ಮನೆ ಸುದ್ದಿ ಜಾಲ ಕಬಿನಿ ಜಲಾಶಯ ಭರ್ತಿಗೆ ೫ ಅಡಿಯಷ್ಟೇ ಬಾಕಿ

ಕಬಿನಿ ಜಲಾಶಯ ಭರ್ತಿಗೆ ೫ ಅಡಿಯಷ್ಟೇ ಬಾಕಿ

0

ಮೈಸೂರು(Mysuru): ಕಬಿನಿ ಜಲಾಶಯ ತುಂಬಲು ಕೇವಲ ೫ ಅಡಿಗಳಷ್ಟೇ ಬಾಕಿ ಇದ್ದು, ನದಿ ಪಾತ್ರದ ಗ್ರಾಮದ ಜನರಿಗೆ ಸುರಕ್ಷಿತ ಸ್ಥಳಕ್ಕೆ ತೆರಳಲು ಸೂಚಿಸಲಾಗಿದೆ.
ಕೇರಳದ ವಯನಾಡು ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಜಲಾಶಯಕ್ಕೆ ಯಥೇಚ್ಛ ನೀರು ಹರಿದು ಬರುತ್ತಿದೆ. ಜಲಾಶಯದ ಗರಿಷ್ಠ ಮಟ್ಟ ೨,೨೮೪ ಅಡಿಗಳಾಗಿದ್ದು, ಇಂದಿನ ಮಟ್ಟ ೨,೨೭೯ ಅಡಿಗಳಿಗೆ ತಲುಪಿದೆ.
ಜಲಾಶಯಕ್ಕೆ ೧೮,೫೪೩ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ೨,೮೭೫ ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ಒಳ ಹರಿವು ೧೭,೩೫೩ ಕ್ಯೂಸೆಕ್, ಹೊರ ಹರಿವು ೨,೮೭೫ ಕ್ಯೂಸೆಕ್ ಇದೆ. ಗುರುವಾರದಿಂದ ಜಲಾಶಯದ ಒಳಹರಿವು ಕೂಡ ಹೆಚ್ಚಾಗಿದೆ.