ಮನೆ ಸುದ್ದಿ ಜಾಲ ತಿರುವನಂತಪುರ-ದೆಹಲಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬೆಂಕಿ: ಐದು ಮಂದಿಗೆ ಗಾಯ

ತಿರುವನಂತಪುರ-ದೆಹಲಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬೆಂಕಿ: ಐದು ಮಂದಿಗೆ ಗಾಯ

0

ರತ್ನಾಮ್/ಕೋಟಾ: ಕೇರಳದ ರಾಜಧಾನಿ ತಿರುವನಂತಪುರದಿಂದ ನವದೆಹಲಿಯ ಹಜರತ್ ನಿಜಾಮುದ್ದೀನ್‌ಗೆ ತೆರಳುತ್ತಿದ್ದ ರಾಜಧಾನಿ ಎಕ್ಸ್‌ಪ್ರೆಸ್ ರೈಲಿನ ಎ.ಸಿ. ಕೋಚ್‌ನಲ್ಲಿ ಭಾನುವಾರ ಬೆಳಿಗ್ಗೆ 5.15ರ ಸುಮಾರಿಗೆ ವೇಳೆ ಬೆಂಕಿ ಕಾಣಿಸಿಕೊಂಡಿದ್ದು ಮಧ್ಯಪ್ರದೇಶದ ರತ್ನಾಮ್‌ನಲ್ಲಿ ಈ ಅವಘಡ ಸಂಭವಿಸಿದ್ದು, ಕೋಚ್‌ನಲ್ಲಿ 65 ಮಂದಿ ಪ್ರಯಾಣಿಕರಿದ್ದರು. ಬೆಂಕಿ ಕಾಣಿಸಿಕೊಂಡ ತಕ್ಷಣವೇ, 15 ನಿಮಿಷಗಳಲ್ಲಿ ಎಲ್ಲ ಪ್ರಯಾಣಿಕರನ್ನು ತೆರವುಗೊಳಿಸಲಾಯಿತು. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ದುರಂತದಿಂದ ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು ಎಂದು ತಿಳಿದುಬಂದಿದೆ.

ರೈಲಿನಲ್ಲಿ ‘ಬೆಳಿಗ್ಗೆ 5.15ರ ವೇಳೆಗೆ ಬಿ-1 ಕೋಚ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತು. ರತ್ನಾಮ್ ಜಂಕ್ಷನ್‌ನಿಂದ 3.45ರ ಸುಮಾರಿಗೆ ಹೊರಟಿತ್ತು. ರಾಜಸ್ಥಾನದ ಕೋಟಾ ವಿಭಾಗದಲ್ಲಿರುವ ವಿಕ್ರಮಗಢ ಹಾಗೂ ಲುನಿ ರಿಚಾ ನಿಲ್ದಾಣಗಳ ಮಧ್ಯೆ ಬೆಂಕಿ ಕಾಣಿಸಿಕೊಂಡಿತು’ ಎಂದು ಪಶ್ಚಿಮ ಮಧ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಹರ್ಷಿತ್ ಶ್ರೀ ವಾತ್ಸವ ತಿಳಿಸಿದ್ದಾರೆ. ‘ಬೆಂಕಿ ಕಾಣಿಸಿಕೊಂಡ 15 ನಿಮಿಷದಲ್ಲಿಯೇ ಎಲ್ಲ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಲಾಯಿತು. ಬಿ-1 ಕೋಚ್‌ಗೆ ಹೊಂದಿಕೊಂಡಿದ್ದ ಲಗೇಜ್ ಕಮ್ ಗಾರ್ಡ್ ವ್ಯಾನ್‌ಗೆ ಹಾನಿಯುಂಟಾಗಿದೆ’ ಎಂದು ವಿವರಿಸಿದ್ದಾರೆ. ಅನಾಹುತ ಸಂಭವಿಸಿದ ತಕ್ಷಣ ರೈಲ್ವೆ ಅಧಿಕಾರಿಗಳು ಓವರ್‌ಹೆಡ್‌ ಎಲೆಕ್ಟಿಕ್ ವಿದ್ಯುತ್‌ ಸಂಚಾರವನ್ನು ಕಡಿತಗೊಳಿಸಿ, ಬೆಂಕಿಯನ್ನು ನಿಯಂತ್ರಿಸಿದರು. ಹಾನಿಗೊಳಗಾದ ಕೋಚ್ ಹಾಗೂ ಲಗೇಜ್ ವ್ಯಾನ್ ಅನ್ನು ಪ್ರತ್ಯೇಕಿಸಿ ಬೆಳಿಗ್ಗೆ 9.45ರ ಸುಮಾರಿಗೆ ಪ್ರಯಾಣ ಮುಂದುವರಿಸಿದೆ’ ಎಂದು ಮಾಹಿತಿ ನೀಡಿದ್ದಾರೆ.  ಹಾಗೂ ‘ಪೂರ್ವ ನಿಗದಿಯಂತೆ ರೈಲು ಬೆಳಿಗ್ಗೆ 8.45ರ ಸುಮಾರಿಗೆ ಕೋಟಾ ನಿಲ್ದಾಣ ತಲುಪಬೇಕಿತ್ತು. ಆದರೆ, 11 ಗಂಟೆಗೆ ಕೋಟಾಗೆ ತಲುಪಿದೆ. ನಿಲ್ದಾಣದಲ್ಲಿ ಹೆಚ್ಚುವರಿ ಬೋಗಿ ಅಳವಡಿಸಿದ ನಂತರ, ಎಲ್ಲ ಪ್ರಯಾಣಿಕರಿಗೂ ಅನುಕೂಲ ಮಾಡಿಕೊಡಲಾಯಿತು’ ಎಂದು ಶ್ರೀವಾತ್ಸವ ತಿಳಿಸಿದ್ದಾರೆ ಎನ್ನಲಾಗಿದೆ.

ನಂತರ“ಎಲ್ಲ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಲಾಯಿತು. ಕೋಟಾದಿಂದ ಎಲ್ಲ ಪ್ರಯಾಣಿಕರಿಗೂ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ’ ಎಂದು ಕೋಟಾ ರೈಲ್ವೆ ಸಾರ್ವಜನಿಕ ಸಂಪರ್ಕಾಧಿಕಾರಿ ರವೀಂದ್ರ ಲಖಾರಾ ತಿಳಿಸಿದ್ದಾರೆ. ಅಗ್ನಿ ಅವಘಡದಿಂದ ದೆಹಲಿ-ಮುಂಬೈ ನಡುವೆ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಿದ್ದರಿಂದ ಐದರಿಂದ 6 ರೈಲುಗಳ ಸಂಚಾರಕ್ಕೂ ತೊಂದರೆ ಉಂಟಾಯಿತು. ಕೆಲವು ರೈಲುಗಳನ್ನು ಹಿಂದಿನ ನಿಲ್ದಾಣದಲ್ಲಿಯೇ ನಿಲ್ಲಿಸಲಾಯಿತು. ರೈಲು ಸಂಚಾರದ ಕುರಿತಂತೆ ಪ್ರಯಾಣಿಕರಿಗೆ ಸಹಾಯವಾಣಿಯ ಮೂಲಕ ಮಾಹಿತಿ ರವಾನಿಸಲಾಯಿತು. ರತ್ನಾಮ್ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅಜಯ್ ಕುಮಾರ್ ಪರಿಸ್ಥಿತಿಯನ್ನು ಮೇಲ್ವಿಚಾರಣೆ ನಡೆಸಿದರು. ರೈಲು ಸಂಚಾರವನ್ನು ಪುನ‌ರ್ ಸ್ಥಾಪಿಸುವ ನಿಟ್ಟಿನಲ್ಲಿ ಹೆಚ್ಚುವರಿ ಸಿಬ್ಬಂದಿ ಜೊತೆಗೆ ಟವ‌ರ್ ವ್ಯಾಗನ್ ಕಳುಹಿಸಿಕೊಡಲಾಯಿತು ಎನ್ನಲಾಗುತ್ತಿದೆ.