ಮನೆ ರಾಜ್ಯ ಬಿಡದಿ ಟೌನ್‌ಶಿಪ್ ಜಟಾಪಟಿ; ಡಿಕೆಶಿ ಬಗ್ಗೆ ಮಾತನಾಡಿದ್ದ, ನಿಖಿಲ್‌ಗೆ ಸ್ಥಳೀಯ ಕಾಂಗ್ರೆಸ್ ನಾಯಕರಿಂದ ವಾರ್ನಿಂಗ್

ಬಿಡದಿ ಟೌನ್‌ಶಿಪ್ ಜಟಾಪಟಿ; ಡಿಕೆಶಿ ಬಗ್ಗೆ ಮಾತನಾಡಿದ್ದ, ನಿಖಿಲ್‌ಗೆ ಸ್ಥಳೀಯ ಕಾಂಗ್ರೆಸ್ ನಾಯಕರಿಂದ ವಾರ್ನಿಂಗ್

0

ರಾಮನಗರ : ಬಿಡದಿ ಟೌನ್‌ಶಿಪ್ ಜಟಾಪಟಿ ಹಿನ್ನೆಲೆ 2028ಕ್ಕೆ ಡಿಕೆಶಿ ಮಾಜಿ ಆಗುತ್ತಾರೆ ಎಂದಿದ್ದ ನಿಖಿಲ್ ಕುಮಾರಸ್ವಾಮಿಗೆ ಸ್ಥಳೀಯ ಕಾಂಗ್ರೆಸ್ ನಾಯಕರು ವಾರ್ನಿಂಗ್ ನೀಡಿದ್ದಾರೆ. ಡಿಕೆಶಿ ಬಗ್ಗೆ ಮಾತನಾಡಿದ್ರೆ ಘೇರಾವ್ ಹಾಕುವುದಾಗಿ ಕಾಂಗ್ರೆಸ್ ಮುಖಂಡರು ಎಚ್ಚರಿಕೆ ನೀಡಿದ್ದಾರೆ.

ಬಿಡದಿ ಟೌನ್‌ಶಿಪ್ ವಿಚಾರದಲ್ಲಿ ಜೆಡಿಎಸ್ ರೈತರನ್ನ ದಾರಿತಪ್ಪಿಸುವ ಕೆಲಸ ಮಾಡುತ್ತಿದೆ. 2006ರಲ್ಲಿ ಯೋಜನೆ ಆರಂಭಿಸಿದ್ದ ಜೆಡಿಎಸ್ ಇದೀಗ ಯೋಜನೆಗೆ ವಿರೋಧ ಮಾಡುತ್ತಿದೆ. ನಿಖಿಲ್ ಕುಮಾರಸ್ವಾಮಿಗೆ ರಾಜಕೀಯ ಗೊತ್ತಿಲ್ಲ. ಡಿಕೆಶಿ ಬಗ್ಗೆ ಹಗುರವಾಗಿ ಮಾತನಾಡಿ ದೊಡ್ಡ ನಾಯಕ ಆಗುತ್ತೀನಿ ಅಂದುಕೊಂಡಿದ್ದಾರೆ. ರೈತರ ಜಮೀನನ್ನ ರೆಡ್ ಮಾಡಿದ್ದೇ ಕುಮಾರಸ್ವಾಮಿ. ಈಗ ರೈತಪರ ಅಂತ ಡ್ರಾಮ ಮಾಡುತ್ತಿದ್ದಾರೆ.

ರಾಮನಗರದಲ್ಲಿ ಅಧಿಕಾರ ಅನುಭವಿಸಿ ಯಾವುದೇ ಅಭಿವೃದ್ಧಿ ಮಾಡಿಲ್ಲ. ಈಗ ಡಿಕೆಶಿ ಬಗ್ಗೆ ಇಲ್ಲಸಲ್ಲದ ಹೇಳಿಕೆ ನೀಡೋದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ. ನಿಖಿಲ್ ಇಂತಹ ಮಾತು ಮುಂದುವರಿಸಿದ್ರೆ ಪ್ರತಿಭಟನೆ ಮಾಡುತ್ತೇವೆ. ರಾಮನಗರಕ್ಕೆ ಬಂದಾಗ ಘೇರಾವ್ ಹಾಕುತ್ತೇವೆ ಎಂದು ಸ್ಥಳೀಯ ಕಾಂಗ್ರೆಸ್ ನಾಯಕರು ಎಚ್ಚರಿಕೆ ನೀಡಿದ್ದಾರೆ.