ಮನೆ ದೇವರನಾಮ ಮಂತ್ರ ಪಠಿಸಿ ರಾಘವೇಂದ್ರ ಸ್ವಾಮಿಯ ಕೃಪೆಗೆ ಪಾತ್ರರಾಗಿ

ಮಂತ್ರ ಪಠಿಸಿ ರಾಘವೇಂದ್ರ ಸ್ವಾಮಿಯ ಕೃಪೆಗೆ ಪಾತ್ರರಾಗಿ

0

ಶ್ರೀ ರಾಘವೇಂದ್ರ ಮೂಲ ಮಂತ್ರವನ್ನು ಜಪಿಸುವುದರಿಂದ ಅನೇಕ ರೀತಿಯ ಪ್ರಯೋಜನಗಳನ್ನು ನಾವು ಪಡೆದುಕೊಳ್ಳಬಹುದು. ಈ ಮೂಲ ಮಂತ್ರವು ಶ್ರೀ ರಾಘವೇಂದ್ರರ ಆಶೀರ್ವಾದವನ್ನು ಪಡೆಯಲು ಅತ್ಯಂತ ಶಕ್ತಿಯುತವಾದ ಮಂತ್ರವೆಂದು ಹೇಳಲಾಗುತ್ತದೆ. ಶ್ರೀ ರಾಘವೇಂದ್ರ ಮೂಲ ಮಂತ್ರವನ್ನು ಯಾವುದೇ ಸಮಸ್ಯೆಗಳಿಗಾಗಿ ಯಾರು ಬೇಕಾದರೂ ಜಪಿಸಬಹುದು.

ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮರತಾಯ ಚ!
ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ !!

ಇದರ ಅರ್ಥ: ಸತ್ಯ ಹಾಗೂ ಧಾರ್ಮಿಕ ಮಾರ್ಗಗಳಲ್ಲಿ ಸದಾ ನಿರತರಾದ, ಭಜಿಸಿದವರಿಗೆ ಕಲ್ಪವೃಕ್ಷ ನಮಿಸಿದವರಿಗೆ ಕಾಮಧೇನಿನಂತೆ ಬೇಡಿದ್ದನ್ನು ನೀಡುವ ಪೂಜ್ಯರಾದ ಶ್ರೀ ರಾಘವೇಂದ್ರ ಗುರುಗಳಿಗೆ ನಮಸ್ಕಾರಗಳು. ಅನ್ನುವ ಅರ್ಥವನ್ನು ನೀಡುತ್ತದೆ.

ಬೆಳಗ್ಗೆ ಎದ್ದು ಸ್ನಾನ ಮಾಡಿ ಪೂಜೆ ಮಾಡುವಾಗ ರಾಯರ ಈ ಒಂದು ಚಿಕ್ಕ ಮಂತ್ರವನ್ನು ಪಠಿಸಿ ಮಾಡುವಂತ ಕೆಲಸಕ್ಕೆ ಕೈ ಹಾಕುವುದರಿಂದ ವ್ಯಾಪಾರ ವ್ಯವಹಾರದಲ್ಲಿ ಉತ್ತಮವಾದ ಯಶಸನ್ನು ಕಾಣಬಹುದು.