ಮೈಸೂರು : ಕೆಆರ್ ನಗರ ಪಟ್ಟಣದ ಸಿಎಂ ರಸ್ತೆಯಲ್ಲಿರುವ ರಾಘವೇಂದ್ರ ಕ್ಲಿನಿಕ್ ನಲ್ಲಿ ವೈದ್ಯರು ಕೊಟ್ಟ ಚುಚ್ಚು ಮದ್ದಿನಿಂದ ವೃದ್ಧರೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ. ನಗರದ ಶ್ರೀ ರಾಘವೇಂದ್ರ ಕ್ಲಿನಿಕ್ ವೈದ್ಯರಾದ ಡಾಕ್ಟರ್ ಎಚ್ ಜಿ ಶಂಕರ್ ನೀಡಿದ ಚುಚ್ಚುಮದ್ದಿನಿಂದ ಪಟ್ಟಣದ ಸಮೀಪದ ಕಾಳೇನಹಳ್ಳಿ ಗ್ರಾಮದ ಪೌರಕಾರ್ಮಿಕರ ಕಾಲೋನಿ ನಿವಾಸಿ ರಾಮಯ್ಯ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಈ ಹಿಂದೆ ನೀಡಿರುವ ಔಷಧಿ ಚೀಟಿ ಮತ್ತು ಮಾತ್ರೆಗಳನ್ನು ಪರಿಶೀಲಿಸಿ ಚಿಕಿತ್ಸೆ ನೀಡುವಂತೆ ತಿಳಿಸಿದರು ವೈದ್ಯರು ಯಾವುದನ್ನು ಪರಿಶೀಲಿಸದೆ ಚುಚ್ಚು ಮದ್ದು ನೀಡಿದ ಪರಿಣಾಮ ರಾಮಯ್ಯ ರವರು ಸಾವನ್ನಪ್ಪಿದ್ದಾರೆ ಎಂದು ಅವರ ಸಂಬಂಧಿಕರು ಆರೋಪಿಸಿದ್ದಾರೆ.
ಪಟ್ಟಣದಲ್ಲಿ ಪರವಾನಗಿ ಇಲ್ಲದೆ ತಲೆಯೆತ್ತಿರುವ ಕ್ಲಿನಿಕ್ ಗಳಲ್ಲಿ ಆಯುರ್ವೇದ ವೈದ್ಯರು ಎಂಬಿಬಿಎಸ್ ವೈದ್ಯರಂತೆ ಆಲೋಪತಿ ಚಿಕಿತ್ಸೆ ನೀಡುತ್ತಿದ್ದಾರೆ. ಇದರಿಂದ ಬಡವರು ಚಿಕಿತ್ಸೆ ಪಡೆಯಲು ಬಂದು ಬಲಿಯಾಗುತ್ತಿದ್ದಾರೆ ಎಂದು ಆದಿ ಜಾಂಬವ ಸಂಘದ ಅಧ್ಯಕ್ಷ ಎಂ ಲೋಕೇಶ್ ಖಂಡಿಸಿದ್ದಾರೆ ಎಂದು ತಿಳಿದುಬಂದಿದೆ.

















