿತರಿದ್ದರು.















