ಹನುಮಕೊಂಡ (ತೆಲಂಗಾಣ): ನೈಸರ್ಗಿಕ ಇಂಧನ ಬಳಕೆಗೆ ಹೆಚ್ಚು ಒತ್ತು ನೀಡಿ, ಸುಸ್ಥಿರ ಬಳಕೆಗೆ ಮುಂದಾಗುವ ನಿಟ್ಟಿನಲ್ಲಿ ಭೀಮದೇವರಪಲ್ಲಿ ಮಂಡಲದ ಮುಲ್ಕನೂರು ಸಹಕಾರಿ ಸಂಘ ದೇಶಕ್ಕೆ ಮಾದರಿ ಆಗಿದೆ. ಸೂರ್ಯನ ಶಕ್ತಿಯನ್ನು ಬಳಸಿಕೊಂಡು, ತನ್ನ ಬೃಹತ್ ವಾರ್ಷಿಕ ವಿದ್ಯುತ್ ವೆಚ್ಚವನ್ನು ಅರ್ಧದಷ್ಟು ಕಡಿತಗೊಳಿಸಿಕೊಂಡಿದ್ದು ಈ ಸಹಕಾರಿ ಸಂಘವು ಒಂದು ಕಾಲದಲ್ಲಿ ಅಕ್ಕಿ ಮತ್ತು ಬೀಜದ ಗಿರಣಿಗಳನ್ನು ನಿರ್ವಹಿಸುವ ಮೂಲಕ ದೊಡ್ಡ ಪ್ರಮಾಣದ ಕೈಗಾರಿಕಾ ಕಾರ್ಯಾಚರಣೆ ನಡೆಸುತ್ತಿತ್ತು.
ಈ ಮೂಲಕ ವಾರ್ಷಿಕ ಸುಮಾರು 2 ಕೋಟಿ ರೂ.ಗೂ ಹೆಚ್ಚು ವಿದ್ಯುತ್ ಬಿಲ್‌ಗಳನ್ನು ಪಾವತಿಸುತ್ತಿತ್ತು. ಆದರೆ, ಕಳೆದ ದಶಕದಿಂದ ಸಂಘ ಸೌರಶಕ್ತಿಯನ್ನು ಅಳವಡಿಸಿಕೊಳ್ಳುವ ಮೂಲಕ ಸಂಸ್ಥೆಯು ತನ್ನ ವಾರ್ಷಿಕ ವಿದ್ಯುತ್ ಬಿಲ್ ಅನ್ನು ಸುಮಾರು 1 ಕೋಟಿ ರೂ.ಗೆ ಇಳಿಸುವಲ್ಲಿ ಯಶಸ್ವಿಯಾಗಿದೆ. ಇದರಿಂದಾಗಿ ವಾರ್ಷಿಕ ಸುಮಾರು 1 ಕೋಟಿ ರೂ ಉಳಿತಾಯವಾಗುತ್ತದೆ. ಸೊಸೈಟಿಯ ಗಿರಣಿಗಳು ಪ್ರತಿ ವರ್ಷ ಸುಮಾರು 2.4 ಮಿಲಿಯನ್ ಯೂನಿಟ್ ವಿದ್ಯುತ್ ಬಳಕೆ ಮಾಡುತ್ತವೆ. ಕಾರ್ಯಾಚರಣೆ ವೆಚ್ಚ ಮತ್ತು ಸಾಂಪ್ರದಾಯಿಕ ವಿದ್ಯುತ್ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ನವೀಕರಿಸಬಹುದಾದ ಶಕ್ತಿಯನ್ನು ಉತ್ತೇಜಿಸುವ ಕೇಂದ್ರ ಸರ್ಕಾರದ ಸಬ್ಸಿಡಿ ಯೋಜನೆಗಳನ್ನು ಬಳಸಿಕೊಳ್ಳಲು ಆಡಳಿತ ಮಂಡಳಿ ನಿರ್ಧರಿಸಿದೆ. ಸುಮಾರು ಹತ್ತು ವರ್ಷಗಳ ಹಿಂದೆ, ಸೊಸೈಟಿಯು ತನ್ನ ಜಿನ್ನಿಂಗ್ ಮಿಲ್ ಆವರಣದಲ್ಲಿ ಸುಮಾರು ಎರಡೂವರೆ ಎಕರೆ ಪ್ರದೇಶದಲ್ಲಿ 500 ಕಿಲೋವ್ಯಾಟ್ ಸೌರ ವಿದ್ಯುತ್ ಸ್ಥಾವರವನ್ನು ಸ್ಥಾಪಿಸಿತ್ತು.
ಇದರ ಸಕಾರಾತ್ಮಕ ಫಲಿತಾಂಶಗಳಿಂದ ಉತ್ತೇಜಿತರಾದ ಆಡಳಿತ ಮಂಡಳಿಯು ಮೂರು ವರ್ಷಗಳ ಹಿಂದೆ 300 ಕಿಲೋವ್ಯಾಟ್ ಸೌರ ಉತ್ಪಾದನಾ ಸಾಮರ್ಥ್ಯಕ್ಕೆ ಅದನ್ನು ಮತ್ತಷ್ಟು ವಿಸ್ತರಿಸಿಕೊಂಡಿದೆ. ಈ ಯೋಜನೆಗಾಗಿ ಒಟ್ಟು 6 ಕೋಟಿ ರೂ ಹೂಡಿಕೆ ಮಾಡಲಾಗಿದ್ದು, ಸರ್ಕಾರಿ ಸಬ್ಸಿಡಿಗಳನ್ನು ಪಡೆದ ನಂತರ, ಸಹಕಾರಿ ಸಂಸ್ಥೆಯ ನಿಜವಾದ ಖರ್ಚು 4.5 ಕೋಟಿ ರೂಗೆ ಇಳಿಕೆ ಕಂಡಿದೆ. ಆದರಿಂದ ಅಧಿಕಾರಿಗಳ ಪ್ರಕಾರ, ಸೌರ ಸ್ಥಾವರವು ಈಗ ವಾರ್ಷಿಕವಾಗಿ ಸುಮಾರು 1.2 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದಿಸುತ್ತಿದೆ. ಈ ವ್ಯವಸ್ಥೆಯನ್ನು ಮುಖ್ಯ ವಿದ್ಯುತ್ ಗ್ರಿಡ್‌ಗೆ ಸಂಪರ್ಕಿಸಲಾಗಿದ್ದು, ಇದು ದಕ್ಷ ಇಂಧನ ಬಳಕೆಯನ್ನು ಸಕ್ರಿಯಗೊಳಿಸಿದೆ. ಬಾಹ್ಯ ವಿದ್ಯುತ್ ಸರಬರಾಜಿನ ಮೇಲಿನ ಅವಲಂಬನೆಯನ್ನು ಕೂಡಾ ಕಡಿಮೆ ಮಾಡಿಕೊಂಡಿದೆ. ಸೌರ ಯೋಜನೆಯು ನಮ್ಮ ವಿದ್ಯುತ್ ಹೊರೆಯನ್ನು ಗಣನೀಯವಾಗಿ ಕಡಿಮೆ ಮಾಡಿದೆ. ಇಲ್ಲಿ ಉತ್ಪಾದಿಸುವ ಸೌರಶಕ್ತಿಯು ನಮ್ಮ ಕಾರ್ಯಾಚರಣೆಗಳಿಗೆ ಸಾಕಾಗುತ್ತದೆ.
ಹಾಗೂ ಋತುಮಾನಕ್ಕೆ ಅನುಗುಣವಾಗಿ ಗರಿಷ್ಠ ಬೇಡಿಕೆಯ ಸಮಯದಲ್ಲಿ ಮಾತ್ರ ವಿದ್ಯುತ್ ಬಿಲ್‌ಗಳನ್ನು ಪಾವತಿಸುವ ಸ್ಥಿತಿ ಸಂಘಕ್ಕಿದೆ. ಈ ಉಪಕ್ರಮವು ಕಾರ್ಯಾಚರಣೆಯ ವೆಚ್ಚವನ್ನು ಕಡಿಮೆ ಮಾಡಿರುವುದಲ್ಲದೇ, ಸಂಸ್ಥೆಯ ಆರ್ಥಿಕ ಸ್ಥಿರತೆಯನ್ನು ಬಲಪಡಿಸಿದೆ ಎಂದು ಬ್ಯಾಂಕ್ ಮತ್ತು ಸೊಸೈಟಿ ಅಧಿಕಾರಿಗಳು ತಿಳಿಸಿದ್ದಾರೆ. ನವೀಕರಿಸಬಹುದಾದ ಇಂಧನವು ಸಹಕಾರಿ ಮತ್ತು ಕೃಷಿ ವಲಯಗಳ ವೆಚ್ಚಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತಿದೆ. ಪರಿಸರ ಸುಸ್ಥಿರತೆಯನ್ನು ಬೆಂಬಲಿಸುತ್ತದೆ ಎಂಬುದಕ್ಕೆ ಈ ಯೋಜನೆಯು ಪ್ರಾಯೋಗಿಕ ಉದಾಹರಣೆಯಾಗಿದೆ ಎಂದು ಸಂಘವು ಹೇಳಿಕೊಂಡಿದೆ. ಮುಲ್ಕನೂರು ಸಹಕಾರಿ ಸಂಘದ ಯಶಸ್ಸು ಈಗ ಈ ಪ್ರದೇಶದಾದ್ಯಂತದ ರೈತರು, ಕೈಗಾರಿಕಾ ನಿರ್ವಾಹಕರು ಮತ್ತು ಸಹಕಾರಿ ಸಂಸ್ಥೆಗಳಿಂದ ಗಮನ ಸೆಳೆಯುತ್ತಿದೆ. ಅವರಲ್ಲಿ ಅನೇಕರು ಈ ಮಾದರಿಯನ್ನು ಸೌರ ಆಧಾರಿತ ಇಂಧನ ಪರಿಹಾರಗಳನ್ನು ಅಳವಡಿಸಿಕೊಳ್ಳಲು ಸ್ಫೂರ್ತಿಯಾಗಿದೆ. ಗ್ರಾಮೀಣ ಕೈಗಾರಿಕೆಗಳು ಮತ್ತು ಸಹಕಾರಿ ಸಂಘಗಳ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವುದರ ಜೊತೆಗೆ ಸಾಂಪ್ರದಾಯಿಕ ವಿದ್ಯುತ್ ಮೂಲಗಳ ಮೇಲಿನ ಅವಲಂಬನೆ ಕಡಿಮೆ ಮಾಡುವಲ್ಲಿ ಇಂತಹ ಉಪಕ್ರಮಗಳು ನಿರ್ಣಾಯಕ ಪಾತ್ರ ವಹಿಸುತ್ತವೆ ಎಂದು ತಜ್ಞರು ತಿಳಿಸಿದ್ದಾರೆ ಎನ್ನಲಾಗಿದೆ.
















