ಮನೆ ರಾಜ್ಯ ಸಿಎಂ ಆದ ಬೆನ್ನಲ್ಲೇ, ನಟಿ ತ್ರಿಶಾಗೆ ವಿಜಯ್‌ ಬಿಗ್‌ ಗಿಫ್ಟ್‌..!

ಸಿಎಂ ಆದ ಬೆನ್ನಲ್ಲೇ, ನಟಿ ತ್ರಿಶಾಗೆ ವಿಜಯ್‌ ಬಿಗ್‌ ಗಿಫ್ಟ್‌..!

0

ಸಿಎಂ ಆದ ಬೆನ್ನಲ್ಲೇ ವಿಜಯ್ ನಟಿ ತ್ರಿಶಾ ನಟನೆಯ ʼಕರುಪ್ಪ್‌ʼ ಸಿನಿಮಾದ ಮಾರ್ನಿಂಗ್‌ ಶೊಗೆ ಸ್ಪೆಷಲ್‌ ಪರ್ಮಿಷನ್‌ ಕೊಟ್ಟಿದ್ದಾರೆ. ಮೇ 14ರಂದು ತ್ರಿಶಾ ಮತ್ತು ಸೂರ್ಯ ಅಭಿನಯದ ಸಿನಿಮಾ ತೆರೆಕಾಣಲಿದ್ದು, ಬೆಳಿಗ್ಗೆ 9 ಗಂಟೆಯ ಫಸ್ಟ್ ಶೋಗೆ ವಿಶೇಷ ಅನುಮತಿ ನೀಡಿದ್ದಾರೆ.

ವಿಜಯ್ ಅವರ ಈ ನಡೆ ತಮಿಳು ಚಲನಚಿತ್ರೋದ್ಯಮದಲ್ಲಿ ಗಮನ ಸೆಳೆಯುವಂತೆ ಮಾಡಿದೆ. ಕರುಪ್ಪ್ ಸಿನಿಮಾಗೆ ಸಿಎಂ ವಿಜಯ್ ಅವರು ದಿನಕ್ಕೆ 5 ಶೋಗಳಿಗೆ ಅನುಮತಿ ನೀಡಿದ್ದಾರೆ . ಜೊತೆಗೆ ಶೋ ಸಮಯದಲ್ಲಿ ಚಿತ್ರಮಂದಿರದ ಮಾಲೀಕರು ಜನದಟ್ಟಣೆಯನ್ನು ನಿಯಂತ್ರಿಸುವ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.

ಈ ಕುರಿತು ಕರುಪ್ಪ್ ಸಿನಿಮಾ ತಂಡ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ಕರುಪ್ಪ್ ಸಿನಿಮಾಗೆ ಬೆಳಿಗ್ಗೆ 9 ಗಂಟೆಯ ಶೋಗೆ ವಿಶೇಷ ಅನುಮತಿ ನೀಡಿದ್ದಕ್ಕಾಗಿ ಧನ್ಯವಾದ ತಿಳಿಸಿದ್ದಾರೆ. ಆರ್‌ಜೆ ಬಾಲಾಜಿ ನಿರ್ದೇಶನದ `ಕರುಪ್ಪ್’ ಸಿನಿಮಾದಲ್ಲಿ ಸೂರ್ಯ ಮತ್ತು ತ್ರಿಶಾ ಕೃಷ್ಣನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಮೇ 14ರಂದು ತೆರೆಕಾಣಲಿದೆ.

ತಮಿಳುನಾಡಿನಲ್ಲಿ ಬೆಳಿಗ್ಗೆ 9 ಗಂಟೆಗಿಂತ ಮುಂಚೆ ಥಿಯೇಟರ್‌ಗಳಲ್ಲಿ ಸಿನಿಮಾ ಶೋಗೆ ಅವಕಾಶವಿಲ್ಲ. ಸಿನಿಮಾ ರಿಲೀಸ್ ಆದ ಮೊದಲ ದಿನ ಫಸ್ಟ್ ಶೋ ವೇಳೆ ಅಭಿಮಾನಿಗಳ ಅತಿರೇಕದ ವರ್ತನೆ, ಟ್ರಾಫಿಕ್ ಸಮಸ್ಯೆ, ಅನಾಹುತಗಳನ್ನು ತಪ್ಪಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿದ್ದಾರೆ.

ಸಾಮಾನ್ಯವಾಗಿ ಬೆಳಿಗ್ಗೆ 11 ಅಥವಾ 12 ಗಂಟೆಗೆ ಮೊದಲ ಶೋ ಆರಂಭವಾಗುತ್ತದೆ. ಒಂದು ವೇಳೆ ಅದಕ್ಕೂ ಮುಂಚೆ ಶೋ ನಿಗದಿಪಡಿಸಬೇಕೆಂದರೆ ಸರ್ಕಾರದಿಂದ ಅನುಮತಿ ಪಡೆಯಬೇಕು. ಇನ್ನೂ ವಾರದ ದಿನಗಳಲ್ಲಿ ದಿನಕ್ಕೆ 4 ಶೋಗಳು ಮತ್ತು ವಾರಾಂತ್ಯದಲ್ಲಿ ಅಥವಾ ರಜಾ ದಿನಗಳಲ್ಲಿ ಗರಿಷ್ಠ 5 ಪ್ರದರ್ಶನಗಳಿಗೆ ಮಾತ್ರ ಅವಕಾಶವಿದೆ.