ಬಳ್ಳಾರಿ : ಜಿಲ್ಲೆಯ ಸಿರಗುಪ್ಪ ತಾಲೂಕಿನ ನಿಟ್ಟೂರು ಗ್ರಾಮದ ಸುಕ್ರದಪ್ಪನ ಬೆಟ್ಟದ ಹೊಲವೊಂದರಲ್ಲಿ ಮೌರ್ಯರ ಆಳ್ವಿಕೆಯ ಅಪರೂಪದ ಬಂಡೆಗಲ್ಲು ಶಾಸನ ಪತ್ತೆಯಾಗಿದೆ. ಧಾರವಾಡದ ಲಿಪಿತಜ್ಞ ಮಾರುತಿ ಭಜಂತ್ರಿ ನೇತೃತ್ವದ ತಂಡದಿಂದ ಬಂಡೆಗಲ್ಲು ಶಾಸನ ಪತ್ತೆಯಾಗಿದೆ. ಇತಿಹಾಸ ಸಂಶೋಧಕ ಗಂಗಾವತಿಯ ಶರಣಬಸಪ್ಪ ಕೋಲ್ಕಾರ್ ಮಾರ್ಗದರ್ಶನದಲ್ಲಿ ಶಾಸನ ಅಧ್ಯಯನ ನಡೆಸಲಾಗಿದೆ.
ಬಂಡೆಯೊಂದರ ಮೇಲೆ ಪ್ರಾಚೀನ ಲಿಪಿಯಲ್ಲಿ ಏಳು ಸಾಲುಗಳನ್ನು ಬರೆಯಲಾಗಿದ್ದು, ಮೌರ್ಯರ ಆಳ್ವಿಕೆಯನ್ನು ಒಳಗೊಂಡಿದೆ. ಇದನ್ನು 7ನೇ ಶತಮಾನದ ಬಾದಾಮಿ ಚಾಲುಕ್ಯರ ಕಾಲದಿಂದ ರಾಷ್ಟ್ರಕೂಟರ ಕಾಲಘಟ್ಟಕ್ಕೆ ಸೇರಿದ್ದು ಎಂದು ಅಂದಾಜಿಸಲಾಗಿದೆ.
ಈ ಹಿಂದೆ ಇದೇ ನಿಟ್ಟೂರು ಪ್ರದೇಶದಲ್ಲಿ ಅಶೋಕ ಶಿಲಾಶಾಸನ ಪತ್ತೆಯಾಗಿತ್ತು. ಅಶೋಲ ಶಿಲಾಶಾಸನ ಪತ್ತೆಯಾದ ಒಂದು ಕಿ.ಮೀ ದೂರದಲ್ಲಿ ಇದೀಗ ಬಂಡೆಗಲ್ಲು ಶಾಸನ ಪತ್ತೆಯಾಗಿದೆ.

















