ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಆಲದಕಟ್ಟಿ ಗ್ರಾಮದಲ್ಲಿ ವಿಡಿಯೋ ಕಾಲ್ನಲ್ಲಿ ಮಗುವಿನ ಮುಖ ತೋರಿಸಿಲ್ಲ ಎಂಬ ಕಾರಣಕ್ಕೆ ಅಳಿಯನೆ ಅತ್ತೆಗೆ ಚಾಕು ಇರಿದ ಘಟನೆ ನಡೆದಿದೆ ಎನ್ನಲಾಗಿದೆ.
ಅರವಿಂದ್ ಗವಳಿ(26) ಎಂಬಾತನೇ ಆ ಪಾಪಿ ಅಳಿಯ. ಚಾಕು ಇರಿತಕ್ಕೊಳಗಾದ ಅತ್ತೆ ಮಹಾದೇವಿ ಕರಿಗಾರ (45) ಬೆಳಗಾವಿ ಬಿಮ್ಸ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಈ ಕುರಿತು ತವರು ಮನೆಯಲ್ಲಿದ್ದ ಹೆಂಡತಿಗೆ ಗಂಡ ಅರವಿಂದ್ ಕಿರುಕುಳ ನೀಡುತ್ತಿದ್ದ ಎಂಬ ಆರೋಪ ಕೇಳಿ ಬಂದಿದೆ. ಇವರು ಒಂದೂವರೆ ವರ್ಷದ ಹಿಂದೆ ಹುಬ್ಬಳ್ಳಿ ತಾಲೂಕಿನ ಮಂಟೂರ ಗ್ರಾಮದ ಅರವಿಂದ್ ಎಂಬಾತನೊಂದಿಗೆ ಮಹಾದೇವಿ ಮಗಳ ಮದುವೆ ಮಾಡಿಸಿದ್ದರು. ಎರಡು ತಿಂಗಳ ಹಿಂದೆಯಷ್ಟೇ ಮಗಳಿಗೆ ಹೆರಿಗೆಯಾಗಿತ್ತು. ಹೀಗಾಗಿ ಅರವಿಂದ್ ಪತ್ನಿ ತವರಿನಲ್ಲಿದ್ದರು. ಪತ್ನಿ ತವರಿನಲ್ಲಿದ್ರೂ ಅರವಿಂದ್ ಪದೇ ಪದೇ ವಿಡಿಯೋ ಕಾಲ್ ಮಾಡಿ ಹೆಂಡ್ತಿ ಮತ್ತು ಮಗುವಿನ ಮುಖ ತೋರಿಸುವಂತೆ ಕಿರುಕುಳ ಕೊಡುತ್ತಿದ್ದನು ಎಂದು ತಿಳಿದುಬಂದಿದೆ.
ಅಳಿಯನ ಪದೇ ಪದೇ ವಿಡಿಯೋ ಕಾಲ್ಗೆ ಬೇಸತ್ತ ಅತ್ತೆ ಮಹಾದೇವಿ, ಕೆಲಸ ಬಿಟ್ಟು ಮೊಬೈಲ್ ಹಿಡಿದುಕೊಂಡು ಕುಳಿತುಕೊಳ್ಳಲು ಆಗಲ್ಲ. ದಿನಕ್ಕೆ ಒಂದು ಬಾರಿ ಮಾತ್ರ ವಿಡಿಯೋ ಕಾಲ್ ಮಾಡುವಂತೆ ಹೇಳಿದ್ದರು. ಈ ವೇಳೆ ಕೋಪಗೊಂಡ ಅರವಿಂದ್, ಅತ್ತೆಗೆ ಅವಾಚ್ಯ ಪದಗಳಿಂದ ನಿಂದಿಸಿದ್ದಾನೆ. ಇದಕ್ಕೆ ಪ್ರತಿಯಾಗಿ ನಮ್ಮೂರಿಗೆ ಬಂದ್ರೆ ನಿನ್ನನ್ನು ಸುಮ್ಮನೇ ಬಿಡಲ್ಲ ಎಂದು ಮಹಾದೇವಿ ಗದರಿದ್ದರು ಎನ್ನಲಾಗಿದೆ.
ಹೀಗಾಗಿ ಈ ಜಗಳದಿಂದ ಕೆರಳಿದ ಅರವಿಂದ್ ಗ್ರಾಮಕ್ಕೆ ಬಂದು ಅತ್ತೆಗೆ ಚಾಕು ಇರಿದು ಪರಾರಿಯಾಗಿ, ಇಂದು ಜೈಲು, ನಾಳೆ ಬೆಲ್ ನಿನ್ನ ಬಿಡಲ್ಲ ಎಂದು ವಾಟ್ಸಪ್ ಸ್ಟೇಟಸ್ ಹಾಕಿಕೊಂಡಿದ್ದನು. ಇನ್ನು ಚಾಕು ಇರಿತಕ್ಕೊಳಗಾಗಿದ್ದ ಮಹಾದೇವಿ ಅವರನ್ನು ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರೆ ಎನ್ನಲಾಗಿದೆ. ಈ ಪ್ರಕರಣ ಕುರಿತ್ತಾಗಿ ಮುರಗೋಡ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ ಎನ್ನಬಹುದು.
















