ಮನೆ ಸುದ್ದಿ ಜಾಲ 15 ವರ್ಷದ ಬಾಲಕನ ಪಾಲಿಗೆ ಯಮನಾದ ಖಾಸಗಿ ಬಸ್

15 ವರ್ಷದ ಬಾಲಕನ ಪಾಲಿಗೆ ಯಮನಾದ ಖಾಸಗಿ ಬಸ್

0

ಬೆಂಗಳೂರು : ಖಾಸಗಿ ಬಸ್ ಡಿಕ್ಕಿಯಾದ ಪರಿಣಾಮ ಬಾಲಕನೋರ್ವ ದಾರುಣವಾಗಿ ಮೃತಪಟ್ಟಿರುವ ದುರ್ಘಟನೆ ಹೆಣ್ಣೂರು-ಬಾಗಲೂರು ಮುಖ್ಯ ರಸ್ತೆಯಲ್ಲಿ ನಡೆದಿದೆ. 9ನೇ ತರಗತಿ ಪಾಸ್ ಆಗಿದ್ದ ವರುಣ್(15) ಮೃತ ದುರ್ದೈವಿ. ನೀರು ತರಲು ಹೋಗಿದ್ದ ಈತ ಮನೆಗೆ ವಾಪಸ್ ಬರುವಾಗ ಬಸ್​​ ಡಿಕ್ಕಿಯಾಗಿದ್ದು, ಘಟನಾ ಸ್ಥಳದಲ್ಲಿ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿದೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಯಲಹಂಕ ಸರ್ಕಾರಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಘಟನೆ ಸಂಬಂಧ ಖಾಸಗಿ ಬಸ್​​ನ ಹೆಣ್ಣೂರು ಸಂಚಾರಿ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮನೆಮಗನ ದಾರುಣ ಸಾವಿಗೆ ಆಕ್ರೋಶ ವ್ಯಕ್ತಪಡಿಸಿರುವ ಮೃತ ಬಾಲಕನ ಕುಟುಂಬಸ್ಥರು ಘಟನೆ ಖಂಡಿಸಿ ಹೆಣ್ಣೂರು-ಬಾಗಲೂರು ಮುಖ್ಯ ರಸ್ತೆಯನ್ನು ತಡೆದು ಪ್ರತಿಭಟನೆ ನಡೆಸಿದ ಪ್ರಸಂಗವೂ ನಡೆದಿದೆ. ರಸ್ತೆ ತಡೆ ಹಿನ್ನೆಲೆ ಬಾಗಲೂರು ರಸ್ತೆಯಲ್ಲಿ ಕಿಲೋಮೀಟರ್​ವರೆಗೆ ಟ್ರಾಫಿಕ್​ಜಾಮ್ ಉಂಟಾಗಿ ವಾಹನ ಸವಾರರು ಪರದಾಟ ನಡೆಸಬೇಕಾಯಿತು. ಆ ಬೆನ್ನಲ್ಲೇ ಸ್ಥಳೀಯರು ಮತ್ತೆ ರೋಡ್ ಬಂದ್ ಮಾಡಿ ಪ್ರತಿಭಟನೆ ನಡೆಸುವ ಸಾಧ್ಯತೆ ಇರುವ ಮಾಹಿತಿ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ಪೋಲೀಸ್ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

ಬಾಲಕ ವರುಣ್​​ ಸಾವಿಗೆ ವೈಟ್ ಟಾಪಿಂಗ್ ಕಾಮಗಾರಿಯೇ ಕಾರಣ ಎಂಬ ಆರೋಪ ಕೇಳಿಬಂದಿದೆ. ವೈಟ್ ಟಾಪಿಂಗ್ ಕಾಮಗಾರಿ ಬೇಕು ಅಂತ ಯಾರು ಕೇಳಿದ್ದು, ನಮಗೆ ಬೇಕಾಗಿರಲಿಲ್ಲ. ಚರಂಡಿ , ರೋಡ್ ಮಾಡಲು ಒಂದು ವರ್ಷ ಬೇಕು. ಅಲ್ಲದೆ ಕುಡಿಯುವ ನೀರಿನ ವ್ಯವಸ್ಥೆ ಊರಿನ ಒಳಗೆ ಇರಬೇಕು. ಅದನ್ನು ಬಿಟ್ಟು ಊರಿನ ಹೊರಗೆ ಮಾಡಲಾಗಿದೆ. ಇದರಿಂದ ಮಕ್ಕಳು ರೋಡ್ ಕ್ರಾಸ್ ಮಾಡಿಕೊಂಡು ನೀರು ತರಲು ಹೋಗ್ತಾರೆ.

ಕಾಮಗಾರಿ ಹಿನ್ನೆಲೆ ಟ್ರಾಫಿಕ್​​ ಜಾಮ್​​ ಉಂಟಾಗುತ್ತಿರುವ ಕಾರಣ ವೇಗವಾಗಿ ತೆರಳಲು ವಾಹನಗಳ ಚಾಲರು ಯತ್ನಿಸುತ್ತಿರೋದೇ ಅಪಘಾತಗಳಿಗೆ ಕಾರಣವಾಗುತ್ತಿದೆ. ತಂದೆಗೆ ಆರೋಗ್ಯ ಸರಿಯಿಲ್ಲದ ಕಾರಣ ಮನೆಗೆ ನೀರು ತರಲು ಆರ್ಓ ಪ್ಲಾಂಟ್​​ಗೆ ವರುಣ್ ತೆರಳಿದ್ದ ವರುಣ್​​ ಕೂಡ ಈಗ ಮೃತಪಟ್ಟಿದ್ದಾನೆ ಎಂದು ಪೋಷಕರು ಮತ್ತು ಸ್ಥಳೀಯರು ಆರೋಪಿಸಿದ್ದಾರೆ.