ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಜಿಲ್ಲಾ ಘಟಕದ ಸದಸ್ಯರು ಇಂದು ವಿನೋಬ ರಸ್ತೆಯಲ್ಲಿರುವ ಪ್ರಾದೇಶಿಕ ಆಯುಕ್ತರ ಕಚೇರಿಗೆ ಭೇಟಿ ನೀಡಿ
ಗರಿಷ್ಠ ಚಿಲ್ಲರೆ ಬೆಲೆ ಮುದ್ರಣದ ಮೇಲೆ ಮಿತಿ ವಿಧಿಸಲು ಶಾಸನ ರಚನೆಗೆ ಒತ್ತಾಯಿಸಿ, ಹೆಚ್ಚುವರಿ ಆಯುಕ್ತರಾದ ಶಿವರಾಜ್ ರವರಿಗೆ ಮನವಿ ಮಾಡಿದರು.
ವ್ಯಾಪಾರದಲ್ಲಿ ಪಾರದರ್ಶಕತೆಯನ್ನು ತರಲು ವ್ಯಾಪಾರಿಗಳು ಮತ್ತು ಗ್ರಾಹಕರ ಹಿತಾಸಕ್ತಿಗಳನ್ನು ಸಮತೋಲನಗೊಳಿಸಲು ಉತ್ಪನ್ನದ ಮೇಲೆ ವೆಚ್ಚ ಮತ್ತು ಮಾರಾಟ ವೆಚ್ಚವನ್ನು ಕಡ್ಡಾಯವಾಗಿ ಮುದ್ರಿಸಬೇಕೆಂದು ಒತ್ತಾಯಿಸಿ ಮನವಿ ಪತ್ರ ನೀಡಿದರು.
ಈ ಸಂದರ್ಭದಲ್ಲಿ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕದ ಅಧ್ಯಕ್ಷರಾದ ಸಿ ಎಸ್ ಚಂದ್ರಶೇಖರ್, ರಾಜ್ಯ ಶಿಕ್ಷಣ ಸಂಚಾಲಕರಾದ ಜಿ ವಿ ರವಿಶಂಕರ್, ಉಪಾಧ್ಯಕ್ಷರಾದ ವಿಕ್ರಂ ಅಯ್ಯಂಗಾರ್, ಪ್ರಾಂತ ಸದಸ್ಯರಾದ ಡಾ. ರಾಘವೇಂದ್ರ, ಕಾನೂನು ಸಲಹೆಗಾರರಾದ ಪುಷ್ಪ, ಕಾರ್ಯದರ್ಶಿ ಶ್ರೀಕಂಠೇಶ್, ಸದಸ್ಯರಾದ ದಯಾನಂದ ನಾಯಕ್ ಹಾಗೂ ಇನ್ನಿತರರು ಹಾಜರಿದ್ದರು.
















