ಬಂಗಾಳದ ಪಾಲಿಟಿಕ್ಸ್ ಅಂದ್ರೆನೇ ಹಾಗೆ… ಅದು ಬರೀ ವೋಟು ಹಾಕಿಸ್ಕೊಳೋ ಆಟ ಅಲ್ಲ. ಅಲ್ಲಿನ ಗಾಳೀಲಿ ರಕ್ತದ ವಾಸನೆ ಜಾಸ್ತಿ. ಇಂಥಾ ಕ್ರೂರ, ಕತ್ತು ಕೊಯ್ಯೋ ರಾಜಕೀಯದ ಮಧ್ಯೆ, ಒಬ್ಬ ಪ್ರಭಾವಿ ನಾಯಕನ ಹಿಂದೆ ಶಿಸ್ತಿನ ಸಿಪಾಯಿಯಂತೆ ನಿಂತಿದ್ದ ಆ ಮನುಷ್ಯನ ಹೆಸರು… ಚಂದ್ರನಾಥ್ ರಥ್. ಮೂಲತಃ ಪೂರ್ವ ಮೇದಿನಿಪುರದ ಚಂದಿಪುರದ ಹುಡುಗ. ಓದಿದ್ದು, ರಹರಾ ರಾಮಕೃಷ್ಣ ಮಿಷನ್ನಲ್ಲಿ. ಅಲ್ಲಿ ಕಲಿತ ಶಿಸ್ತು, ಆಧ್ಯಾತ್ಮನೇ ಈತನ ಬದುಕಿನ ಫೌಂಡೇಶನ್ ಆಗಿತ್ತು.
ಪಾಲಿಟಿಕ್ಸ್ಗೆ ಬರೋಕು ಮುಂಚೆ ಈ ಮನುಷ್ಯ ಮಾಡ್ತಿದ್ದದ್ದೇನು ಗೊತ್ತಾ? ಇಂಡಿಯನ್ ಏರ್ ಫೋರ್ಸ್ (IAF) ನಲ್ಲಿ ಬರೋಬ್ಬರಿ 20 ವರ್ಷಗಳ ಕಾಲ ದೇಶ ಸೇವೆ! ಏರ್ ಫೋರ್ಸ್ ಅಂದ್ರೆ ಬರೀ ಆಕಾಶದಲ್ಲಿ ಫೈಟರ್ ಜೆಟ್ ಹಾರಿಸೋದಷ್ಟೇ ಅಲ್ಲ. ಅಲ್ಲಿ ಇಂಟೆಲಿಜೆನ್ಸ್, ಲಾಜಿಸ್ಟಿಕ್ಸ್, ಸ್ಟ್ರಾಟಜಿ ಮಾಡೋಕೆ ಅಂತಾನೇ ಒಂದು ದೊಡ್ಡ ಟೀಮ್ ಇರುತ್ತೆ. ಚಂದ್ರನಾಥ್ ಸ್ಪೆಷಾಲಿಟಿನೇ ಅದು… ಅದೇ ‘ಶ್ಯಾಡೋ ವರ್ಕ್’! ನೆರಳಿನ ತರಹ ಕೆಲಸ ಮಾಡೋದು.
20 ವರ್ಷ ಏರ್ ಫೋರ್ಸ್ನಲ್ಲಿದ್ರೂ ಈ ಮನುಷ್ಯ ಯಾವತ್ತೂ ಲೈಮ್ ಲೈಟ್ಗೆ ಬಂದವನಲ್ಲ. ಯಾವ ನ್ಯೂಸ್ ಪೇಪರ್ನಲ್ಲೂ ಇವನ ಹೆಸರು ಪ್ರಿಂಟ್ ಆಗಿರಲಿಲ್ಲ. ಅಂದ್ರೆ, ಎಂಥಾ ಲೆವೆಲ್ಲಿನ ಕಾನ್ಫಿಡೆನ್ಷಿಯಲ್ ಮಿಷನ್ಗಳಲ್ಲಿ ಇವನಿದ್ದ ಅಂತ ನೀವೇ ಊಹಿಸಿ. ತಾನು ಮಾಡೋ ಕೆಲಸ ಪಕ್ಕದಲ್ಲಿ ಕೂತಿರೋನಿಗೂ ಗೊತ್ತಾಗಬಾರದು… ಆ ರೇಂಜಿಗೆ ಕೆಲಸ ಮಾಡೋದನ್ನ ಸೈನ್ಯದಲ್ಲೇ ಕರಗತ ಮಾಡಿಕೊಂಡಿದ್ದ.
ಯುದ್ಧದ ಸಮಯದಲ್ಲಿ ಆಪರೇಷನ್ ಮಿಷನ್ಗಳಲ್ಲಿ ಬ್ಯಾಕ್ಎಂಡ್ ಸ್ಟ್ರಾಟಜಿಸ್ಟ್ಗಳ ಪಾತ್ರ ಎಷ್ಟು ಅಪಾಯಕಾರಿ, ಇಂಥಾ ಸ್ಟ್ರಾಟಜಿಸ್ಟ್ಗಳ ರೋಲ್ ಎಷ್ಟಿರುತ್ತೆ ಅಂತ ಮಿಲಿಟರಿ ಮಂದಿಗೆ ಮಾತ್ರ ಗೊತ್ತು. ಡೈರೆಕ್ಟಾಗಿ ಗನ್ ಹಿಡಿದು ನಿಲ್ಲದಿದ್ರೂ, ಬ್ಯಾಕ್ ಎಂಡ್ನಲ್ಲಿ ನಿಂತು ಪ್ಲಾನ್ ಮಾಡೋದು ಇದೆಯಲ್ಲ… ಅದು ಹೈ-ಟೆನ್ಷನ್ ಕೆಲಸ. ಆ ಟೆನ್ಷನ್ ಹ್ಯಾಂಡಲ್ ಮಾಡಿದ್ದಕ್ಕೇ, ಈ ಬಂಗಾಳದ ರಕ್ತಸಿಕ್ತ ರಾಜಕಾರಣದಲ್ಲಿ ಅವನು ಅಷ್ಟು ಕೂಲ್ ಆಗಿ ಇರೋಕೆ ಸಾಧ್ಯವಾಗಿದ್ದು. ಅಲ್ಲಿಂದ ರಿಟೈರ್ ಆದ್ಮೇಲೆ ಸ್ವಲ್ಪ ದಿನ ಕಾರ್ಪೊರೇಟ್ ಕಂಪನಿಗಳಲ್ಲಿ ಕೆಲಸ ಮಾಡಿದ.
ಆಮೇಲೆ ಶುರುವಾಗಿದ್ದೇ ನೋಡಿ ಅಸಲಿ ಆಟ! 2019 ರ ಸುಮಾರಿಗೆ ಪಶ್ಚಿಮ ಬಂಗಾಳದ ಪ್ರಭಾವಿ ನಾಯಕ ಶುಭೇಂದು ಅಧಿಕಾರಿ ಕಣ್ಣಿಗೆ ಬೀಳ್ತಾನೆ. ಅವಾಗ ಅಧಿಕಾರಿ ಮಮತಾ ಬ್ಯಾನರ್ಜಿ ಕ್ಯಾಬಿನೆಟ್ನಲ್ಲಿ ಮಿನಿಸ್ಟರ್. ಆಗಿನಿಂದಲೇ ಶುಭೇಂದುಗೆ ಇವನು ಪಕ್ಕಾ ನಂಬಿಕಸ್ತ. ಶುಭೇಂದು ಟಿಎಂಸಿ ಬಿಟ್ಟು ಬಿಜೆಪಿ ಸೇರಿದಾಗ, ಈತನೂ ಜೊತೆಯಲ್ಲೇ ಹೋದ. ಆಫೀಶಿಯಲ್ ಆಗಿ ಇವನನ್ನ ಅಧಿಕಾರಿಯ ‘ಎಕ್ಸಿಕ್ಯೂಟಿವ್ ಅಸಿಸ್ಟೆಂಟ್’ ಅಂತಿದ್ರೂ, ಅಸಲಿಗೆ ಇವನೇ ಆ ಇಡೀ ಆಫೀಸಿನ ‘ಮಾಸ್ಟರ್ ಮೈಂಡ್’..!
ಬಂಗಾಳದ ಎಲೆಕ್ಷನ್ನಲ್ಲಿ ಬರೀ ಮೈಕ್ ಹಿಡಿದು ಭಾಷಣ ಬಿಗಿದ್ರೆ ಗೆಲ್ಲಕ್ಕಾಗಲ್ಲ. ಅಲ್ಲಿ ‘ಬೂತ್’ ಹಿಡಿಯೋನೇ ಅಸಲಿ ಕಿಂಗ್! ಈ ಚಂದ್ರನಾಥ್ ರಥ್ ತಲೆಯಲ್ಲಿ ಪಶ್ಚಿಮ ಬಂಗಾಳದ ಪ್ರತಿಯೊಂದು ಹಳ್ಳಿಯ, ಪ್ರತಿಯೊಂದು ಬೂತ್ನ ಡೇಟಾ ಸೇವ್ ಆಗಿತ್ತು. ಯಾವ ಬೂತ್ನಲ್ಲಿ ಯಾವ ವೋಟರ್ನ ಹೇಗೆ ಬುಟ್ಟಿಗೆ ಹಾಕೋದು? ಯಾವ ಲೋಕಲ್ ಲೀಡರ್ಗೆ ಎಷ್ಟು ಪವರ್ ಇದೆ? ಇದೆಲ್ಲಾ ಇವನ ಫಿಂಗರ್ ಟಿಪ್ಸ್ನಲ್ಲಿತ್ತು. ಇದೇ ಶುಭೇಂದು ಅಧಿಕಾರಿಯ ಅತಿದೊಡ್ಡ ಶಕ್ತಿ. ಚಂದ್ರನಾಥ್ನ ಮುಗಿಸೋದು ಅಂದ್ರೆ, ಅಧಿಕಾರಿಯ ಆ ದೊಡ್ಡ ಡೇಟಾಬೇಸ್, ಆ ನೆಟ್ವರ್ಕ್ ಕನೆಕ್ಷನ್ನೇ ಕಟ್ ಮಾಡಿದಂಗೆ! ಈ ‘ಬೂತ್ ಲೆವೆಲ್ ಸೈನ್ಸ್’ ಅಲ್ಲಿ ಬೇರೆ ಯಾರಿಗೂ ಗೊತ್ತಿರಲಿಲ್ಲ.
ಇಷ್ಟೇ ಅಲ್ಲ… ದೆಹಲಿಯಲ್ಲಿ ಕೂತಿರೋ ಅಮಿತ್ ಶಾ, ಜೆ.ಪಿ. ನಡ್ಡಾ ಟೀಮ್ಗೂ ಮತ್ತು ಬಂಗಾಳದಲ್ಲಿರೋ ಶುಭೇಂದು ಅಧಿಕಾರಿಗೂ ಮಧ್ಯೆ ನಡೀತಿದ್ದ ಎಷ್ಟೋ ಹೈ-ಕಾನ್ಫಿಡೆನ್ಷಿಯಲ್ ಮಾತುಕತೆಗಳಿಗೆ ಈ ಚಂದ್ರನಾಥ್ ಒಂಥರಾ ಸೇತುವೆ. ಯಾವ ಫೋನ್ ಕಾಲ್ ಇಲ್ಲ, ಇಮೇಲ್ ಟ್ರೇಸ್ ಇಲ್ಲ… ಆದ್ರೂ ಮೆಸೇಜ್ ಪಾಸ್ ಮಾಡೋದ್ರಲ್ಲಿ ಇವನು ಪಕ್ಕಾ ಎಕ್ಸ್ಪರ್ಟ್. ದೆಹಲಿಯಿಂದ ಬರೋ ಸೀಕ್ರೆಟ್ ಸ್ಟ್ರಾಟಜಿಗಳನ್ನ ಬಂಗಾಳದ ನೆಲದ ಮೇಲೆ ಇಂಪ್ಲಿಮೆಂಟ್ ಮಾಡೋ ಹೊಣೆ ಇವನದ್ದೇ ಆಗಿತ್ತು.
ಟಿಎಂಸಿಯಲ್ಲಿ ಯಾರ್ಯಾರಿಗೆ ಅಸಮಾಧಾನ ಇದೆ ಅಂತ ಹುಡುಕಿ, ಅವರ ಜೊತೆ ಸೈಲೆಂಟ್ ಆಗಿ ಮಾತಾಡಿ, ಬಿಜೆಪಿಗೆ ಎಳೆತರೋ ದೊಡ್ಡ ಜವಾಬ್ದಾರಿ ಇವನ ಮೇಲಿತ್ತು. ಶುಭೇಂದು ಸ್ಟೇಜ್ ಮೇಲೆ ಓಪನ್ ಆಗಿ ಮಾತಾಡಿದ್ರೆ, ಚಂದ್ರನಾಥ್ ಬ್ಯಾಕ್ ರೂಂನಲ್ಲಿ ಕೂತು ಡೀಲ್ ಫೈನಲ್ ಮಾಡ್ತಿದ್ದ. ಅನೇಕ ಟಿಎಂಸಿ ನಾಯಕರು ಬಿಜೆಪಿ ಸೇರೋ ಪ್ಲಾನ್ನಲ್ಲಿದ್ದಾರೆ ಅನ್ನೋ ಗಾಸಿಪ್ ಇತ್ತಲ್ಲ… ಅದಕ್ಕೆಲ್ಲಾ ಇವನೇ ಸೂತ್ರಧಾರಿ. ಆ ಬಂಡಾಯದ ಬೆಂಕಿ ಆರಿಸೋಕೆ ಶತ್ರುಗಳು ಹಾಕಿದ್ದೇ, ಈ ಮಾಸ್ಟರ್ಮೈಂಡ್ ಮರ್ಡರ್ ಸ್ಕೆಚ್!
ದಿನಾಂಕ: ಮೇ 6, 2026. ಬುಧವಾರ.ಸಮಯ:ರಾತ್ರಿ ಸುಮಾರು 10:15 ರಿಂದ 10:30 ರ ಹೊತ್ತು.ಜಾಗ:ನಾರ್ತ್ 24 ಪರಗಣ ಜಿಲ್ಲೆಯ, ಮದ್ಯಾಮಗ್ರಾಮ್ ಬಳಿಯ ದೋಹರಿಯಾ ಜಂಕ್ಷನ್. ಚಂದ್ರನಾಥ್ ಮನೆಗೆ ಬರೀ 100-200 ಮೀಟರ್ ದೂರ! ಚಂದ್ರನಾಥ್ ತನ್ನ ಬಿಳಿ ಬಣ್ಣದ ಸ್ಕಾರ್ಪಿಯೋ ಕಾರಲ್ಲಿ (ಸ್ಟಿಕ್ಕರ್ ಇದ್ದ ಕಾರು) ಮನೆಗೆ ಬರ್ತಾ ಇದ್ದ. ಡ್ರೈವರ್ ಬುದ್ಧದೇವ್ ಬೇರಾ ಕಾರು ಓಡಿಸ್ತಾ ಇದ್ದ. ಮನೆ ಹತ್ರ ಬರ್ತಿದ್ದಂಗೆ, ರಸ್ತೆಯಲ್ಲಿ ಒಂದು ಸಣ್ಣ ಬಿಳಿ ಬಣ್ಣದ ಕಾರು ಅಡ್ಡಲಾಗಿ ಬಂದು ನಿಲ್ಲುತ್ತೆ.
ಸ್ಕಾರ್ಪಿಯೋ ಬ್ರೇಕ್ ಹಾಕ್ತಿದ್ದಂಗೆ, ಹಿಂದಿನಿಂದ, ಪಕ್ಕದಿಂದ ಬೈಕ್ನಲ್ಲಿ ಬಂದ ಕೆಲವು ಹುಡುಗರು ಕಾರನ್ನ ಸುತ್ತುವರಿತಾರೆ. ಏನಾಗ್ತಿದೆ ಅಂತ ಚಂದ್ರನಾಥ್ ಯೋಚಿಸೋ ಗ್ಯಾಪಲ್ಲಿ, ಲೆಫ್ಟ್ ಸೈಡ್ ಕಿಟಕಿ ಗ್ಲಾಸ್ ಪುಡಿ ಪುಡಿಯಾಗುತ್ತೆ. ಪಾಯಿಂಟ್ ಬ್ಲಾಂಕ್ ರೇಂಜ್ನಲ್ಲಿ ಸತತ ಗುಂಡಿನ ಮಳೆ! ಬರೋಬ್ಬರಿ 16 ರೌಂಡ್ ಫೈರಿಂಗ್. ಅದರಲ್ಲಿ 3 ರಿಂದ 4 ಗುಂಡುಗಳು ಚಂದ್ರನಾಥ್ ಎದೆ, ಹೊಟ್ಟೆ ಸೀಳಿಕೊಂಡು ನೇರ ಹೃದಯಕ್ಕೆ ನುಗ್ಗಿತ್ತು. ಉಸಿರು ಅಲ್ಲೇ ನಿಂತಿತ್ತು.
ಆದ್ರೆ, ಆ ಕೊಲೆಗೆ ಬಳಸಿದ್ದ ವೆಪನ್ ಇದೆಯಲ್ಲ… ಬಂಗಾಳದ ಲೋಕಲ್ ಗೂಂಡಾಗಳು ಯೂಸ್ ಮಾಡೋ ನಾಡಪಿಸ್ತೂಲು ಕಟ್ಟಾ ಅಲ್ಲ ಅದು! ಪೋಲೀಸರಿಗೆ ಸಿಕ್ಕ ಬುಲೆಟ್ ಶೆಲ್ ನೋಡಿದ್ರೆ, ಆ ಶಾರ್ಪ್ ಶೂಟರ್ಗಳು ಬಳಸಿದ್ದು ಅತ್ಯಾಧುನಿಕ Glock 47X ಪಿಸ್ತೂಲುಗಳು! ಇಂಟರ್ನ್ಯಾಷನಲ್ ಲೆವೆಲ್ ಹೈ-ಫೈ ಶೂಟರ್ಗಳು, ಸುಪಾರಿ ಕಿಲ್ಲರ್ಗಳು ಮಾತ್ರ ಬಳಸೋ ವೆಪನ್ ಅದು. ಅಂದ್ರೆ ಪಕ್ಕಾ ಪ್ರೊಫೆಷನಲ್ಸ್ನೇ ಈ ಕೆಲಸಕ್ಕೆ ಇಳಿಸಿದ್ರು ಅನ್ನೋದು ಕ್ಲಿಯರ್.
ಸ್ಕಾರ್ಪಿಯೋಗೆ ಅಡ್ಡ ಬಂದು ನಿಂತಿದ್ದ ಆ ಬಿಳಿ ಕಾರನ್ನ ದುಷ್ಕರ್ಮಿಗಳು ಅಲ್ಲೇ ಬಿಟ್ಟು ಬೈಕ್ನಲ್ಲಿ ಎಸ್ಕೇಪ್ ಆಗಿದ್ರು. ಪೋಲೀಸರು ಆ ಕಾರಿನ ನಂಬರ್ ಪ್ಲೇಟ್ (WB74AK2270) ಚೆಕ್ ಮಾಡಿದ್ರೆ, ಶಾಕ್ ಕಾದಿತ್ತು! ಆ ನಂಬರ್ 557 ಕಿಲೋಮೀಟರ್ ದೂರದಲ್ಲಿರೋ ಸಿಲಿಗುರಿಯ ವಿಲಿಯಂ ಜೋಸೆಫ್ ಅನ್ನೋ ವ್ಯಕ್ತಿಯದ್ದು. ಅವನ ಮನೆಗೆ ಹೋಗಿ ನೋಡಿದ್ರೆ, ಅವನ ಒರಿಜಿನಲ್ ಕಾರು ಗ್ಯಾರೇಜ್ನಲ್ಲೇ ಸೇಫ್ ಆಗಿತ್ತು. ಅಂದ್ರೆ ಆ ಬಿಳಿ ಕಾರಿಗೆ ಹಾಕಿದ್ದು ಪಕ್ಕಾ ಫೇಕ್ ನಂಬರ್ ಪ್ಲೇಟ್. ಅಷ್ಟೇ ಅಲ್ಲ, ಕಾರು ಯಾರದ್ದು ಅಂತ ಗೊತ್ತಾಗಬಾರದು ಅಂತ ಅದರ ಇಂಜಿನ್ ನಂಬರ್, ಚಾಸಿಸ್ ನಂಬರ್ ಎರಡನ್ನೂ ಉಜ್ಜಿ ಅಳಿಸಿಹಾಕಿದ್ರು. ಇದು ಕ್ಷಣಿಕ ಕೋಪದ ಕೊಲೆ ಅಲ್ಲ…ತಿಂಗಳುಗಳ ಪ್ಲಾನಿಂಗ್ ಇದ್ದ ಆಪರೇಷನ್.
ಸಿಸಿಟಿವಿ ಕ್ಯಾಮೆರಾದಲ್ಲಿ ಇನ್ನೊಂದು ಸತ್ಯ ಬಯಲಾಯ್ತು. ರಾತ್ರಿ 10:10ರ ಸುಮಾರಿಗೆ ಇಬ್ಬರು ಹೆಲ್ಮೆಟ್ ಹಾಕೊಂಡವ್ರು ಬೈಕ್ನಲ್ಲಿ ರಿವರ್ಸ್ ಡೈರೆಕ್ಷನ್ನಲ್ಲಿ ಹೋಗಿರೋದು ರೆಕಾರ್ಡ್ ಆಗಿತ್ತು. ಅವರು ಸೈಲೆಂಟ್ ಆಗಿ ಮೂರ್ನಾಲ್ಕು ದಿನದಿಂದ ಚಂದ್ರನಾಥ್ ಟೈಮಿಂಗ್ಸ್ ವಾಚ್ ಮಾಡ್ತಿದ್ರು. ಮನೆಗೆ ಬರೋ ಆ ಸಣ್ಣ ಗಲ್ಲಿಯಲ್ಲಿ, ಎಕ್ಸಾಕ್ಟ್ ಆಗಿ ಎಲ್ಲಿ ಅಟ್ಯಾಕ್ ಮಾಡಿದ್ರೆ ತಪ್ಪಿಸ್ಕೊಳ್ಳೋಕೆ ಈಸಿ ಅಂತ ಮೊದಲೇ ಪಕ್ಕಾ ಪ್ಲಾನ್ ಆಗಿತ್ತು. ರಾಜಕೀಯದಲ್ಲಿ ಕೆಲವರನ್ನು ಸೋಲಿಸ್ತಾರೆ. ಕೆಲವರನ್ನು ಖರೀದಿಸ್ತಾರೆ.ಆದ್ರೆ…ಕೆಲವರು ಅಷ್ಟು ಅಪಾಯಕಾರಿ ಆಗಿಬಿಡ್ತಾರೆ — ಅವರನ್ನು ಜೀವಂತ ಬಿಟ್ಟರೆ ಆಟವೇ ಕೈತಪ್ಪುತ್ತೆ.ಚಂದ್ರನಾಥ್ ರಥ್ ಅಂತಹ ಆಟಗಾರನಾ?ಅಥವಾ ಇದು ರಾಜಕೀಯ ಪ್ರತೀಕಾರದ ಇನ್ನೊಂದು ರಕ್ತದ ಅಧ್ಯಾಯವಾ?ಬಂಗಾಳ ಇನ್ನೂ ಉತ್ತರ ಹುಡುಕುತ್ತಿದೆ.

















