ಕಾರಿನಲ್ಲಿ ಪ್ರಯಾಣಿಸುವಾಗ ಫಾಸ್ಟ್‌ಟ್ಯಾಗ್ ಅನ್ನು ವಿಂಡ್‌ಶೀಲ್ಡ್‌ಗೆ (ಮುಂಭಾಗದ ಗಾಜು) ಅಂಟಿಸದೆ, ಟೋಲ್ ಪ್ಲಾಜಾ ಬಂದಾಗ ಕೈಯಲ್ಲಿ ಹಿಡಿದು ತೋರಿಸುತ್ತಿದ್ದೀರಾ? ಹಾಗಿದ್ದರೆ ಈ ಸುದ್ದಿ ನಿಮಗಾಗಿ. ಇಂತಹ ಚಾಲಕರ ವಿರುದ್ಧ ಈಗ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ. ಇನ್ಮುಂದೆ ಈ ರೀತಿ ಮಾಡುವವರ ಫಾಸ್ಟ್‌ಟ್ಯಾಗ್ ಅನ್ನು ನೇರವಾಗಿ ‘ಬ್ಲ್ಯಾಕ್‌ಲಿಸ್ಟ್’ ಮಾಡಲಾಗುವುದು ಎಂದು ಎಚ್ಚರಿಸಕೆ ನೀಡಿದೆ ಎನ್ನಬಹುದು.
ಟೋಲ್ ಪ್ಲಾಜಾಗಳಲ್ಲಿ ಪಾರದರ್ಶಕತೆ ಹೆಚ್ಚಿಸಲು ಮತ್ತು ವಂಚನೆ ತಡೆಯಲು NHAI ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ನಿಯಮದ ಪ್ರಕಾರ, ಫಾಸ್ಟ್‌ಟ್ಯಾಗ್ ಅನ್ನು ಕಾರಿನ ವಿಂಡ್‌ಶೀಲ್ಡ್ ಮೇಲೆ ಅಂಟಿಸುವುದು ಕಡ್ಡಾಯ. ಯಾರು ಉದ್ದೇಶಪೂರ್ವಕವಾಗಿ ಅದನ್ನು ಅಂಟಿಸದೆ ಕೈಯಲ್ಲಿ ಹಿಡಿದು ತೋರಿಸುತ್ತಾರೋ, ಅಂತಹವರನ್ನು ಗುರುತಿಸಿ ಅವರ ಫಾಸ್ಟ್‌ಟ್ಯಾಗ್ ನಿಷ್ಕ್ರಿಯಗೊಳಿಸಲಾಗುತ್ತದೆ. ಇದರಿಂದಾಗಿ ನೀವು ಮುಂದಿನ ಬಾರಿ ಪ್ರಯಾಣಿಸುವಾಗ ದುಪ್ಪಟ್ಟು ಟೋಲ್ ಅಥವಾ ಕಾನೂನು ಕ್ರಮ ಎದುರಿಸಬೇಕಾಗಬಹುದು ಎನ್ನಬಹುದು.
ವಿಂಡ್‌ಶೀಲ್ಡ್ ಮೇಲೆ ಫಾಸ್ಟ್‌ಟ್ಯಾಗ್ ಇದ್ದಾಗ ಅಲ್ಲಿನ ಕ್ಯಾಮೆರಾಗಳು ಮತ್ತು ಸೆನ್ಸರ್‌ಗಳು ತಕ್ಷಣವೇ ಅದನ್ನು ಸ್ಕ್ಯಾನ್ ಮಾಡುತ್ತವೆ. ಇದರಿಂದ ವಾಹನ ನಿಲ್ಲಿಸದೆ ಸಂಚರಿಸಲು ಅನುಕೂಲವಾಗುತ್ತದೆ. ಫಾಸ್ಟ್‌ಟ್ಯಾಗ್ ಗಾಜಿಗೆ ಅಂಟಿಸದೆ ಇದ್ದರೆ, ಅದನ್ನು ಒಂದಕ್ಕಿಂತ ಹೆಚ್ಚು ವಾಹನಗಳಿಗೆ ಬಳಸುವ ಸಾಧ್ಯತೆ ಇರುತ್ತದೆ. ಇಂತಹ ಅಕ್ರಮಗಳನ್ನು ತಡೆಯಲು NHAI ಈಗ ಈ ಕಠಿಣ ಹೆಜ್ಜೆ ಇಟ್ಟಿದೆ. ಕೈಯಲ್ಲಿ ಫಾಸ್ಟ್‌ಟ್ಯಾಗ್ ತೋರಿಸುವುದರಿಂದ ಟೋಲ್ ವ್ಯವಸ್ಥೆಯಲ್ಲಿ ಅಡಚಣೆಯಾಗಿ ವಿಳಂಬ ಉಂಟಾಗುತ್ತದೆ. ಇದರಿಂದ NHAI ಚಾಲಕರಿಗೆ ಕೆಲವು ಸುರಕ್ಷತಾ ಕ್ರಮಗಳನ್ನೂ ಸೂಚಿಸಿದೆ. ಆಮಿಷ ತೋರಿಸುವ ಫಾಸ್ಟ್‌ಟ್ಯಾಗ್ ಮಾರಾಟದ ನಕಲಿ ವೆಬ್‌ಸೈಟ್‌ಗಳ ಬಗ್ಗೆ ಜಾಗರೂಕರಾಗಿರಿ. ಫಾಸ್ಟ್‌ಟ್ಯಾಗ್ ರೀಚಾರ್ಜ್ ಅಥವಾ ಇತರ ಕೆಲಸಗಳಿಗಾಗಿ ಕೇವಲ ‘Rajmargyatra’ ಆಪ್ ಅಥವಾ ಬ್ಯಾಂಕ್‌ಗಳ ಅಧಿಕೃತ ವೆಬ್‌ಸೈಟ್ ಮಾತ್ರ ಬಳಸಿ. ನಿಮ್ಮ ಓಟಿಪಿ (OTP), ಕಾರ್ಡ್ ವಿವರ ಅಥವಾ ಲಾಗಿನ್ ಪಾಸ್‌ವರ್ಡ್ ಅನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಅಪರಿಚಿತ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಬೇಡಿ. ಒಟ್ಟಾರೆಯಾಗಿ, ನಿಮ್ಮ ಫಾಸ್ಟ್‌ಟ್ಯಾಗ್ ಬ್ಲ್ಯಾಕ್‌ಲಿಸ್ಟ್ ಆಗಬಾರದು ಎಂದರೆ ಇಂದು ಅಥವಾ ಈಗಲೇ ಅದನ್ನು ನಿಮ್ಮ ಕಾರಿನ ಮುಂಭಾಗದ ಗಾಜಿನ ಮೇಲೆ ಸರಿಯಾದ ಕ್ರಮದಲ್ಲಿ ಅಂಟಿಸಿಕೊಳ್ಳಿ ಎಂದು ಮಾಹಿತಿ ನೀಡಿದ್ದಾರೆ ಎನ್ನಲಾಗುತ್ತಿದೆ.

















