ಮನೆ ಸುದ್ದಿ ಜಾಲ ಪ್ರಿಯಾಂಕಾ ಚೋಪ್ರಾ ಇಂದ  ʼವಾರಣಾಸಿʼ ಅಪ್‌ಡೇಟ್

ಪ್ರಿಯಾಂಕಾ ಚೋಪ್ರಾ ಇಂದ  ʼವಾರಣಾಸಿʼ ಅಪ್‌ಡೇಟ್

0

ಎಸ್.ಎಸ್. ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ ‘ವಾರಣಾಸಿ’. ಈ ಸಿನಿಮಾ 2027ರ ಏಪ್ರಿಲ್ 7 ರಂದು ಚಿತ್ರಮಂದಿರಗಳಿಗೆ ಬರಲಿದೆ ಎಂದು ವರದಿಯಾಗಿದೆ. ಇದೀಗ, ಚಿತ್ರದ ನಾಯಕಿ ಪ್ರಿಯಾಂಕಾ ಚೋಪ್ರಾ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಮುಂದಿನ ಶೆಡ್ಯೂಲ್ ಶೂಟಿಂಗ್ ಶುರುವಾಗುವ ಬಗ್ಗೆ ಸುಳಿವು ನೀಡಿದ್ದಾರೆ. “ವಾರಣಾಸಿ, Here we go” ಎಂದು ಬರೆದುಕೊಂಡಿರುವ ಪ್ರಿಯಾಂಕಾ, ಶೂಟಿಂಗ್ ಎಲ್ಲಿ ನಡೆಯಲಿದೆ ಎನ್ನುವ ವಿಚಾರವನ್ನು ಮಾತ್ರ ರಿವೀಲ್ ಮಾಡಿಲ್ಲ ಎನ್ನಲಾಗಿದ್ದು ಈ ಚಿತ್ರದಲ್ಲಿ ಮಹೇಶ್ ಬಾಬು ‘ರುದ್ರ’ ಎನ್ನುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಚಿತ್ರದ ಟೀಸರ್ ರಿಲೀಸ್ ಮಾಡಲಾಗಿತ್ತು ಎನ್ನಬಹುದು.

ಇದು ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿತ್ತು. ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ ಮತ್ತು ಪೃಥ್ವಿರಾಜ್ ಸುಕುಮಾರನ್ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರವನ್ನು ಶ್ರೀ ದುರ್ಗಾ ಆರ್ಟ್ಸ್ ಮತ್ತು ಶೋಯಿಂಗ್ ಬ್ಯುಸಿನೆಸ್ ಬ್ಯಾನರ್‌ಗಳ ಅಡಿಯಲ್ಲಿ ಕೆ.ಎಲ್. ನಾರಾಯಣ ಮತ್ತು ಎಸ್.ಎಸ್. ಕಾರ್ತಿಕೇಯ ನಿರ್ಮಿಸುತ್ತಿದ್ದಾರೆ. ಎಂ.ಎಂ. ಕೀರವಾಣಿ ‘ವಾರಣಾಸಿ’ಗೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಪ್ರೇಕ್ಷಕರಿಗೆ ದೃಶ್ಯವೈಭವವನ್ನೇ ಉಣಬಡಿಸುವ ‘ವಾರಣಾಸಿ’ ಟೀಸರ್ ಅನ್ನು ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ 130×100 ಅಡಿ ಅಗಲದ ಬೃಹತ್ ಸ್ಕ್ರೀನ್ ಮೇಲೆ ಪ್ರದರ್ಶಿಸಲಾಗಿತ್ತು. ಕ್ರಿ.ಶ. 512ರ ವಾರಣಾಸಿ ದೃಶ್ಯದೊಂದಿಗೆ ಟೀಸರ್ ಶುರುವಾಗುತ್ತದೆ. ನಂತರ, 2027ರಲ್ಲಿ ‘ಶಾಂಭವಿ’ ಎಂಬ ಧೂಮಕೇತು ಭೂಮಿಯತ್ತ ಬರುವುದನ್ನು ತೋರಿಸಲಾಗಿದೆ. ಇದರ ಜೊತೆಗೆ ಅಂಟಾರ್ಟಿಕಾದ ರಾಸ್ ಐಸ್ ಶೆಲ್ಫ್, ಆಫ್ರಿಕಾದ ಅಂಬೋಸೆಲಿ ಅರಣ್ಯ, ಕ್ರಿ.ಪೂ. 7200ರ ಲಂಕಾ ನಗರ ಮತ್ತು ವಾರಣಾಸಿಯ ಮಣಿಕರ್ಣಿಕಾ ಘಾಟ್‌ನಂತಹ ಅದ್ಭುತ ದೃಶ್ಯಗಳನ್ನು ಟೀಸರ್‌ನಲ್ಲಿ ಕಟ್ಟಿಕೊಡಲಾಗಿದೆ. ಹೀಗೆ ಟೀಸರ್‌ನ ಕೊನೆಯಲ್ಲಿ ಕೈಯಲ್ಲಿ ತ್ರಿಶೂಲ ಹಿಡಿದು, ಗೂಳಿ ಮೇಲೆ ಕುಳಿತು ಬರುವ ಮಹೇಶ್ ಬಾಬು ಅವರ ‘ರುದ್ರ’ ಪಾತ್ರ ಕಾಣಿಸಿಕೊಂಡಾಗ, ಅದೇ ಸಮಯಕ್ಕೆ ವೇದಿಕೆಯ ಮೇಲೂ ಮಹೇಶ್ ಬಾಬು ಗೂಳಿ ಏರಿ ಎಂಟ್ರಿ ಕೊಟ್ಟರು.

ಆಗ, 60 ಸಾವಿರಕ್ಕೂ ಹೆಚ್ಚು ಜನರು ಸೇರಿದ್ದ ಆ ಕಾರ್ಯಕ್ರಮದಲ್ಲಿ ಅಭಿಮಾನಿಗಳ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ಈ ಚಿತ್ರವನ್ನು ಐಮ್ಯಾಕ್ಸ್ ರೂಪದಲ್ಲಿ ನಿರ್ಮಿಸುತ್ತಿರುವುದರಿಂದ, ಥಿಯೇಟರ್‌ಗಳಲ್ಲಿ ಅದ್ಭುತ ಅನುಭವ ನೀಡುವುದು ಖಚಿತ. ‘ಬಾಹುಬಲಿ’ ಮತ್ತು ‘RRR’ ನಂತಹ ಬ್ಲಾಕ್‌ಬಸ್ಟರ್‌ಗಳನ್ನು ನೀಡಿದ ರಾಜಮೌಳಿಯವರ ಈ ಬ್ರಹ್ಮಾಂಡ ಚಿತ್ರ ‘ವಾರಣಾಸಿ’ಯ ಅಧಿಕೃತ ಬಿಡುಗಡೆ ದಿನಾಂಕ ಇನ್ನೂ ಘೋಷಣೆಯಾಗಿಲ್ಲ ಎಂದು ತಿಳಿದುಬಂದಿದೆ.