ನವದೆಹಲಿ : ರಾಜ್ಯ ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿ ಬದಲಾವಣೆಗೆ ಕಾಲ ಕೂಡಿ ಬಂದಂತೆ ಕಾಣ್ತಿದೆ. ನಾಯಕತ್ವ ಬದಲಾವಣೆ, ಸಚಿವ ಸಂಪುಟ ಪುನರ್ ರಚನೆಗೆ ಸಂಬ,ಧ ಚರ್ಚಿಸಲು ಹೈಕಮಾಂಡ್ ಸಿದ್ಧರಾಮಯ್ಯ ಅವರಿಗೆ ಬುಲಾವ್ ನೀಡಿದ್ದು, ದೆಹಲಿ ಅಂಗಳದಲ್ಲಿ ಇಂದು ನಡೆಯಲಿರುವ ಸಭೆಯಲ್ಲಿ ಸಂಧಾನ ಸೂತ್ರ ನಡೆಯುತ್ತಾ ಎನ್ನುವ ಪ್ರಶ್ನೆ ಕಾಣ್ತಿದೆ.
ಕಾಂಗ್ರೆಸ್ನಲ್ಲಿ ಪವರ್ ಪಾಲಿಟಿಕ್ಸ್ ನಿನ್ನೆ ಇವತ್ತಿನ ಮಾತಲ್ಲ. ಸರ್ಕಾರ ಬಂದಾಗಿನಿಂದಲೂ ಸೀಟ್ ಶೇರ್ ಫೈಟಿಂಗ್ ನಡೆಯುತ್ತಲೇ ಇದೆ. ಈಗ ರಾಜ್ಯದಲ್ಲಿ ನಾಯಕತ್ವದ ಬದಲಾವಣೆಗೆ ಮುಹೂರ್ತ ಕೂಡಿ ಬಂತಾ ಎಂಬ ಚರ್ಚೆ ಶುರುವಾಗಿದೆ. ಹೈಕಮಾಂಡ್ ಬುಲಾವ್ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ದೆಹಲಿಗೆ ರೀಚ್ ಆಗಿದ್ದಾರೆ. ಇಂದಿನ ಸಭೆ ಕರ್ನಟಕ ಕಾಂಗ್ರೆಸ್ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ.
ಇಂದು ಬೆಳಗ್ಗೆ ಹನ್ನೊಂದು ಗಂಟೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ನಿವಾಸದಲ್ಲಿ ಈ ಸಭೆ ನಿಗದಿಯಾಗಿದೆ. ಸಭೆಯಲ್ಲಿ ರಾಹುಲ್ ಗಾಂಧಿ, ವೇಣುಗೋಪಾಲ್, ಸುರ್ಜೇವಾಲಾ ಸಭೆಯಲ್ಲಿ ಭಾಗಿ ಆಗಲಿದ್ದಾರೆ. ಈ ನಾಲ್ವರ ಸಿಟ್ಟಿಂಗ್ನಲ್ಲಿ ಕುರ್ಚಿ ಕದನಕ್ಕೆ ಮದ್ದರೆಯುವ ಸಾಧ್ಯತೆ ದಟ್ಟವಾಗಿದೆ. ಹೈಕಮಾಂಡ್ ಬುಲಾವ್ ಮೇರೆಗೆ ದೆಹಲಿಗೆ ತೆರಳಿದ ಸಿಎಂ ಸಿದ್ದರಾಮಯ್ಯ ತಮ್ಮ ಜೊತೆಗೆ ಸಚಿವರ ದಂಡನ್ನು ಕೊಂಡೊಯ್ದಿದ್ದಾರೆ.
ದೆಹಲಿ ಭೇಟಿ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ಸಿಎಂ ನಿರಾಕರಿಸಿದ್ದು, ಹೇಳೋದೇನಿದೆ. ಎಲ್ಲವೂ ನಿಮಗೆ ಗೊತ್ತಲ್ವಾ ಎಂದಿದ್ದಾರೆ. ಸಿದ್ದರಾಮಯ್ಯ ನಡೆ ಸಾಕಷ್ಟು ಕುತೂಹಲ ಹೆಚ್ಚಿಸಿದೆ. ಹೈಕಮಾಂಡ್ ಮುಂದೆ ಯಾವುದೇ ಚಾನ್ಸ್ ತೆಗೆದುಕೊಳ್ಳಬಾರದು ಎಂದು ನಿರ್ಧರಿಸಿರುವ ಅವರು, ನಾಯಕತ್ವ ಬದಲಾವಣೆಗೆ ಹೈಕಮಾಂಡ್ ಮನಸ್ಸು ಮಾಡಿದರೆ ಬೇರೆಯದ್ದೇ ಲೆಕ್ಕಾಚಾರ ಹಾಕಿಕೊಂಡಿದ್ದಾರೆ. ಹಿರಿಯ ಸಚಿವರ ಮೂಲಕ ಒತ್ತಡ ಹಾಕಿಸುವ ಪ್ಲ್ಯಾನ್ನಲ್ಲಿದ್ದಾರೆ.
ಸಿಎಂ ಜೊತೆ ಗೃಹಸಚಿವ ಪರಮೇಶ್ವರ್, ಸಚಿವ ಎಂ.ಬಿ ಪಾಟೀಲ್, ಹೆಚ್.ಸಿ ಮಹದೇವಪ್ಪ, ಬೈರತಿ ಸುರೇಶ್, ಕೆಜೆ ಜಾರ್ಜ್, ಸತೀಶ್ ಜಾರಕಿಹೊಳಿ, ಕೆ.ವೆಂಕಟೇಶ್ ಹಾಗೂ ಶಾಸಕ ಪೊನ್ನಣ್ಣ ದೆಹಲಿ ಪ್ರಯಾಣ ಬೆಳೆಸಿದ್ದಾರೆ. ಸಿದ್ದರಾಮಯ್ಯ ಸೇರಿದಂತೆ ಅರ್ಧ ಕ್ಯಾಬಿನೆಟ್ ದೆಹಲಿಯಲ್ಲಿ ಠಿಕಾಣಿ ಹೂಡುತ್ತಿದೆ. ಇತ್ತ ಡಿಕೆ ನೊಣವಿಕೆರೆ ಅಜ್ಜಯ ಭೇಟಿ ಮಾಡಿದ್ದಾರೆ. ಈ ಮಧ್ಯೆ ದೆಹಲಿಗೆ ಡಿಕೆಶಿ ಸಹ ಹೋಗ್ತಾರೆ ಎಂದಿದ್ದ ಪಬ್ಲಿಕ್ ಟಿವಿ ವರದಿ ಸತ್ಯವಾಗಿದೆ.
ಮಾತಾಡಿದ ಡಿಕೆಶಿ, ದೆಹಲಿಗೆ ಹೋಗುತ್ತಿದ್ದೇನೆ. ಕೆಲವೊಂದು ಸಂದರ್ಭದಲ್ಲಿ ಹೋಗಬೇಕಾಗುತ್ತದೆ ಎಂದಿದ್ದಾರೆ. ಈ ಮೂಲಕ ದೆಹಲಿ ಅಂಗಳದಲ್ಲಿ ಕುರ್ಚಿ ಕೌತುಕ ಇನ್ನಷ್ಟ ಹೆಚ್ಚಾಗಿದೆ. ಸಿಎಂ ಒಂದು ಬಣ ದೆಹಲಿಗೆ ಪ್ರವಾಸ ಬೆಳೆಸಿದ್ದು ಆಗಿದೆ. ಅದೇ ರೀತಿ ಡಿಕೆ ಶಿವಕುಮಾರ್ ಬಣದ ಶಾಸಕರ, ಸಚಿವರು ಕೂಡಾ ದಿಲ್ಲಿ ಫ್ಲೈಟ್ ಏರಿದ್ದಾರೆ. ರಾಜ್ಯ ರಾಜಕಾರಣದ ಕುರ್ಚಿ ಕಾಳಗ ಹೈಕಮಾಂಡ್ ಹೊಸ್ತಿಲಿಗೆ ಶಿಫ್ಟ್ ಆಗಿದೆ.


















