ಪಿಡಿಓಗೆ ಎಂಪಿ ಸುನಿಲ್ ಬೋಸ್ ಫುಲ್ ಕ್ಲಾಸ್, ಯಾರಿಗಯ್ಯ ಹೂವು ಮುಡಿಸೋದು, ನಾಟಕ ಆಡ್ತಿದ್ದೀರಾ… ಯಾವ ಕೆಡಿಪಿ ಮೀಟಿಂಗ್, ಕಥೆ ಹೇಳ್ಬೇಡ.., ಒಬ್ಬ ಎಂಪಿ ಬಂದಿದ್ದೀನಿ ಇಲ್ಲಿ, ಭೇಟಿ ವೇಳೆ ಸ್ಥಳದಲ್ಲಿ ಇಲ್ಲದ ಪಿಡಿಓಗೆ ಮೊಬೈಲ್ ನಲ್ಲೇ ಹಿಗ್ಗಾಮುಗ್ಗ ತರಾಟೆ ತೆಗೆದುಕೊಂಡಿದ್ದಾರೆ.
ಈ ಸ್ಥಳೀಯರ ಸಮಸ್ಯೆ ಬಗ್ಗೆ ಸ್ಪಂದಿಸುವ ವೇಳೆ ಗೈರಾದ ಪಿಡಿಓ ಗೆ ಸಂಸದ ಸುನಿಲ್ ಬೋಸ್ ಮೊಬೈಲ್ ನಲ್ಲೇ ಹಿಗ್ಗಾ ಮುಗ್ಗ ತರಾಟೆಗೆ ತೆಗೆದುಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ.ನಂಜನಗೂಡುದೇವರಾಯಶೆಟ್ಟಿ ಪುರ ಗ್ರಾಮ ಪಂಚಾಯ್ತಿ ಪಿಡಿಓ ಗೆ ಸುನಿಲ್ ಬೋಸ್ ಕ್ಲಾಸ್ ತೆಗೆದುಕೊಂಡಿದ್ದಾರೆ.ಕೊತ್ತನಹಳ್ಳಿ ಗ್ರಾಮದಲ್ಲಿ ಶಾಲಾ ಕಟ್ಟಡ ಉದ್ಘಾಟನೆಗೆ ಆಗಮಿಸಿದ ಸಂಸದ ಸುನಿಲ್ ಬೋಸ್ ಗೆ ಸ್ಥಳೀಯರು ಸಮಸ್ಯೆಗಳ ಅರ್ಜಿ ನೀಡಿದ್ದಾರೆ.
ಸಂಸದರು ಬಂದರೂ ಪಿಡಿಓ ಗೈರಾಗಿದ್ದರು. ಇದರಿಂದ ಕೆಂಡಾಮಂಡಲವಾದ ಸುನಿಲ್ ಬೋಸ್ ಮೊಬೈಲ್‌ನಲ್ಲಿ ಸಂಪರ್ಕಿಸಿ ಗೈರಾದ ಬಗ್ಗೆ ಪ್ರಶ್ನಿಸಿದಾಗ ಕೆಡಿಪಿ ಸಭೆಯಲ್ಲಿ ಇರುವುದಾಗಿ ತಿಳಿಸಿದ್ದಾರೆ.ಪಿಡಿಓ ಉತ್ತರಕ್ಕೆ ಗರಂ ಆದ ಸುನಿಲ್ ಬೋಸ್ ನಾನು ಮಾಡದ ಕೆಡಿಪಿ ಸಭೆಯಾ…? ಕೆಡಿಪಿ ಸಭೆಗೆ ಇಓ ಗಳು ಹೋಗಬೇಕು… ನಿನಗೇನು ಕೆಲಸ… ಯಾವ ಪಿಡಿಓ ಕೆಡಿಪಿ ಸಭೆಗೆ ಹೋಗಿದ್ದಾನೆ… ನಾನು ಎಂಪಿ ಇಲ್ಲಿ ಇದ್ದೀನಿ ಸ್ಥಳೀಯರ ಸಮಸ್ಯೆಗೆ ಏನು ಹೇಳೋದು…? ಕಥೆ ಹೇಳಬೇಡ…ನೀವೆಲ್ಲಾ ನಾಟಕ ಆಡ್ತಿದ್ದೀರಾ…?ಯಾರಿಗಯ್ಯ ಹೂವು ಮುಡಿಸ್ತಿದ್ದೀಯ…? ಎಂದಿ ಕಿಡಿ ಕಾರಿದರು.

















