ಮನೆ ಸುದ್ದಿ ಜಾಲ ಕೇಂದ್ರದ ಬಜೆಟ್‌ ದೇಶದ ಆರ್ಥಿಕತೆಗೆ ನೀಡುವ ಬೂಸ್ಟರ್‌ ಡೋಸ್‌ : ಸಚಿವೆ ಶಶಿಕಲಾ ಜೊಲ್ಲೆ

ಕೇಂದ್ರದ ಬಜೆಟ್‌ ದೇಶದ ಆರ್ಥಿಕತೆಗೆ ನೀಡುವ ಬೂಸ್ಟರ್‌ ಡೋಸ್‌ : ಸಚಿವೆ ಶಶಿಕಲಾ ಜೊಲ್ಲೆ

0

ಬೆಂಗಳೂರು:  ಇಂದು ಮಂಡನೆಯಾಗಿರುವ ಬಜೆಟ್ ನಮ್ಮ ದೇಶದ ಆರ್ಥಿಕತೆಗೆ ಬೂಸ್ಟರ್‌ ನೀಡುವ ಡೋಸ್‌ ಮುಜರಾಯಿ, ಹಜ್‌ ಮತ್ತು ವಖ್ಫ್‌ ಸಚಿವರಾದ ಶಶಿಕಲಾ ಜೊಲ್ಲೆ ಪ್ರತಿಕ್ರಿಯಿಸಿದ್ದಾರೆ.

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಬಜೆಟ್ ಮಂಡನೆ ಮಾಡಿದ್ದು,  ಪ್ರಧಾನಿ ನರೇಂದ್ರ ಮೋದಿ ಅವರ ದೂರದರ್ಶಿತ್ವದಲ್ಲಿ ನಾವುಗಳು ಅಭಿವೃದ್ದಿಯ ಅಮೃತ ಕಾಲಕ್ಕೆ ಸಾಕ್ಷೀಯಾಗಿದ್ದೇವೆ ಎಂದು ಹೇಳಿದ್ದಾರೆ.

ಮುಂದಿನ 25 ವರ್ಷಗಳ ಅಭಿವೃದ್ದಿಯ ನೀಲಿನಕ್ಷೆಯನ್ನು ವಿತ್ತ ಸಚಿವರು ನೀಡಿದ್ದಾರೆ. ಹೆದ್ದಾರಿ ಜಾಲವನ್ನ 25 ಸಾವಿರ ಕಿಲೋ ಮೀಟರ್‌ಗಳಷ್ಟು ವಿಸ್ತರಿಸುವುದು, ದೇಶದ 5 ನದಿಗಳನ್ನು ಜೋಡಿಸುವ ವಿಸ್ತ್ರುತ ಯೋಜನೆಯನ್ನು ಅಂತಿಮಗೊಳಿಸಿರುವುದು, ನೈಸರ್ಗಿಕ ಕೃಷಿಗೆ ಒತ್ತು ನೀಡುವಂತಹ ಮಹತ್ವದ ಅಂಶಗಳನ್ನು ಆಯವ್ಯಯದಲ್ಲಿ ತಿಳಿಸಿದ್ದಾರೆ.

ಡಿಜಿಟಲ್ ಶಿಕ್ಷಣಕ್ಕೆ ಒತ್ತು ನೀಡುವ ಉದ್ದೇಶದಿಂದ, ತರಗತಿಗೊಂದು ಟಿವಿ ಚಾನಲ್ ನ ಪ್ರಸ್ತಾವನೆ, ಪ್ರಾದೇಶಿಕ ಭಾಷೆಗಳೂ ಸೇರಿ 200 ಹೊಸ ಚಾನಲ್ ಆರಂಭಕ್ಕೆ ಪ್ರಸ್ತಾಪ, ಶಿಕ್ಷಕರುಗಳಿಗೆ ಡಿಜಿಟಲ್‌ ಟೂಲ್ಸ್‌ಗಳ ನೀಡುವಿಕೆ ಹೀಗೆ ಶಿಕ್ಷಣ ಕ್ಷೇತ್ರದ ಅಮೂಲಾಗ್ರ ಬದಲಾವಣೆಗೂ ಒತ್ತು ನೀಡಲಾಗಿದೆ. 2 ಲಕ್ಷ ಅಂಗನವಾಡಿಗಳ ಉನ್ನತೀಕರಣದಿಂದ ನಮ್ಮ ದೇಶದ ಮಕ್ಕಳಿಗೆ ಅತ್ಯುತ್ತಮ ಗುಣಮಟ್ಟದ ಪ್ರಾಥಮಿಕ ಶಿಕ್ಷಣ ದೊರೆಯಲಿದೆ. ಡಿಜಿಟಲ್‌ ಬ್ಯಾಂಕಿಂಗ್‌ ವ್ಯವಸ್ಥೆಗೆ ಒತ್ತು. ಮಹಿಳಾ ಮತ್ತು ಮಕ್ಕಳ ಅಭ್ಯದಯಕ್ಕೂ ಬಜೆಟ್‌ನಲ್ಲಿ ಆದ್ಯತೆ ನೀಡಲಾಗಿದೆ.

ಭವಿಷ್ಯದಲ್ಲಿ ಭಾರತ ದೇಶವನ್ನು ತಾಂತ್ರಿಕವಾಗಿ ಮತ್ತಷ್ಟು ಮೇಲ್ದರ್ಜೆಗೇರಿಸುವ ಮೂಲಕ ಎಲ್ಲಾ ವರ್ಗದ ಅಭ್ಯುದಯಕ್ಕೆ ಆದ್ಯತೆ ನೀಡಿರುವ ಬಜೆಟ್‌ ಇದಾಗಿದೆ ಎಂದು ಶಶಿಕಲಾ ಜೊಲ್ಲೆ ಅಭಿಪ್ರಾಯಪಟ್ಟಿದ್ದಾರೆ.

ಹಿಂದಿನ ಲೇಖನವಿನೋದ್ ಪ್ರಭಾಕರ್ ನಟನೆಯ ವರದ ಚಿತ್ರ ಫೆ.18 ರಂದು ತೆರೆಗೆ
ಮುಂದಿನ ಲೇಖನಸಮಗ್ರ ಆರ್ಥಿಕ ಸುಧಾರಣೆಗೆ ಒತ್ತು ನೀಡಿದ ಬಜೆಟ್: ಸಚಿವ ಡಾ.ಕೆ.ಸುಧಾಕರ್