ಬೆಂಗಳೂರು : ರಾಜಧಾನಿ ಬೆಂಗಳೂರು ನಗರದ ಜನರಿಗೆ ರಾಸಾಯನಿಕ ಮುಕ್ತ ಮತ್ತು ಸಹಜವಾಗಿ ಹಣ್ಣಾಗಿರುವ ಮಾವಿನ ಹಣ್ಣು ಒದಗಿಸುವುದಕ್ಕಾಗಿ ನಗರದ ಲಾಲ್ಬಾಗ್ ಮತ್ತು ಕಬ್ಬನ್ ಪಾರ್ಕ್ನಲ್ಲಿ ಇಂದಿನಿಂದ 10 ದಿನಗಳ ಕಾಲ ಮಾವು ಮತ್ತು ಹಲಸಿನ ಮೇಳ ಹಮ್ಮಿಕೊಳ್ಳಲಾಗಿದೆ ಎನ್ನಲಾಗಿದೆ. ಹಾಗೂ ತೋಟಗಾರಿಕೆ ಇಲಾಖೆ ಮತ್ತು ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮಂಡಳಿಯ ಸಹಯೋಗದಲ್ಲಿ ನಡೆಯುತ್ತಿರುವ ಮೇಳಕ್ಕೆ ಇಂದು ರಾಜ್ಯ ಮಾವು ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಡಾ.ಬಿ.ಸಿ. ಮುದ್ದುಗಂಗಾಧರ್ ಚಾಲನೆ ನೀಡಿದರು. ನಗರದ ನಿವಾಸಿಗಳಿಗೆ ಮುಂದಿನ ಹತ್ತು ದಿನಗಳ ಕಾಲ ರಾಸಾಯನಿಕ ಮುಕ್ತ ತಾಜಾ ಮಾವಿನ ಹಣ್ಣು ಮತ್ತು ಹಲಸು ಲಭ್ಯವಾಗಲಿದದ್ದು. ಈ ಮೇಳದಲ್ಲಿ ರಾಮನಗರ, ಮಂಡ್ಯ, ತುಮಕೂರು, ಕೋಲಾರ ಸೇರಿದಂತೆ ರಾಜ್ಯದ ವಿವಿಧ ಭಾಗಗಳ ಮಾವು ಬೆಳೆಗಾರರು ಸುಮಾರು 50ಕ್ಕೂ ಹೆಚ್ಚು ಮಳಿಗೆಗಳನ್ನು ಆರಂಭಿಸಿದ್ದು, ಬಾದಾಮಿ, ಮಲ್ಲಿಕಾ, ಸೆಂದೂರಾ, ರಸಪೂರಿ, ಕರಿ ಇಶಾಡ್ ಸೇರಿದಂತೆ ಮತ್ತಿತರ ಹಣ್ಣುಗಳು ಮಾರಾಟಕ್ಕಿವೆ ಎನ್ನಲಅಗುತ್ತಿದೆ.
ಮತ್ತು ರುದ್ರಾಕ್ಷಿ, ಶಿವರಾತ್ರಿ, ಏಕಾದಶಿ, ತೂಬಗೆರೆ ಮತ್ತು ಲಾಲ್ ಬಾಗ್ ಮಧುರ ಎಂಬ ಹಲಸು ಹಣ್ಣುಗಳು ಸಹ ಗ್ರಾಹಕರ ಗಮನ ಸೆಳೆಯುತ್ತಿವೆ. ಭೌಗೋಳಿಕ ಮನ್ನಣೆ ಪಡೆದಿರುವ ಉತ್ತರ ಕನ್ನಡದ ಕರಿ ಇಶಾಡ್ ಎಂಬ ಮಾವು, ಮಿಡಿ ಉಪ್ಪಿನಕಾಯಿ, ಸೇರಿದಂತೆ ವಿವಿಧ ತೋಟಗಾರಿಕಾ ಉತ್ಪನ್ನಗಳು ಲಭ್ಯವಿರಲಿದೆ. ಗ್ರಾಹಕರಿಗೆ ಗುಣಮಟ್ಟದ ಹಣ್ಣು ಲಭ್ಯವಾಗುವಂತೆ ಮಾಡುವುದು ಮತ್ತು ರೈತರಿಗೆ ಮಧ್ಯವರ್ತಿಗಳಿಲ್ಲದೇ ನೇರವಾಗಿ ಗ್ರಾಹಕರನ್ನು ಸಂಪರ್ಕಕ್ಕೆ ಸಿಗುವಂತೆ ಮಾಡುವುದು ಮೇಳದ ಉದ್ದೇಶವಾಗಿದೆ ಎಂದು ನಿಗಮದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಬಾರಿ ತೀವ್ರ ಬಿಸಿಲು ಮತ್ತು ವಾತಾವರಣದ ತೇವಾಂಶ ಕೊರತೆಯಿಂದಾಗಿ ಹಣ್ಣುಗಳು ಹೆಚ್ಚಾಗಿ ಬೀಳುವ ಸಮಸ್ಯೆ ಎದುರಾಗಿದೆ.
ಇದರಿಂದ ಉತ್ಪಾದನೆ ಮತ್ತು ಗುಣಮಟ್ಟದ ಮೇಲೆ ಪರಿಣಾಮ ಬಿದ್ದಿದೆ. ಕಳೆದ ವರ್ಷ ಸುಮಾರು 15 ಲಕ್ಷ ಟನ್ ಉತ್ಪಾದನೆ ಇದ್ದರೆ, ಈ ಬಾರಿ 10 ಲಕ್ಷ ಟನ್ ಮಾತ್ರ ನಿರೀಕ್ಷಿಸಲಾಗಿದ್ದು, ಮಾವಿನ ಬೆಲೆ ಕೊಂಚ ಹೆಚ್ಚಾಗಿದೆ ಎನ್ನಬಹುದು. ಮೇಳದ ಕುರಿತು ರಾಮನಗರ ತಾಲೂಕಿನ ರೈತ ಮಾತನಾಡಿ, ಇಂದು ಮೇಳ ಪ್ರಾರಂಭವಾಗಿದೆ, ನಾಳೆಯಿಂದ ಹೆಚ್ಚಿನ ಸಂಖ್ಯೆಯ ಗ್ರಾಹಕರು ಬರಲಿದ್ದು, ಇನ್ನಷ್ಟು ವೆರೈಟಿಗಳನ್ನು ಮಾರಾಟಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು ಎನ್ನಲಾಗುತ್ತಿದೆ.

















