ಮನೆ ರಾಜ್ಯ ಪ್ರಧಾನಿ ಮೋದಿ ಅವರ ಮಿತ ಬಳಕೆ, ಮನವಿ ಎಲ್ಲರೂ ಸ್ವಾಗತಿಸಬೇಕು – ಹೆಚ್‌ಡಿಡಿ

ಪ್ರಧಾನಿ ಮೋದಿ ಅವರ ಮಿತ ಬಳಕೆ, ಮನವಿ ಎಲ್ಲರೂ ಸ್ವಾಗತಿಸಬೇಕು – ಹೆಚ್‌ಡಿಡಿ

0

ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರ ಮಿತ ಬಳಕೆ ಮನವಿಯನ್ನು ಎಲ್ಲರೂ ಸ್ವಾಗತ ಮಾಡಬೇಕು ಎಂದು ಮಾಜಿ ಪ್ರಧಾನಿ ದೇವೇಗೌಡ ಕರೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ತೆಲಂಗಾಣದಲ್ಲಿ ಮೋದಿ ಕೆಲವು ಸಲಹೆ ಕೊಟ್ಟಿದ್ದಾರೆ. ದೇಶದ 150 ಕೋಟಿ ಜನರಿಗೆ ಮೋದಿ ಮನವಿ ಮಾಡಿದ್ದಾರೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಗಿರುವ ಸಂಘರ್ಷದಿಂದ ಆಗಿರುವ ಕೆಟ್ಟ ದುಷ್ಪರಿಣಾಮವಿದು. ಹೀಗಾಗಿ ಮೋದಿ ಅವರ ಮನವಿಯನ್ನ ಸ್ವಾಗತ ಮಾಡಬೇಕು ಎಂದಿದ್ದಾರೆ. ಅಮೆರಿಕಾ-ಇಸ್ರೇಲ್-ಇರಾನ್ ನಡುವೆ ಕದನ ಆಗ್ತಿದೆ. ಅದರಿಂದ ದುಷ್ಪರಿಣಾಮ ಆಗಿದೆ. ಈ ಹಿನ್ನಲೆ ಮೋದಿ ಅವರು ಬಳಕೆ ಮಾಡೋವಾಗ ನಿಧಾನವಾಗಿ, ಎಚ್ಚರಿಕೆಯಿಂದ ಮಾಡಿ ಅಂತ ಹೇಳಿದ್ದಾರೆ ಎಂದು ಮೋದಿ ಹೇಳಿಕೆ ಸಮರ್ಥಿಸಿಕೊಂಡಿದ್ದಾರೆ.