ಬೆಂಗಳೂರು(Bengaluru): ನಟ ವಿನೋದ್ ಪ್ರಭಾಕರ್ ಅವರು ತಮ್ಮ ತಂದೆಯ ಹೆಸರಿನಲ್ಲಿ ಚಿತ್ರ ನಿರ್ಮಾಣ ಸಂಸ್ಥೆ ಆರಂಭಿಸುತ್ತಿದ್ದಾರೆ.
ಸಂಸ್ಥೆಗೆ ‘ಟೈಗರ್ ಟಾಕೀಸ್’ ಎಂಬ ಹೆಸರಿಡಲಾಗಿದೆ. ಚಿತ್ರ ನಿರ್ಮಾಣ ಸಂಸ್ಥೆ ಆರಂಭಿಸುವ ಮೂಲಕ ಟೈಗರ್ ಪ್ರಭಾಕರ್ ಹೆಸರನ್ನು ಜನ ಮಾನಸದಲ್ಲಿ ಶಾಶ್ವತವಾಗಿಡಲು ಪ್ರಯತ್ನ ನಡೆಸಿದ್ದಾರೆ ವಿನೋದ್ ಪ್ರಭಾಕರ್.
ಸಂಸ್ಥೆಗೆ ಕ್ರೇಜಿಸ್ಟಾರ್ ರವಿಚಂದ್ರನ್ ಅಧಿಕೃತವಾಗಿ ಚಾಲನೆ ನೀಡಿ ವಿನೋದ್ ಪ್ರಭಾಕರ್ ಗೆ ಶುಭ ಹಾರೈಸಿದ್ದಾರೆ.
ಟೈಗರ್ ಟಾಕೀಸ್ ಸಂಸ್ಥೆ ಮೂಲಕ ಈಗಾಗಲೇ ಮೊದಲ ಸಿನಿಮಾವಾಗಿ ಲಂಕಾಸುರ ಎನ್ನುವ ಸಿನಿಮಾ ನಿರ್ಮಾಣ ಮಾಡಲಾಗಿದೆ.