ಮನೆ ಸುದ್ದಿ ಜಾಲ ಮೈಸೂರು-ದೆಹಲಿಗೆ ವಿಶೇಷ ರೈಲು, ವಿವಿಧ ರೈಲುಗಳ ಸಂಚಾರದಲ್ಲಿ ಬದಲಾವಣೆ..!

ಮೈಸೂರು-ದೆಹಲಿಗೆ ವಿಶೇಷ ರೈಲು, ವಿವಿಧ ರೈಲುಗಳ ಸಂಚಾರದಲ್ಲಿ ಬದಲಾವಣೆ..!

0

ಬೇಸಿಗೆ ರಜೆಯ ಹಿನ್ನೆಲೆಯಲ್ಲಿ ಪ್ರಯಾಣಿಕರ ದಟ್ಟಣೆಯನ್ನು ನಿಯಂತ್ರಿಸಲು ನೈರುತ್ಯ ರೈಲ್ವೆಯು ಮೈಸೂರು ಮತ್ತು ಹಜರತ್ ನಿಜಾಮುದ್ದೀನ್ ನಿಲ್ದಾಣಗಳ ನಡುವೆ ಒಂದು ಟ್ರಿಪ್ ವಿಶೇಷ ಎಕ್ಸ್ ಪ್ರೆಸ್ ರೈಲು ಓಡಿಸಲು ನಿರ್ಧರಿಸಿದೆ. ಇದರೊಂದಿಗೆ ಕೆಲವು ರೈಲು ಸೇವೆಗಳಲ್ಲಿ ತಾತ್ಕಾಲಿಕ ಬದಲಾವಣೆ ಮತ್ತು ನಿಯಂತ್ರಣ ಮಾಡಲಾಗಿದೆ. ಮೈಸೂರು ವಿಭಾಗಕ್ಕೆ ಸಂಬಂಧಸಿದಿಂತೆ ಮಾಹಿತಿ ನೀಡಿದ ಸಾರ್ವಜನಿಕ ಸಂಪರ್ಕ ಅಧಿಕಾರಿ ಗಿರೀಶ ಧರ್ಮರಾಜ ಕಲಗೊಂಡ ಅವರು, ಮೈಸೂರು-ಹಜರತ್ ನಿಜಾಮುದ್ದೀನ್ ವಿಶೇಷ ರೈಲು (06261) ಮೇ 21 ಗುರುವಾರ ಬೆಳಗ್ಗೆ 4 ಗಂಟೆಗೆ ಮೈಸೂರಿನಿಂದ ಹೊರಡಲಿದೆ. ಇದು ಮೇ 23ರ ಶನಿವಾರ ಬೆಳಗ್ಗೆ 5:45ಕ್ಕೆ ಹಜರತ್ ನಿಜಾಮುದ್ದೀನ್ ನಿಲ್ದಾಣ ತಲುಪಲಿದೆ ಎಂದರು. ಅದೇ ದಿಕ್ಕಿನಲ್ಲಿ ಹಜರತ್ ನಿಜಾಮುದ್ದೀನ್- ಮೈಸೂರು ವಿಶೇಷ ರೈಲು (06262) ಮೇ 24ರ ಭಾನುವಾರ ರಾತ್ರಿ 9ಗಂಟೆಗೆ ಹೊರಟು ಮೇ 26ರ ಮಂಗಳವಾರ ರಾತ್ರಿ 11:55ಕ್ಕೆ ಮೈಸೂರು ನಿಲ್ದಾಣಕ್ಕೆ ಬರಲಿದೆ.

ವಿಶೇಷ ರೈಲು ನಿಲುಗಡೆ ನಿಲ್ದಾಣ – ಮೈಸೂರಿನಿಂದ ಹಾಸನ, ಅರಸೀಕೆರೆ, ಬೀರೂರು, ಎಸ್‌ಎಂಎಂ ಹಾವೇರಿ, ಎಸ್‌ಎಸ್‌ಎಸ್ ಹುಬ್ಬಳ್ಳಿ, ವಿಜಯಪುರ, ಸೋಲಾಪುರ, ದೌಂಡ್, ಬೇಲಾಪುರ, ಮನ್ಮಾಡ್, ಭೂಸಾವಲ್, ಇಟಾರ್ಸಿ, ರಾಣಿ ಕಮಲಾಪತಿ, ವೀರಾಂಗನಾ ಲಕ್ಷ್ಮೀಬಾಯಿ ಝಾನ್ಸಿ ಮತ್ತು ಆಗ್ರಾ ಕ್ಯಾಂಟ್ ನಿಲ್ದಾಣ ಮಾರ್ಗವಾಗಿ ಸಾಗುವ ರೈಲು ಆಯಾ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ. ಒಟ್ಟು18 ಸ್ವೀಪರ್ ದರ್ಜೆಯ ಬೋಗಿಗಳು, 2 ಲಗೇಜ್ ಕಮ್ ಬ್ರೇಕ್ ವ್ಯಾನ್, ದಿವ್ಯಾಂಗ ಸ್ನೇಹಿ ಬೋಗಿ ಸಹಿತ ಒಟ್ಟು 20 ಬೋಗಿಗಳನ್ನು ಹೊಂದಿರಲಿದೆ.

ಪುಣೆ ವಿಭಾಗದ ಅಕೋಲ್ನರ್-ಅಹಿಲ್ಯಾನಗರ-ನಿಂಬ್ಲಾಕ್ ವಿಭಾಗದಲ್ಲಿ ರೈಲ್ವೆ ಹಳಿ ಜೋಡಣೆ (ಡಬ್ಲಿಂಗ್) ಕಾಮಗಾರಿ ನಡೆಯುತ್ತಿರುವುದರಿಂದ ಈ ಕೆಳಗಿನ ರೈಲುಗಳ ಮಾರ್ಗ ಬದಲಾವಣೆ, ಸಂಚಾರ ವಿಳಂಬ ಆಗಲಿವೆ ಎಂದು ನೈಋತ್ಯ ರೈಲ್ವೆ ಪಿಆರ್‍‌ಒ ಮಂಜುನಾಥ ಕನಮಡಿ ಅವರು ತಿಳಿಸಿದ್ದಾರೆ. ಮಾರ್ಗ ಬದಲಾದ, ನಿಯಂತ್ರಣೆಯ ರೈಲುಗಳ ಪಟ್ಟಿ – ಹಜರತ್ ನಿಜಾಮುದ್ದೀನ್ -ಯಶವಂತಪುರ ಎಕ್ಸ್‌ಪ್ರೆಸ್ ರೈಲು (12630) ಮೇ 15 ರಂದು ಪ್ರಾರಂಭವಾಗುವ ಪ್ರಯಾಣವು ಮನ್ಮಾಡ್, ನಾಸಿಕ್ ರೋಡ್, ಇಗತ್‌ಪುರಿ, ಕಲ್ಯಾಣ್, ಪನ್ವೇಲ್, ಕರ್ಜತ್, ಲೋನಾವಾಲಾ ಮತ್ತು ಪುಣೆ ಮೂಲಕ ಸಂಚಾರ ನಡೆಸಲಿದೆ.

ಎಸ್‌ಎಸ್‌ಎಸ್ ಹುಬ್ಬಳ್ಳಿ-ಬನಾರಸ್ ಎಕ್ಸ್‌ಪ್ರೆಸ್ ರೈಲು (17323) ಮೇ 15 ರಂದು ಪ್ರಾರಂಭವಾಗುವ ಪ್ರಯಾಣವು ಸೋಲಾಪುರ, ಕುರ್ದುವಾಡಿ, ಲಾತೂರ್ ರೋಡ್, ಪರ್ಭಾನಿ, ಛತ್ರಪತಿ ಸಂಭಾಜಿನಗರ ಮತ್ತು ಮನ್ಮಾಡ್ ಮೂಲಕ ಕಾರ್ಯಾಚರಣೆ ನಡೆಸಲಿದೆ. ಕೆಎಸ್‌ಆರ್ ಬೆಂಗಳೂರು-ನವದೆಹಲಿ ಕರ್ನಾಟಕ ಎಕ್ಸ್‌ಪ್ರೆಸ್ ರೈಲು (12627) ಮೇ 15, 16, 17 ರಂದು ಪ್ರಾರಂಭವಾಗುವ ಪ್ರಯಾಣವು ಸೋಲಾಪುರ, ಕುರ್ದುವಾಡಿ, ಲಾತೂರ್ ರೋಡ್, ಪರ್ಭಾನಿ, ಛತ್ರಪತಿ ಸಂಭಾಜಿನಗರ ಮತ್ತು ಮನ್ಮಾಡ್ ನಿಲ್ದಾಣಗಳ ಮೂಲಕ ಸಂಚರಿಸಲಿದೆ.

ಎಸ್‌ಎಸ್‌ಎಸ್ ಹುಬ್ಬಳ್ಳಿ-ಹಜರತ್ ನಿಜಾಮುದ್ದೀನ್ ಎಕ್ಸ್‌ಪ್ರೆಸ್ ರೈಲು (20657) ಮೇ15 ಆರಂಭವಾಗಲಿದ್ದು ಪ್ರಯಾಣವು ಸೋಲಾಪುರ, ಕುರ್ದುವಾಡಿ, ಲಾತೂರ್ ರೋಡ್, ಪರ್ಭಾನಿ, ಛತ್ರಪತಿ ಸಂಭಾಜಿನಗರ ಮತ್ತು ಮನ್ಮಾಡ್ ಮೂಲಕ ಮಾರ್ಗ ಬದಲಾಯಿಸಲಾಗಿದೆ. ಉತ್ತರ ಕರ್ನಾಟಕದ ರೈಲು ಪ್ರಯಾಣಿಕರಿಗೆ ಸಿಹಿಸುದ್ದಿ; 3 ವಿಶೇಷ ರೈಲುಗಳು ಖಾಯಂ, ಟಿಕೆಟ್ ದರ ಶೇ.30 ಇಳಿಕೆ, ಉತ್ತರ ಕರ್ನಾಟಕದ ರೈಲು ಪ್ರಯಾಣಿಕರಿಗೆ ಸಿಹಿಸುದ್ದಿ; 3 ವಿಶೇಷ ರೈಲುಗಳು ಖಾಯಂ, ಟಿಕೆಟ್ ದರ ಶೇ.30 ಇಳಿಕೆ..,

ಮಾರ್ಗ ಬದಲಾದ, ನಿಯಂತ್ರಣೆಯ ರೈಲುಗಳ ಪಟ್ಟಿ – ಹಜರತ್ ನಿಜಾಮುದ್ದೀನ್-ಯಶವಂತಪುರ ಎಕ್ಸ್‌ಪ್ರೆಸ್ ರೈಲು (12630) ಮೇ 15 ರಂದು ಪ್ರಾರಂಭವಾಗುವ ಪ್ರಯಾಣವು ಮನ್ಮಾಡ್, ನಾಸಿಕ್ ರೋಡ್, ಇಗತ್‌ಪುರಿ, ಕಲ್ಯಾಣ್, ಪನ್ವೇಲ್, ಕರ್ಜತ್, ಲೋನಾವಾಲಾ ಮತ್ತು ಪುಣೆ ಮೂಲಕ ಸಂಚಾರ ನಡೆಸಲಿದೆ. ಬೆಂಗಳೂರು ಉಪನಗರ ರೈಲು ಯೋಜನೆಗೆ ಬರಲಿವೆ 153 ಮೆಟ್ರೋ ಮಾದರಿಯ ಬೋಗಿಗಳು – ಎಸ್‌ಎಸ್‌ಎಸ್ ಹುಬ್ಬಳ್ಳಿ-ಬನಾರಸ್ ಎಕ್ಸ್‌ಪ್ರೆಸ್ ರೈಲು (17323) ಮೇ 15 ರಂದು ಪ್ರಾರಂಭವಾಗುವ ಪ್ರಯಾಣವು ಸೋಲಾಪುರ, ಕುರ್ದುವಾಡಿ, ಲಾತೂರ್ ರೋಡ್, ಪರ್ಭಾನಿ, ಛತ್ರಪತಿ ಸಂಭಾಜಿನಗರ ಮತ್ತು ಮನ್ಮಾಡ್ ಮೂಲಕ ಕಾರ್ಯಾಚರಣೆ ನಡೆಸಲಿದೆ.

ಕೆಎಸ್‌ಆರ್ ಬೆಂಗಳೂರು-ನವದೆಹಲಿ ಕರ್ನಾಟಕ ಎಕ್ಸ್‌ಪ್ರೆಸ್ ರೈಲು (12627) ಮೇ 15, 16, 17 ರಂದು ಪ್ರಾರಂಭವಾಗುವ ಪ್ರಯಾಣವು ಸೋಲಾಪುರ, ಕುರ್ದುವಾಡಿ, ಲಾತೂರ್ ರೋಡ್, ಪರ್ಭಾನಿ, ಛತ್ರಪತಿ ಸಂಭಾಜಿನಗರ ಮತ್ತು ಮನ್ಮಾಡ್ ನಿಲ್ದಾಣಗಳ ಮೂಲಕ ಸಂಚರಿಸಲಿದೆ. ಎಸ್‌ಎಸ್‌ಎಸ್ ಹುಬ್ಬಳ್ಳಿ-ಹಜರತ್ ನಿಜಾಮುದ್ದೀನ್ ಎಕ್ಸ್‌ಪ್ರೆಸ್ ರೈಲು (20657) ಮೇ15 ಆರಂಭವಾಗಲಿದ್ದು ಪ್ರಯಾಣವು ಸೋಲಾಪುರ, ಕುರ್ದುವಾಡಿ, ಲಾತೂರ್ ರೋಡ್, ಪರ್ಭಾನಿ, ಛತ್ರಪತಿ ಸಂಭಾಜಿನಗರ ಮತ್ತು ಮನ್ಮಾಡ್ ಮೂಲಕ ಮಾರ್ಗ ಬದಲಾಯಿಸಲಾಗಿದೆ.

ಹಜರತ್ ನಿಜಾಮುದ್ದೀನ್-ಎಸ್‌ಎಸ್‌ಎಸ್ ಹುಬ್ಬಳ್ಳಿ ಎಕ್ಸ್‌ಪ್ರೆಸ್ ರೈಲು (20658) ಮೇ 17ರಂದು ಪ್ರಾರಂಭವಾಗುವ ಪ್ರಯಾಣವು ಮನ್ಮಾಡ್, ಛತ್ರಪತಿ ಸಂಭಾಜಿನಗರ, ಪರ್ಭಾನಿ, ಲಾತೂರ್ ರೋಡ್, ಕುರ್ದುವಾಡಿ ಮತ್ತು ಸೋಲಾಪುರ ಮೂಲಕ ಕಾರ್ಯಾಚರಣೆ ನಡೆಸಲಿದೆ. ಯಶವಂತಪುರ-ಚಂಡೀಗಢ ಎಕ್ಸ್‌ಪ್ರೆಸ್ ರೈಲು (22685) ಮೇ16 ರಂದು ಪ್ರಾರಂಭವಾಗುವ ಪ್ರಯಾಣವು ಪುಣೆ, ಲೋನಾವಾಲಾ, ಕರ್ಜತ್, ಪನ್ವೇಲ್, ಕಲ್ಯಾಣ್, ನಾಸಿಕ್ ರೋಡ್ ಮತ್ತು ಮನ್ಮಾಡ್ ಮೂಲಕ ಸಂಚರಿಸಲಿದೆ.

ಒಂದು ಗಂಟೆ ರೈಲು ವಿಳಂಬ – ಹಜರತ್ ನಿಜಾಮುದ್ದೀನ್-ವಾಸ್ಕೋ-ಡ-ಗಾಮಾ ಗೋವಾ ಎಕ್ಸ್‌ಪ್ರೆಸ್ ರೈಲು (12780) ಮೇ 15 ಮತ್ತು 16 ಸೇವೆ ಆರಂಭಿಸಲಿದೆ. ಈ ರೈಲಿನ ಪ್ರಯಾಣವು ಮನ್ಮಾಡ್-ನಿಂಬ್ಲಾಕ್ ವಿಭಾಗದಲ್ಲಿ 1 ಗಂಟೆ 30 ನಿಮಿಷಗಳ ಕಾಲ ತಡೆ ಹಿಡಿಯಲಾಗುತ್ತದೆ. ಇದೇ ರೈಲಿನ 17ರ ಪ್ರಯಾಣವನ್ನು ಮನ್ಮಾಡ್-ನಿಂಬ್ಲಾಕ್ ವಿಭಾಗದಲ್ಲಿ 1 ಗಂಟೆಯ ಕಾಲ ನಿಯಂತ್ರಿಸಲಾಗುತ್ತದೆ ಎಂದು ಕನಮಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.