ಮನೆ ಕ್ರೀಡೆ 2ನೇ ಟಿ20: ಇಂಗ್ಲೆಂಡ್‌ ವಿರುದ್ಧ 49 ರನ್‌ ಗಳ ಜಯ, ಸರಣಿ ವಶಪಡಿಸಿಕೊಂಡ ಭಾರತ

2ನೇ ಟಿ20: ಇಂಗ್ಲೆಂಡ್‌ ವಿರುದ್ಧ 49 ರನ್‌ ಗಳ ಜಯ, ಸರಣಿ ವಶಪಡಿಸಿಕೊಂಡ ಭಾರತ

0

ಬರ್ಮಿಂಗ್‌ ಹ್ಯಾಮ್‌ (Birmingham): ಇಂಗ್ಲೆಂಡ್‌ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಭಾರತ ತಂಡ 49 ರನ್‌ ಗಳ ಜಯಗಳಿಸಿಎದ. ಆ ಮೂಲಕ ಮೂರು ಪಂದ್ಯಗಳ ಸರಣಿಯನ್ನು 2–0 ರಿಂದ ವಶಪಡಿಸಿಕೊಂಡಿದೆ.

ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್ ತಂಡವನ್ನು ಸಮರ್ಥವಾಗಿ ಎದುರಿಸಿದ ಭಾರತದ ಬ್ಯಾಟ್ಸ್ಮನ್ ಗಳು 171 ರನ್ ಗಳ ಗುರಿ ನೀಡಿತ್ತು. ಮಧ್ಯಮವೇಗಿ ಭುವನೇಶ್ವರ್ ಕುಮಾರ್ ಅಮೋಘ ಬೌಲಿಂಗ್ ಬಲದಿಂದ ಭಾರತ ತಂಡವು ಇಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಜಯಗಳಿಸಿದೆ.

ಇಂಗ್ಲೆಂಡ್ ಗೆ ಆರಂಭದಲ್ಲೇ ಆಘಾತ ನೀಡಿದ ಭಾರತದ ಬೌಲರ್‌ ಗಳು ಪಂದ್ಯದ ಮೇಲೆ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾದರು. ಇಂಗ್ಲೆಂಡ್ ನ ಆರಂಭಿಕ ಆಟಗಾರರಾದ ಜೇಸನ್ ರಾಯ್, ಜೋಸ್ ಬಟ್ಲರ್, ವೈಫಲ್ಯದಿಂದ ಇಂಗ್ಲೆಂಡ್ ತಂಡ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಮೊಯೀನ್ ಅಲಿ ಹಾಗೂ ಡೇವಿಡ್ ವಿಲ್ಲೆ ಇಂಗ್ಲೆಂಡ್ ತಂಡದ ಪರ ಉತ್ತಮ ಸ್ಕೋರ್ ಗಳಿಸಲು ಯತ್ನಿಸಿದರಾದರೂ ಭಾರತದ ಬೌಲರ್ ಗಳ ಅಬ್ಬರದೆದುರು ಹೆಚ್ಚು ಸಮಯ ನಿಲ್ಲಲು ಸಾಧ್ಯವಾಗಲಿಲ್ಲ. ಪರಿಣಾಮ ಇಂಗ್ಲೆಂಡ್ ತಂಡ 17 ಓವರ್ ಗಳಿಗೆ 121 ರನ್ ಗಳಿಸಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಸೋಲೊಪ್ಪಿಕೊಂಡಿತು.

ಭುವನೇಶ್ವರ್ ಕುಮಾರ್ 1 ಮೇಡಿನ್ ಓವರ್, 15 ರನ್ ನೀಡಿ 3 ವಿಕೆಟ್ ಗಳಿಸುವ ಮೂಲಕ ಭಾರತದ ಪರ ಅತ್ಯುತ್ತಮ ಬೌಲರ್ ಎನಿಸಿದರು. 

ಇದಕ್ಕೂ ಮೊದಲು ಬ್ಯಾಟ್‌ ಮಾಡಿದ ಭಾರತ ತಂಡ ಜಡೇಜ (ಔಟಾಗದೆ 46 ರನ್)‌ ಮಿಂಚಿನ ಬ್ಯಾಟಿಂಗ್ ಬಲದಿಂದ ಭಾರತ ತಂಡವು 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 170 ರನ್‌ ಗಳಿಸಿತು.

ಆರನೇ ಕ್ರಮಾಂಕದಲ್ಲಿ ಜಡೇಜ ಕ್ರೀಸ್‌ಗೆ ಬಂದಾಗ ತಂಡದ ಸ್ಥಿತಿ ಉತ್ತಮವಾಗಿರಲಿಲ್ಲ. 89 ರನ್‌ಗಳಿಗೆ ಐದು ವಿಕೆಟ್‌ಗಳನ್ನು ಕಳೆದು ಕೊಂಡಿತ್ತು. ಆದರೆ ಆತಂಕದ ನಡುವೆಯೂ ಎಡಗೈ ಬ್ಯಾಟರ್ ಜಡೇಜ ದಿಟ್ಟ ಆಟವಾಡಿದರು. 158.62ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿದರು.

ರೋಹಿತ್–ರಿಷಭ್ ಉತ್ತಮ ಆರಂಭ:

ನಾಯಕ ರೋಹಿತ್ ಶರ್ಮಾ (31) ಮತ್ತು ರಿಷಭ್ ಪಂತ್ (26) ಭಾರತಕ್ಕೆ ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್‌ಗೆ 49 ರನ್‌ ಗಳಿಸಿದರು. ಐದನೇ ಓವರ್‌ನಲ್ಲಿ ರೋಹಿತ್ ವಿಕೆಟ್ ಗಳಿಸಿದ 34 ವರ್ಷದ ಗ್ಲೀಸನ್ ತಮ್ಮ ಖಾತೆ ತೆರೆದರು. ನಂತರದ ತಮ್ಮ ಇನ್ನೊಂದು ಓವರ್‌ನಲ್ಲಿ ದೊಡ್ಡ ಬೇಟೆಯನ್ನೇ ಆಡಿದರು. ಲಯ ಕಂಡುಕೊಳ್ಳಲು ಪರದಾಡುತ್ತಿರುವ ವಿರಾಟ್ ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು. ಪೇಸ್ ಮತ್ತು ಬೌನ್ಸ್‌ ಇದ್ದ ಎಸೆತವನ್ನು ಆಡುವ ಪ್ರಯತ್ನದಲ್ಲಿ ಬ್ಯಾಕ್‌ವರ್ಡ್ ಪಾಯಿಂಟ್‌ನಲ್ಲಿದ್ದ ಡೇವಿಡ್ ಮಲಾನ್‌ಗೆ ಕ್ಯಾಚಿತ್ತ ವಿರಾಟ್ ನಿರಾಶೆ ಅನುಭವಿಸಿದರು. ನಂತರದ ಎಸೆತದಲ್ಲಿ ರಿಷಭ್ ಪಂತ್ ಸ್ವಿಂಗ್ ಎಸೆತವನ್ನು ಕೆಣಕಿ, ಕೀಪರ್ ಬಟ್ಲರ್‌ಗೆ ಕ್ಯಾಚಿತ್ತರು.

ಕಳೆದ ಪಂದ್ಯದಲ್ಲಿ ಗೆಲುವಿನ ರೂವಾರಿಯಾಗಿದ್ದ ಹಾರ್ದಿಕ್ ಪಾಂಡ್ಯ, ಸ್ಪೋಟಕ ಶೈಲಿಯ ಬ್ಯಾಟರ್‌ ಸೂರ್ಯಕುಮಾರ್ ಯಾದವ್, ಕೊನೆಯ ಹಂತದಲ್ಲಿ ಹರ್ಷಲ್ ಪಟೇಲ್ ಹಾಗೂ ಭುವನೇಶ್ವರ್ ಅವರ ವಿಕೆಟ್‌ಗಳನ್ನು ಗಳಿಸಿದ ಜೋರ್ಡಾನ್ ಮಧ್ಯಮ ಮತ್ತು ಕೆಳಕ್ರಮಾಂಕಕ್ಕೆ ಪೆಟ್ಟುಕೊಟ್ಟರು. ದಿನೇಶ್ ಕಾರ್ತಿಕ್ ರನೌಟ್ ಆಗಿದ್ದು ಕೂಡ ಭಾರತ ತಂಡದ ದೊಡ್ಡ ಮೊತ್ತದ ಯೋಜನೆ ಫಲಿಸಲಿಲ್ಲ.

ಇಂಗ್ಲೆಂಡ್‌ ಪರ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ತೋರಿದ ರಿಚರ್ಡ್‌ ಗ್ಲೀಸನ್‌ ಮೂರು ವಿಕೆಟ್‌ ಕಬಳಿಸಿದರೆ, ಕ್ರಿಸ್‌ ಜೋಡರ್ನ್‌ 4 ವಿಕೆಟ್‌ ಕಬಳಿಸುವ ಮೂಲಕ ತಮ್ಮ ಅತ್ಯುತ್ತಮ ಲಯವನ್ನು ಮುಂದುವರಿಸಿದ್ದರು.

ಸಂಕ್ಷಿಪ್ತ ಸ್ಕೋರ್‌
ಭಾರತ: 20 ಓವರ್‌ಗಳಿಗೆ 170-8 (ರವೀಂದ್ರ ಜಡೇಜಾ 46*, ರೋಹಿತ್ ಶರ್ಮಾ 31, ರಿಷಭ್‌ ಪಂತ್ 26; ರಿಚರ್ಡ್‌ 15 ಕ್ಕೆ 3, ಕ್ರಿಸ್‌ ಜೋರ್ಡನ್ 27ಕ್ಕೆ 4)


ಇಂಗ್ಲೆಂಡ್‌: 17 ಓವರ್‌ಗಳಿಗೆ 121/10 (ಡೇವಿಡ್‌ ವಿಲ್ಲೀ 32*, ಮೊಯೀನ್‌ ಅಲಿ 35; ಭುವನೇಶ್ವರ್‌ ಕುಮಾರ್‌ 15ಕ್ಕೆ 3, ಜಸ್‌ಪ್ರೀತ್‌ ಬುಮ್ರಾ 10ಕ್ಕೆ 2, ಯುಜ್ವೇಂದ್ರ ಚಹಲ್‌ 10 ಕ್ಕೆ 2)