ಮೈಸೂರು : ವಂಚಕ ಚಿನ್ನ ತಂಬಿ ಅಲಿಯಾನ್ ಸೌಂದರ್ ರಾಜನ್ ಮೇಲೆ ಪೊಲೀಸರು ಕೊಲೆ ಬೆದರಿಕೆಯಡಿ ಯಾವುದೇ ಈ ಪ್ರಕರಣ ದಾಖಲಿಸಿಲ್ಲವೇಕೆ: ಜೆಡಿಯುನ ಉಪಾಧ್ಯಕ್ಷ ಕೆ ವಿ ಶಿವರಾಮ್, ಮೈಸೂರು, ಇಂದು (9-5-2026) ಚಿನ್ನ ತಂಬಿ ಅಲಿಯಾನ್, ಸೌಂದರ್ ರಾಜನ್, ಮೇಲೆ ತಕ್ಷಣವೇ ಸರ್ಕಾರ ಸರಿಯಾದ ಕ್ರಮ ಕೈಗೊಂಡು ಸಂತ್ರಸ್ತರಿಗೆ ನ್ಯಾಯ ಕಲ್ಪಿಸಿಬೇಕು ಇಲ್ಲವಾದರೆ, ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಜೆಡಿಯು ವತಿಯಿಂದ ನೊಂದ ಗ್ರಾಹಕರ ಸಮಾವೇಶಗಳನ್ನು ಅಯೋಜಿಸಿ, ಎಲ್ಲಾ ಸಂತ್ರಸ್ತರಿಗೆ ನ್ಯಾಯ ಸಿಗುವವರೆಗೂ ನ್ಯಾಯಯುತ ಹೋರಾಟ ಮಾಡಲಾಗುತ್ತದೆ ಎಂದು ಜೆಡಿಯುನ ಉಪಾಧ್ಯಕ್ಷ ಕೆ ವಿ ಶಿವರಾಮ್ ಎಚ್ಚರಿಸಿದ್ದಾರೆ.
ಅವರು ಮೈಸೂರಿನ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿಸಲ್ಲಿಸಿ ತಿಳಿಸಿದ್ದಾರೆ. ಈ ಚಿನ್ನ ತಂಬಿ ಕೆಲವು ಹಾಲಿ ಮಾಜಿ ಶಾಸಕರು ಮತ್ತು ಓರ್ವ ಮಾಜಿ ಸಂಸದರಿಗೆ ಗ್ರಾಹಕರ ಚಿನ್ನದ ಉಡುಗೊರೆಯಾಗಿ ನೀಡಿದ್ದಾರೆಂದು, ಅವರು ಅದಕ್ಕಾಗಿಯೆ ಯಾರೂ ಸಂತ್ರಸ್ತರ ಪರವಾಗಿ ನಿಂತಿಲ್ಲವೆಂದರೆ, ಈ ಹಗರಣಕ್ಕೆ ಕಾಣದ ರಾಜಕೀಯ ಹಸ್ತಗಳಿವೆ ಎಂದು ಅರ್ಥೈಸಿಕೊಳ್ಳಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ಪೊಲೀಸರು ಕೊಲೆ ಬೆದರಿಕೆಯಡಿ ಯಾವುದೇ ಪ್ರಕರಣ ದಾಖಲಿಸದೆ ಕೇವಲ ವಂಚನೆ ಪ್ರಕರಣ ದಾಖಲಿಸಿ ಈ ಕ್ರಿಮಿನಲ್ ಅಪರಾಧಿಯನ್ನು ಜಾಮೀನು ಮೇಲೆ ಬಿಡುಗಡೆ ಮಾಡಲು ಹಲವು ಕೈಗಳಲ್ಲಿ ಅಪಾರ ಮೊತ್ತ ಬದಲಾಗಿದೆ ಎಂದು ನೊಂದ ಗ್ರಾಹಕರು ಆರೋಪಿಸುತ್ತಿದ್ದಾರೆ. ಗ್ರಾಹಕರು ದೂರು ಕೊಡಲು ಹೋದರೆ ಕಮಿಷನರ್ ಆದಿಯಾಗಿ ಗ್ರಾಹಕರಿಗೆ ಪರವಾಗಿ ನಿಲ್ಲದೆ ವಂಚಿಸಿದರೆ ಮುಂದಿನ ದಿನಗಳಲ್ಲಿ ದೊಡ್ಡ ಹೋರಾಟ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಸಾಂಸ್ಕೃತಿಕ ನಗರಿ ಮೈಸೂರು ನಲ್ಲಿ ಬಂಗಾರದ ಹಗರಣದ ಬಗ್ಗೆ ಇತ್ತೀಚೆಗೆ ಸುದ್ದಿಯಾಗುತ್ತಿದೆ. ಈಗಾಗಲೇ ರಾಜ್ಯದಾದ್ಯಂತ ಸುದ್ದಿಯಾಗಿರುವ ಚಿನ್ನತಂಬಿ ಅಲಿಯಾನ್ ಸೌಂದರ್ ರಾಜನ್ ಎಂಬಾತನ ಗೋಲ್ಡ್ ವಂಚನೆ ಕುರಿತು ಎಲ್ಲಾ ಮಾಧ್ಯಮಗಳಿಗೂ ತಿಳಿದ ವಿಷಯ. ಈ ವಿಷಯದಲ್ಲಿ ಬಗೆದಷ್ಟೂ ನಾನಾ ಮಾಹಿತಿಗಳು ಹೊರಬರುತ್ತಿವೆ. ಅಂದ ಹಾಗೆ ಈ ಸೌಂದರ್ ರಾಜನ್ ಅಲಿಯಾಸ್ ಚಿನ್ನತಂಬಿ ಬೆಂಗಳೂರಿನಲ್ಲಿ sdj, dgt, ಧನ ಗಣೇಶ gold ಕಂಪನಿ, D ಗೋಲ್ಲ, ಇತ್ಯಾದಿ ಹೆಸರಿನಲ್ಲಿ ಬ್ಯಾಂಕ್ ಗಳಲ್ಲಿ ಅಡವಿಟ್ಟ ಬಂಗಾರವನ್ನು ಬಿಡಿಸಿಕೊಡುವುದಾಗಿ ಹೇಳಿ ಕೊನೆಗೆ ತನ್ನ sdj ಕಂಪನಿಯಲ್ಲಿ ಇನ್ನೂ ಕಡಿಮೆ ಬಡ್ಡಿಗೆ ಗಿರಿವಿ ಇಟ್ಟುಕೊಳ್ಳುವುದಾಗಿ ಗ್ರಾಹಕರಿಗೆ ನಂಬಿಸಿ ಬ್ಯಾಂಕ್ ಗಳಿಂದ ತನ್ನ ಏಜೆಂಟರು ಅಥವಾ ಟ್ರೋಕರ್ ಗಳ ಮೂಲಕ ಬಿಡಿಸಿ ತಂದ ಚಿನ್ನವನ್ನು ಗಿರಿವಿ ಇಟ್ಟುಕೊಳ್ಳುವುದಾಗಿ ಹೇಳಿ ತನ್ನ ಬಳಿ ಚಿನ್ನ ತಂದ ನಂತರ ಗ್ರಾಹಕರು ಕಡಿಮೆ ವಿದ್ಯಾವಂತರು, ಬಡವರು, ಮಹಿಳೆಯರು, ದುರ್ಬಲರು ಆಗಿದ್ದಾರೆ.
ಚಿನ್ನದ ಅಸಲೀಯತ್ತು ಪ್ರಶ್ನೆ ಮಾಡುವುದು, ಗ್ರಾಹಕರ ಅನುಮತಿ ಇಲ್ಲದೆ ಬಂಗಾರ ಕರಗಿಸಿದಂತೆ ಮಾಡುವುದು ತೂಕ ಮತ್ತು ಟಚ್ ನಲ್ಲಿ ಮೋಸ ಮಾಡುವುದು, ಗ್ರಾಹಕರನ್ನು ಹೆದರಿಸುವುದು, ರೌಡಿಗಳಿಂದ ಬೆದರಿಸಿ ಕಡಿಮೆ ಬೆಲೆ ಕೊಟ್ಟು ಕಳುಹಿಸುವುದು, ಸ್ವಲ್ಪ ವಿದ್ಯಾವಂತರು ಸರ್ಕಾರಿ ನೌಕರರು ಆಗಿದ್ದರೆ ರಾತ್ರಿಯವರೆಗೆ ಕಾಯಿಸಿ ಮರುದಿನ ಬರಲು ಹೇಳುವುದು ದುಡ್ಡು ಕೊಡದೇ ಸತಾಯಿಸಿ ತಪ್ಪಿಸಿಕೊಳ್ಳುವುದು, ಚಿನ್ನ ಅವರ ಸೊಸೈಟಿಯಲ್ಲಿ ಇಡಲಾಗಿದ್ದು ಒಂದು ತಿಂಗಳ ನಂತರ ಬಿಡಿಸಿಕೊಳ್ಳಿ ಎಂದು ಹೇಳುವುದು, ವಾಯಿದೆ ನಂತರ ಹೋದರೆ ಪಾರ್ಟ್ ನಾರ್ ಇಲ್ಲ ಬೋರ್ಡ್ ಆಫ್ ಡೈರೆಕ್ಟರ್ ಅನುಮತಿ ತಗೋಬೇಕು ಹೀಗೆ ನಾನಾರೀತಿ ಸಬೂಬು ಹೇಳುತ್ತಾ ಚಿಕ್ಕ ಮೊತ್ತಕ್ಕೆ ಸೆಟಲ್ ಮಾಡುವುದು.
ಇದಕ್ಕೆ ಮಧ್ಯವರ್ತಿಯಾಗಿ ಅವರಿಗೆ ಸಹಕರಿಸುವ ಪೊಲೀಸರನ್ನು ಬಳಸಿಕೊಂಡು ಸ್ಥಳೀಯ ಠಾಣೆಯಲ್ಲಿ ತನಗಿರುವ ಕಾಂಟ್ಯಾಕ್ಸ್ ಇತ್ಯಾದಿ ಬಗೆಗೆ ಹೇಳಿಕೊಂಡು ಅಮಾಯಕರನ್ನು ಒತ್ತಾಯದಿಂದ ಸೆಟಲ್ ಮೆಂಟ್ ಮಾಡಿ ಕಳುಹಿಸಿದ್ದಾರೆಂದು ತಿಳಿದುಬಂದಿದೆ. ಈತನ ವಂಚನೆಗೆ ಸ್ಥಳೀಯ ಪೊಲೀಸರು, ಇನ್ನಮ್ ಟ್ಯಾಕ್ಸ್, ಜಿ.ಎಸ್ಪಿ ಅಧಿಕಾರಿಗಳು ಸಹಕರಿಸಿದ್ದಾರೆ ಎಂದು ಹೇಳುತ್ತಾ ತನ್ನ ವಂಚನೆಯನ್ನು ಮುಂದುವರೆಸಿದ್ದ. ಇತ್ತೀಚೆಗೆ ಮಹಿಳಾ ಗ್ರಾಹಕರನ್ನು ತನ್ನ ಕಚೇರಿಯಲ್ಲಿ ರೌಡಿಗಳನ್ನು ಬಿಟ್ಟು ದೈಹಿಕ ಹಿಂಸೆ ನೀಡಿರುವುದು ಮತ್ತು ಬಹುತೇಕರಿಗೆ ಕೊಲೆ ಬೆದರಿಕೆ ಹಾಕಿದ್ದಾನೆ.
ಇತ್ತೀಚೆಗೆ CCB ಪೊಲೀಸರು ಈತನನ್ನು ಸಾಂಕೇತಿಕವಾಗಿ ಬಂಧಿಸಿ, ನೊಂದವರಿಂದ ದೂರುಪಡೆದಂತೆ ಮಾಡಿ ಪ್ರಕರಣವನ್ನು ಮುಚ್ಚಿಹಾಕುವ ಯತ್ನ ಮಾಡುತ್ತಿದ್ದಾರೆ ಎಂಬ ಅನುಮಾನವನ್ನು ಸಂತ್ರಸ್ತರು ವ್ಯಕ್ತಪಡಿಸುತ್ತಿದ್ದಾರೆ. ಮುಖ್ಯಮಂತ್ರಿಗಳ ಜಿಲ್ಲೆಯಲ್ಲೇ ಇಂತಹ ಘಟನೆಗಳು ನಡೆಯುತ್ತಿದ್ದರು ಸೂಕ್ತ ಕ್ರಮವಿಸದಿದ್ದರೆ ಜನರ ಪರಿಸ್ಥಿತಿ ಹಾಗೂ ಇತರ ಜಿಲ್ಲೆಗಳ ಪರಿಸ್ಥಿತಿ ಏನು…? ಎಂದು ಹೇಳಲಾಗಿದೆ.
















