ಮನೆ ಸುದ್ದಿ ಜಾಲ ಆರೋಪ  : ನೀರಿನ ದಾಹದಿಂದ ದಣಿದು 10 ಹಸುಗಳು ಸಾವು

ಆರೋಪ  : ನೀರಿನ ದಾಹದಿಂದ ದಣಿದು 10 ಹಸುಗಳು ಸಾವು

0

ಬಾರ್ಮರ್ (ರಾಜಸ್ಥಾನ): ಜಿಲ್ಲೆಯಲ್ಲಿ ತೀವ್ರ ರಣಬಿಸಿಲು ಇರುವುದರಿಂದ ಮನುಷ್ಯರು ಮತ್ತು ಪ್ರಾಣಿಗಳ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತಿದೆ. ಇಲ್ಲಿನ ಗಡಿಯಲ್ಲಿರುವ ಡೆರಾಸರ್ ಗ್ರಾಮದಲ್ಲಿ ಹನಿ ನೀರಿಗೂ ತತ್ವಾರ ಉಂಟಾಗಿದೆ. ಈ ನೀರಿನ ಕೊರತೆಯನ್ನು ತೆರೆದಿಡುವ ಹೃದಯವಿದ್ರಾವಕ ಘಟನೆಯೊಂದು ಬೆಳಕಿಗೆ ಬಂದಿದೆ. ನೀರು ಹುಡುಕುತ್ತಾ ಕೊಳಕ್ಕೆ ಬಂದು 10 ಜಾನುವಾರುಗಳು ದಾಹದಿಂದ ಸಾವನ್ನಪ್ಪಿವೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ ಎನ್ನಲಾಗಿದೆ.

ಈ ಕುರಿತಂತೆ ಪ್ರತಿಕ್ರಿಯಿಸಿರುವ ಬಾರ್ಮರ್ ಜಿಲ್ಲಾಧಿಕಾರಿ ಚಿನ್ಮಯ್ ಗೋಪಾಲ್ ಅವರು ಉಪವಿಭಾಗಾಧಿಕಾರಿಯಿಂದ ವರದಿ ಕೋರಲಾಗಿದೆ ಎಂದು ಹೇಳಿದ್ದಾರೆ. ವರದಿ ಬಂದ ನಂತರ ವಿವರವಾದ ಮಾಹಿತಿಯನ್ನು ಒದಗಿಸಲಾಗುವುದು. ಡೆರಾಸರ್ ಗ್ರಾಮದಲ್ಲಿ ನಡೆದ ಜಾನುವಾರುಗಳ ಸಾವಿನ ಕುರಿತು ತಹಶಿಲ್ದಾರ್ ಅವರಿಂದ ವರದಿ ಕೇಳಲಾಗಿದೆ ಎಂದು ಉಪವಿಭಾಗಾಧಿಕಾರಿ ರಾಮಲಾಲ್ ಮೀನಾ ತಿಳಿಸಿದರು. ಈ ಬಗ್ಗೆ ಅವರು ನೀರು ಸರಬರಾಜು ಇಲಾಖೆಯ ಅಧಿಕಾರಿಗಳೊಂದಿಗೆ ಮಾತನಾಡಿದರು ಮತ್ತು ಟ್ಯಾಂಕರ್‌ಗಳಿಂದ ನೀರು ಪೂರೈಸುವಂತೆ ಆದೇಶಿಸಿದ್ದು ಕಳೆದ ಹಲವು ದಿನಗಳಿಂದ ಜಿಲ್ಲೆಯಲ್ಲಿ ಬಿಸಿಲು ತೀವ್ರಗತಿಯಲ್ಲಿ ಏರಿಕೆ ಆಗುತ್ತಿದ್ದು, ಜಿಲ್ಲಾ ಕೇಂದ್ರ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲೂ ನೀರಿನ ಕೊರತೆ ಹೆಚ್ಚಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ವಿಡಿಯೋದ ನಂತರ, ನೀರಿನ ಕೊರತೆಯಿಂದಾಗಿ ಜಾನುವಾರುಗಳು ಸಾವನ್ನಪ್ಪಿವೆ ಎಂದು ಗ್ರಾಮಸ್ಥರು ದೂರಿದ್ದಾರೆ. ನೀರು ಹುಡುಕುತ್ತಾ ಇಲ್ಲಿಗೆ ಹಸು ಬಂದಿತ್ತು, ಆದರೆ ಅದು ಸಿಗದೆ ಬಾಯಾರಿಕೆಯಿಂದ ಸಾವನ್ನಪ್ಪಿದೆ ಎಂದು ಗ್ರಾಮಸ್ಥರು ವರದಿ ಮಾಡಿದ್ದಾರೆ.

ಹಾಗೂ ಸ್ಥಳೀಯ ಗ್ರಾಮಸ್ಥ ಅಜೀಜ್ ಖಾನ್ ಅವರು 10 ದಿನಗಳ ಹಿಂದೆ ರಾಮ್ಸರ್‌ನಲ್ಲಿರುವ ಪಿಹೆಚ್‌ಇಡಿ ಕಚೇರಿಗೆ ಭೇಟಿ ನೀಡಿ ನೀರಿನ ಸಮಸ್ಯೆಯ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಅಧಿಕಾರಿಗಳು ಟ್ಯಾಂಕರ್ ಕಳುಹಿಸುವುದಾಗಿ ಭರವಸೆ ನೀಡಿದ್ದರು, ಆದರೆ ಯಾರನ್ನೂ ಕಳುಹಿಸಲಿಲ್ಲ ಎಂದು ಆರೋಪಿಸಿದರು. ಆದರಿಂದ ಜಲ ಕಾಲುವೆಯ ನೀರು ಸರಬರಾಜು ಸ್ಥಗಿತಗೊಂಡಿರುವುದರಿಂದ ಮತ್ತು ನೀರಿನ ಮಟ್ಟ ಕುಸಿದಿರುವುದರಿಂದ ಗ್ರಾಮವು ತೀವ್ರ ನೀರಿನ ಕೊರತೆಯನ್ನು ಎದುರಿಸುತ್ತಿದೆ ಎಂದು ಸರಪಂಚ್ ಅರ್ಷದ್ ರಾಜದ್ ಹೇಳಿದ್ದಾರೆ. ಗ್ರಾಮದಲ್ಲಿ ಹಸುಗಳು ಸಾವನ್ನಪ್ಪಿವೆ ಎಂದು ಜನ ಹೇಳಿದ್ದಾರೆ. ಆಡಳಿತವು ತಕ್ಷಣ ನೀರಿನ ವ್ಯವಸ್ಥೆ ಮಾಡಬೇಕು. ಗ್ರಾಮಸ್ಥರಿಂದ ದೂರುಗಳು ಬಂದ ನಂತರ ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದು ನೀರು ಸರಬರಾಜು ಇಲಾಖೆಯ ಎಸ್‌ಸಿ ಹಜಾರಿರಾಮ್ ಬಲ್ವಾ ಹೇಳಿದ್ದಾರೆ. ಡೆರಾಸರ್ ಸೇರಿದಂತೆ ರಾಮ್ಸರ್ ಬ್ಲಾಕ್‌ನ 37 ಹಳ್ಳಿಗಳು ಬಾರ್ಮರ್ ಲಿಫ್ಟ್ ಕಾಲುವೆಗೆ ಸಂಪರ್ಕ ಹೊಂದಿವೆ. ಆದರೆ ಕಾಲುವೆ ಮುಚ್ಚುವಿಕೆಯಿಂದಾಗಿ ಕಳೆದ ಒಂದು ತಿಂಗಳಿನಿಂದ ನಿಯಮಿತ ನೀರು ಸರಬರಾಜು ಮಾಡಲು ಅಡ್ಡಿಯಾಗಿದೆ ಎಂದು ತಿಳಿಸಿದ್ದಾರೆ ಎನ್ನಲಾಗುತ್ತಿದೆ.