ಮನೆ ಸುದ್ದಿ ಜಾಲ ಎಂಎಲ್​ಸಿ ಹೆಚ್​. ವಿಶ್ವನಾಥ್ : ಕಾಂಗ್ರೆಸ್​ ಸಾಧನಾ ಸಮಾವೇಶ

ಎಂಎಲ್​ಸಿ ಹೆಚ್​. ವಿಶ್ವನಾಥ್ : ಕಾಂಗ್ರೆಸ್​ ಸಾಧನಾ ಸಮಾವೇಶ

0

ಮೈಸೂರು: ರಾಜ್ಯದಲ್ಲಿ ಇರುವ ಕಾಂಗ್ರೆಸ್ ಸರ್ಕಾರ ಸಮಾವೇಶ ಮಾಡುತ್ತಿರುವುದು ಯಾವ ಸಾಧನೆ ಮಾಡಿರುವುದಕ್ಕೆ ಎಂದು ಲೇವಡಿ ಮಾಡಿದ ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಈ ​ಸಾಧನಾ ಸಮಾವೇಶ ಹೈಕಮಾಂಡ್ ಹೆದರಿಸಲು ಎಂದು ವ್ಯಾಂಗ್ಯವಾಡಿದ್ದು ಮೈಸೂರಿನ ಪತ್ರಕರ್ತ ಭವನದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ​ ಸಾಧನಾ ಸಮಾವೇಶ ಏತಕ್ಕೆ? ಹಿಜಾಬ್ ಬೇಕು ಎಂದು ಕೇಳಿದವರು ಯಾರು? ರಾಜ್ಯದಲ್ಲಿ ವಿರೋಧ ಪಕ್ಷವೇ ಇಲ್ಲದಂದಾಗಿದೆ. ಇನ್ನು ಸಾಂಸ್ಕೃತಿಕ ನಗರಿ ಡ್ರಗ್ಸ್ ನಗರಿಯಾಗಿದೆ ಎಂದು ವಾಗ್ದಾಳಿ ನಡೆಸಿದರು ಎನ್ನಲಾಗಿದೆ.

ಈ ಕುರಿತು ಏನು ಸಾಧನೆ ಮಾಡಿದ್ದೀರಾ ಅಂತ ಸಮಾವೇಶ ಮಾಡ್ತಿದೀರಾ? ಸಾಧನೆಯ ಬಗ್ಗೆ ಮಾತನಾಡುವುದು ಸಾರ್ವಜನಿಕರು. ನಿಮ್ಮನ್ನು ನೀವೇ ಹೊಗಳಿಕೊಳ್ಳುವುದಕ್ಕೆ ಸಾಧನೆ ಸಮಾವೇಶ ಮಾಡ್ತಿದೀರಾ? ಇದು ಜನರನ್ನು ಮರೆತಿರುವ ಸರ್ಕಾರ. ಕೇವಲ ಪ್ರಚಾರಗಳಿಗೆ ಸೀಮಿತವಾಗಿರುವ ಸರ್ಕಾರ ಸಾಧನಾ ಸಮಾವೇಶಕ್ಕೆ ಜನರನ್ನು ದುಡ್ಡು ಕೊಟ್ಟು ಕರೆಸ್ತೀರಾ? ಸಾಧನಾ ಸಮಾವೇಶದ ಖರ್ಚು ವೆಚ್ಚದ ಬಗ್ಗೆ ಯೋಚನೆ ಮಾಡ್ತಿದೀರಾ. ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬಕ್ಕೆ ಗ್ಯಾರಂಟಿ ಕೊಡುವುದು ಸರಿ. ಜನರ ತೆರಿಗೆ ದುಡ್ಡನ್ನು ಹೇಗೆ ಬೇಕೋ ಆ ರೀತಿ ಖರ್ಚು ಮಾಡ್ತಿದೀರಿ ಎಂದು ಅವರು ಹರಿಹಾಯ್ದರು. ಹಿಜಾಬ್ ಬೇಕು ಎಂದು ಕೇಳಿದವರು ಯಾರು? ಹಿಜಾಬ್ ಬಗ್ಗೆ ನಿಮಗೆ ಯಾರಾದ್ರೂ ಮನವಿ ಮಾಡಿದ್ರಾ? ಹಿಂದೂ ಮುಸ್ಲಿಂ ನಡುವೆ ಜಗಳ ತಂದು ಹಾಕೋದೇ ನಿಮ್ಮ ಕೆಲಸಾನಾ? ಮದ್ಯದ ಬೆಲೆ ನಿರಂತರವಾಗಿ ಏರಿಕೆ ಮಾಡ್ತಿದೀರಾ? ಯುವಕರು ಮಾದಕ ಪದಾರ್ಥಗಳ ವ್ಯಸನಿಗಳಾಗ್ತಿದ್ದಾರೆ ಎಂದು ಹೇಳಿದರು. ಸಾಧನಾ ಸಮಾವೇಶಕ್ಕಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದ್ದಾರೆ.

ಇದೊಂದು ಕೆಟ್ಟ ಸಂಪ್ರದಾಯ, ಆರ್ಥಿಕವಾಗಿ ಸಂಕಷ್ಟದಲ್ಲಿರುವ ಸಂಸಾರಕ್ಕೆ ಗ್ಯಾರಂಟಿಗಳನ್ನು ನೀಡಬೇಕಿತ್ತು. ಹೇ ಮಹದೇವಪ್ಪ ನಿನ್ನ ಹೆಂಡ್ತಿಗೂ ಫ್ರೀ, ನನ್ನ ಹೆಂಡ್ತಿಗೂ ಫ್ರೀ ಎಂದು ಎಲ್ಲರಿಗೂ ಗ್ಯಾರಂಟಿ ಕೊಟ್ಟರು. ಗ್ಯಾರಂಟಿಗಳಿಗೋಸ್ಕರ ಎಲ್ಲದರ ಬೆಲೆಗಳನ್ನು ಹೆಚ್ಚು ಮಾಡಿದ್ದೀರಿ. ಒಂದು ಬಿಯರ್ ಬೆಲೆ 250 ರೂಪಾಯಿ ಮಾಡಿದ್ದಾರೆ. 50 ರೂಪಾಯಿ ಕೊಟ್ಟರೆ ಒಂದು ಪ್ಯಾಕೆಟ್ ಗಾಂಜಾ ಸಿಗುತ್ತೆ. ಇದರಿಂದ ಯುವಕರು ಗಾಂಜಾ ವ್ಯಸನಕ್ಕೆ ಮೊರೆ ಹೋಗುತ್ತಿದ್ದಾರೆ. ಮೈಸೂರು ಗಾಂಜಾ, ಅಫೀಮು ಕೇಂದ್ರವಾಗುತ್ತಿದೆ ಎಂದು ಹೆಚ್​ ವಿಶ್ವನಾಥ್​ ದೂರಿದರು. ನಾರಾಯಣಮೂರ್ತಿ, ಸುಧಾ ಮೂರ್ತಿಯಂತಹ ಇನ್ಫೋಸಿಸ್ ಸಂಸ್ಥೆಯ ಸಂಸ್ಥಾಪಕರೇ ವಿಮಾನದಲ್ಲಿ ಎಕಾನಮಿ ಕ್ಲಾಸ್​ನಲ್ಲಿ ಪ್ರಯಾಣ ಮಾಡುತ್ತಾರೆ. ಆದರೆ ಸಿದ್ದರಾಮಯ್ಯ ಡೆಲ್ಲಿಗೆ ಹೋದರೂ ಸ್ಪೆಷಲ್ ಫ್ಲೈಟ್, ಮೈಸೂರಿಗೆ ಬಂದರೂ ಸ್ಪೆಷಲ್ ಫ್ಲೈಟ್. ರಾಜ್ಯದ ತೆರಿಗೆ ಹಣವನ್ನು ಸಿದ್ದರಾಮಯ್ಯ ಪೋಲು ಮಾಡುತ್ತಿದ್ದಾರೆ. ರಾಜ್ಯದಲ್ಲಿ ವಿಪಕ್ಷವೇ ಇಲ್ಲದಂತಾಗಿದೆ. ನಾನು ಕೂಡ ಬಿಜೆಪಿಯಲ್ಲಿದ್ದೇನೆ. ನನ್ನಷ್ಟು ಕೂಡ ವಿಪಕ್ಷ ನಾಯಕರು ಸರ್ಕಾರದ ವಿರುದ್ಧ ಮಾತನಾಡುತ್ತಿಲ್ಲ ಎಂದು ಹೇಳಿದರು ಎನ್ನಬಹುದು.