ಮನೆ ಸುದ್ದಿ ಜಾಲ ಸಚಿವ ಸಂಪುಟ ಪುನರ್‌ ರಚನೆ ಮೇ ತಿಂಗಳ ಕೊನೆಯಲ್ಲಿ ಆಗಬಹುದು: ಸಲೀಂ ಅಹ್ಮದ್

ಸಚಿವ ಸಂಪುಟ ಪುನರ್‌ ರಚನೆ ಮೇ ತಿಂಗಳ ಕೊನೆಯಲ್ಲಿ ಆಗಬಹುದು: ಸಲೀಂ ಅಹ್ಮದ್

0

ಹುಬ್ಬಳ್ಳಿ ಆದಷ್ಟು ಬೇಗನೆ ಸಚಿವ ಸಂಪುಟ ಪುನರ್ರಚನೆಯಾಗುತ್ತದೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ದೆಹಲಿಗೆ ಹೋದ ಮೇಲೆ ಆ ಬಗ್ಗೆ ನಿರ್ಧಾರವಾಗುತ್ತದೆ. ಮೇ ತಿಂಗಳಲ್ಲಿ ಆಗಬಹುದು ಎಂದು ಎಂದು ವಿಧಾನ ಪರಿಷತ್‌ ಸದಸ್ಯ, ಕಾಂಗ್ರೆಸ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಹೇಳಿದ್ದಾರೆ. ನಗರದಲ್ಲಿಂದು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಆದಷ್ಟು ಬೇಗನೆ ಸಂಪುಟ ಪುನರ್‌ ರಚನೆಯಾಗಬೇಕು. ಹೊಸಬರಿಗೆ ಅವಕಾಶ ಮಾಡಿಕೊಡುವಂತೆ ಹೈಕಮಾಂಡ್​​ಗೆ ಮನವಿ ಮಾಡಿದ್ದೇವೆ ಅಂತಿಮವಾಗಿ ಹೈಕಮಾಂಡ್ ನಿರ್ಧಾರ ಕೈಗೊಳ್ಳುತ್ತದೆ. ಕ್ಯಾಬಿನೆಟ್ ವಿಸ್ತರಣೆ ಖಂಡಿತಾ ಆಗುತ್ತದೆ ಎಂದರು ಎನ್ನಲಾಗಿದೆ.

ಈಕುರಿತು ದಾವಣಗೆರೆ ಉಪ ಚುನಾವಣೆ ವಿಚಾರವಾಗಿ ಪ್ರತಿಕ್ರಿಯಿಸಿ, ಜಬ್ಬಾರ್​ ಅವರನ್ನು ಪಕ್ಷ ಅಮಾನತಿನಲ್ಲಿಟ್ಟಿದೆ. ಮತ ಕಡಿಮೆ ಬಂದಿರುವ ಬಗ್ಗೆ ತನಿಖೆ ಮಾಡಿಸುವುದಾಗಿ ಸಿಎಂ ಹೇಳಿದ್ದಾರೆ. ರಾಜ್ಯದ ಜನರು ಗ್ಯಾರಂಟಿ ಯೋಜನೆಗಳನ್ನು ಬೆಂಬಲಿಸುತ್ತಿದ್ದಾರೆ. ಹೀಗಾಗಿ ಉಪ ಚುನಾವಣೆಯಲ್ಲಿ ಎರಡೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಿಸಿದ್ದಾರೆ ಎಂದು ಹೇಳಿದರು. ಶೃಂಗೇರಿ ಅಂಚೆ ಮತಗಳ ಮರು ಎಣಿಕೆ ವಿಚಾರವಾಗಿ ಮಾತನಾಡಿ, ಈ ಹಿಂದೆ ನಮ್ಮ ಅಭ್ಯರ್ಥಿ ರಾಜೇಗೌಡ 201 ಮತಗಳಿಂದ ಗೆದ್ದಿದ್ದರು. ಇದೀಗ ಮತ ಪತ್ರಗಳನ್ನು ಟ್ಯಾಂಪರಿಂಗ್ ಮಾಡಿದ್ದಾರೆ. ಇದರಲ್ಲಿ ದೊಡ್ಡ ಷಡ್ಯಂತ್ರ ನಡೆದಿದೆ. ಬಿಜೆಪಿಯವರು ಮತಕಳ್ಳರು. ಗೆದ್ದವರನ್ನು ಸೋಲಿಸಿದ್ದಾರೆ, ಸೋತವರನ್ನು ಗೆಲ್ಲಿಸಿದ್ದಾರೆ ಎಂದು ಆರೋಪಿಸಿದರು ಎಂದು ತಿಳಿಸಲಾಗಿದೆ.

ಆದರಿಂದ ಸಚಿವ ಸಂಪುಟ ಪುನಾರಚನೆಯಾದ್ರೆ ತಪ್ಪೇನು? ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಪ್ರಶ್ನಿಸಿದ್ದರು. ಈ ಕುರಿತು ಶಿವಮೊಗ್ಗದಲ್ಲಿ ಮಾತನಾಡಿದ್ದ ಅವರು, ಸಚಿವ ಸಂಪುಟ ಪುನಾರಚನೆಯಾದ್ರೆ ಎಲ್ಲರಿಗೂ ಅವಕಾಶ ಸಿಗುತ್ತದೆ.‌ ನಾವೆಲ್ಲಾ ಹೈಕಮಾಂಡ್ ಹೇಳಿದಂತೆ ಕೇಳುವವರು, ಕಾಂಗ್ರೆಸ್ ಹೈಕಮಾಂಡ್ ಜನತೆಗೆ ಒಳ್ಳೆಯ ಕೆಲಸ ಮಾಡು ಅಂತ ಸಿಎಂ, ಡಿಸಿಎಂ ಹಾಗೂ ಮಂತ್ರಿಗಳಿಗೆ ಹೇಳುತ್ತದೆ. ಹೈಕಮಾಂಡ್ ಹೇಳುವ ತನಕ ನಾವು ಅಧಿಕಾರದಲ್ಲಿರುತ್ತೇವೆ. ಇಲ್ಲ ಅಂದ್ರೆ ಸಾಮಾನ್ಯ ಶಾಸಕರಾಗಿರುತ್ತೇವೆ ಎಂದಿದ್ದರು. ಶಾಸಕರ ದೆಹಲಿ ಪ್ರವಾಸದ ವಿಚಾರವಾಗಿ ಪ್ರತಿಕ್ರಿಯಿಸಿದ್ದ ಅವರು, ದೆಹಲಿಗೆ ಹೋದರೆ ತಪ್ಪೇನಿದೆ?. ಬಿಜೆಪಿಯ ಅವಧಿಯಲ್ಲಿ ಮೂವರು ಸಿಎಂಗಳು ಬದಲಾದರು. ಹಾಗಾದರೆ, ಸಚಿವ ಸಂಪುಟ ಪುನಾರಚನೆ ಆಗಬಾರದೇ? ಎಲ್ಲರಿಗೂ ಅವಕಾಶ ಸಿಗಲಿ ಬಿಡಿ ಎಂದು ಮಾಹಿತಿ ಹೇಳಿದ್ದರು ಎನ್ನಲಾಗಿದೆ.