ಮನೆ ಸುದ್ದಿ ಜಾಲ ಯಡಿಯೂರಪ್ಪ ಅಭಿಮಾನೋತ್ಸವ ಸಮಾರಂಭದಲ್ಲಿ ಜನರಿಗೆ ಊಟದ ವ್ಯವಸ್ಥೆ : ಚಿತ್ರದುರ್ಗ

ಯಡಿಯೂರಪ್ಪ ಅಭಿಮಾನೋತ್ಸವ ಸಮಾರಂಭದಲ್ಲಿ ಜನರಿಗೆ ಊಟದ ವ್ಯವಸ್ಥೆ : ಚಿತ್ರದುರ್ಗ

0

ಚಿತ್ರದುರ್ಗ (ಮೇ.9): ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಭಿಮಾನೋತ್ಸವ, ಪುರಪ್ರವೇಶ ಕಾರ್ಯಕ್ರಮಕ್ಕೆ ಆಗಮಿಸುವ ಅಭಿಮಾನಿಗಳ ಹಸಿವು ನೀಗಿಸಲು ಟೊಮೆಟೋ ಬಾತ್, ಮೊಸರನ್ನ, ಮೈಸೂರು ಪಾಕ್ ಸಿದ್ಧವಾಗುತ್ತಿದೆ ಎನ್ನಲಾಗಿದೆ.

ಸಮಾರಂಭದಲ್ಲಿ10 ಲಕ್ಷ ಅಭಿಮಾನಿಗಳು ಆಗಮಿಸುವ ನಿರೀಕ್ಷೆಯಲ್ಲಿ ಅವರಿಗೆ ಊಟದ ವ್ಯವಸ್ಥೆ ಮಾಡುವುದು ಸವಾಲಿನ ಕೆಲಸವಾಗಿದೆ. ಸರಾಗಗೊಳಿಸುವ ನಿಟ್ಟಿನಲ್ಲಿ ಸರಳ ಊಟದ ವ್ಯವಸ್ಥೆಗೆ ಮೊರೆ ಹೋಗಲಾಗಿದೆ. ಟೊಮೆಟೋ ಬಾತ್, ಮೊಸರನ್ನ ಸೂಕ್ತವೆಂದು ತೀರ್ಮಾನಿಸಲಾಗಿದೆ. ಶುಕ್ರವಾರ ಸುದ್ದಿಗಾರರಿಗೆ ಮಾಹಿತಿ ನೀಡಿದ ಸಂಸದ ಗೋವಿಂದ ಕಾರಜೋಳ, .ಮೈಸೂರು, ಬೆಂಗಳೂರು, ಚಿತ್ರದುರ್ಗ, ತುಮಕೂರು ಮೊದಲಾದ 5 ಕಡೆಯ ಪ್ರಮುಖ ಅಡುಗೆಯವರಿಗೆ ನಿರ್ವಹಣೆ ಕೊಟ್ಟಿದ್ದೇವೆ.

ಹಾಗೂ ಊಟ ಮಧ್ಯಾಹ್ನ 12 ಗಂಟೆಗೆ ಪ್ರಾರಂಭವಾಗಲಿದೆ. ಅರ್ಧ ಲೀಟರ್ ಕುಡಿಯುವ ನೀರನ್ನೂ ಕೊಡುತ್ತೇವೆ. ಸಂಜೆ 6ರವರೆಗೂ ಊಟ ಮುಂದುವರೆಯುತ್ತದೆ ಎಂದರು. ಒಂದೊಂದು ಅಡುಗೆ ಮನೆ ಬಳಿ ಬೆಂಗಳೂರಿನ ಶಾಸಕರ ಜೊತೆ 100ರಂತೆ ಸ್ವಯಂಸೇವಕರೂ ಇರುತ್ತಾರೆ. ಹಂತ ಹಂತವಾಗಿ ಬಿಸಿಯೂಟವನ್ನೇ ಕೊಡಲು ಕ್ರಮ ಕೈಗೊಳ್ಳಲಿದ್ದಾರೆ. ಸರತಿ ಸಾಲಿನಲ್ಲೂ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತಾರೆ ಎಂದು ತಿಳಿಸಿದರು.