ಮನೆ ಮನರಂಜನೆ ಹೊಯ್ಸಳ ಚಿತ್ರೀಕರಣದ ಸೆಟ್‌ ಗೆ ಭೇಟಿ ನೀಡಿದ ಕ್ರಿಕೆಟ್‌ ಆಟಗಾರ್ತಿ ವೇದಾ ಕೃಷ್ಣಮೂರ್ತಿ

ಹೊಯ್ಸಳ ಚಿತ್ರೀಕರಣದ ಸೆಟ್‌ ಗೆ ಭೇಟಿ ನೀಡಿದ ಕ್ರಿಕೆಟ್‌ ಆಟಗಾರ್ತಿ ವೇದಾ ಕೃಷ್ಣಮೂರ್ತಿ

0

ಮೈಸೂರು (Mysuru): ಡಾಲಿ ಧನಂಜಯ್ ಅಭಿನಯದ ʻಹೊಯ್ಸಳʼ ಚಿತ್ರದ ಚಿತ್ರೀಕರಣ ಮೈಸೂರಿನಲ್ಲಿ ಬಿರುಸಿನಿಂದ ಸಾಗಿದೆ. ಚಿತ್ರೀಕರಣದ ಸೆಟ್‌ ಗೆ ಭಾರತ ಮಹಿಳಾ ಕ್ರಿಕೆಟ್ ತಂಡದ ಖ್ಯಾತ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಭೇಟಿ ನೀಡಿದ್ದಾರೆ.

ಮೈಸೂರಿನಲ್ಲಿ ಪೊಲೀಸ್ ಠಾಣೆಯ ಸೆಟ್‌ ಒಂದರಲ್ಲಿ ‘ಹೊಯ್ಸಳ’ ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದು, ಸ್ಥಳಕ್ಕೆ ವೇದಾ ಕೃಷ್ಣಮೂರ್ತಿ ಭೇಟಿ ನೀಡಿ ಚಿತ್ರೀಕರಣ ವೀಕ್ಷಿಸಿದ್ದಾರೆ. ಜೊತೆಗೆ ಚಿತ್ರತಂಡಕ್ಕೆ ಶುಭ ಹಾರೈಸಿ, ಚಿತ್ರತಂಡದೊಂದಿಗೆ ಫೋಟೋ ತೆಗೆಸಿಕೊಂಡಿದ್ದಾರೆ. ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ವೇದಾ ಕೃಷ್ಣಮೂರ್ತಿ ಸೆಟ್‌ಗೆ ಭೇಟಿ ನೀಡಿದ ವೇಳೆ ಸಿನಿಮಾದ ನಾಯಕ ಡಾಲಿ ಧನಂಜಯ್, ನಾಯಕಿ ಅಮೃತಾ ಅಯ್ಯಂಗಾರ್, ನಿರ್ಮಾಪಕರಾದ ಕಾರ್ತಿಕ್ ಗೌಡ, ಯೋಗಿ ಜಿ.ರಾಜ್, ನಿರ್ದೇಶಕ ವಿಜಯ್ ನಾಗೇಂದ್ರ, ಸಾಹಸ ನಿರ್ದೇಶಕ ದಿಲೀಪ್ ಸುಬ್ಬರಾಯಣ್ ಮುಂತಾದವರು ಉಪಸ್ಥಿತರಿದ್ದರು.

ಮಹಿಳಾ ಕ್ರಿಕೆಟ್ ನಲ್ಲಿ ವೇದಾ ಕೃಷ್ಣಮೂರ್ತಿ ಅವರು ತಮ್ಮದೇ ಆದ ಹೆಸರು ಮಾಡಿದ್ದಾರೆ. 2017 ರ ಮಹಿಳಾ ಕ್ರಿಕೆಟ್ ವಿಶ್ವಕಪ್ ನಲ್ಲಿ ಭಾರತ ತಂಡ ಫೈನಲ್ ತಲುಪಿತು. ಆ ತಂಡದಲ್ಲಿ ವೇದಾ ಕೃಷ್ಣಮೂರ್ತಿ ಸಹ ಇದ್ದರು. ಕಡೂರಿನವರಾಗಿರುವ ವೇದಾ ಕೃಷ್ಣಮೂರ್ತಿ ಭಾರತ ಮಹಿಳಾ ತಂಡದ ಪರವಾಗಿ 48 ಒನ್‌ ಡೇ, 74 ಟಿ20 ಪಂದ್ಯಗಳನ್ನಾಡಿದ್ದಾರೆ. ಜೊತೆಗೆ ಬಿಗ್‌ಬ್ಯಾಶ್ ಲೀಗ್ ಪಂದ್ಯಗಳಲ್ಲಿಯೂ ವೇದಾ ಆಡಿದ್ದಾರೆ.