ಮನೆ ಸುದ್ದಿ ಜಾಲ ಮೇಕೆದಾಟು: ಡಿಎಂಕೆ ನಾಯಕನಿಗೆ ತಮಿಳುನಾಡು ಕಾಂಗ್ರೆಸ್​ ತಿರುಗೇಟು

ಮೇಕೆದಾಟು: ಡಿಎಂಕೆ ನಾಯಕನಿಗೆ ತಮಿಳುನಾಡು ಕಾಂಗ್ರೆಸ್​ ತಿರುಗೇಟು

0

ಚೆನ್ನೈ(ತಮಿಳುನಾಡು): ಮೇಕೆದಾಟು ಅಣೆಕಟ್ಟು ವಿಚಾರದಲ್ಲಿ ದ್ರಾವಿಡ ಪಕ್ಷದ ನಾಯಕರು ಅಗ್ಗದ ರಾಜಕೀಯ ಮಾಡುತ್ತಿದ್ದಾರೆ ಎಂದು ತಮಿಳುನಾಡು ಕಾಂಗ್ರೆಸ್​ ನಾಯಕ ಹಾಗು ವಿರುಧ್‌ನಗರ ಸಂಸದ ಬಿ.ಮಾಣಿಕ್ಕಂ ಟ್ಯಾಗೋರ್ ಟೀಕಿಸಿದ್ದಾರೆ. ನೆರೆಯ ಕರ್ನಾಟಕದ ಕಾಂಗ್ರೆಸ್ ಸರ್ಕಾರ ದುರಹಂಕಾರಿ ಮತ್ತು ತಮಿಳುನಾಡಿಗೆ ದ್ರೋಹ ಬಗೆದಿದೆ ಎಂದು ಡಿಎಂಕೆ ಪ್ರಧಾನ ಕಾರ್ಯದರ್ಶಿ ಕೆ.ಎನ್.ನೆಹರು ಅವರ ಹೇಳಿಕೆಗೆ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.  ಹಾಗೂ ಕಳೆದ 20 ದಿನಗಳ ಹಿಂದೆ ನಾವು ಅವರ ಜೊತೆಗಿದ್ದಾಗ ಯಾವುದೇ ಆರೋಪಗಳು ಬಂದಿರಲಿಲ್ಲ. ಇದೀಗ ಕಾಂಗ್ರೆಸ್​ ಪಕ್ಷವನ್ನು ಗುರಿಯಾಗಿಸಿ ಹೇಳಿಕೆ ನೀಡುತ್ತಿದ್ದಾರೆ. ಇದು ಅಗ್ಗದ ರಾಜಕೀಯ ಎಂದು ಅವರು ಟೀಕಿಸಿದ್ದಾರೆ ಎನ್ನಲಾಗುತ್ತಿದೆ.

ಈ ಕುರಿತು ಎಕ್ಸ್​ ಜಾಲತಾಣದಲ್ಲಿ ಪೋಸ್ಟ್​ ಮಾಡಿರುವ ಟ್ಯಾಗೋರ್, ಕರ್ನಾಟಕದ ಜನರು ಅವರ ಜನರಿಗಾಗಿ ಹೋರಾಡುತ್ತಿದ್ದಾರೆ. ತಮಿಳುನಾಡು ಕಾಂಗ್ರೆಸ್​ ಕೂಡ ರಾಜ್ಯದ ರೈತರ ಪರವಾಗಿ ನಿಂತಿದ್ದು, ಹೋರಾಡುತ್ತಿದೆ. ನಮ್ಮ ಕಾವೇರಿಯ ಹಕ್ಕುಗಳನ್ನು ರಕ್ಷಿಸಲು ಅವಶ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದಿದ್ದಾರೆ. ಲೋಕಸಭೆಯಲ್ಲಿ ಕಾಂಗ್ರೆಸ್​ ವಿಪ್​ ಆಗಿರುವ ಟ್ಯಾಗೋರ್​, ರಾಜ್ಯದ ಹಿತಾಸಕ್ತಿಗಾಗಿ ಕಾಂಗ್ರೆಸ್ ಮಾಡಿರುವ ಮಹತ್ವದ ಕೆಲಸಗಳ​ ಇತಿಹಾಸವನ್ನು ಮರೆಯಬೇಡಿ ಎಂದು ತಿಳಿಸುತ್ತಾ, ತಮಿಳುನಾಡಿನ ಹಿತಾಸಕ್ತಿಗಾಗಿ ಟಿಎನ್‌ಸಿಸಿ ಮಾಜಿ ಮುಖ್ಯಸ್ಥ ವಾಜಪಾಡಿ ಕೆ.ರಾಮಮೂರ್ತಿ ಅವರು ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ನಿದರ್ಶನವನ್ನು ನೆನಪಿಸಿದ್ದಾರೆ. ಅಲ್ಲದೇ, ನಾವೆಂದೂ ಅಗ್ಗದ ರಾಜಕೀಯ ಮಾಡಿಲ್ಲ ಎಂದು ತಿರುಗೇಟು ನೀಡಿದ್ದಾರೆ. ಮೇಕೆದಾಟು ಅಣೆಕಟ್ಟೆಯ ಕುರಿತು ಡಿಪಿಆರ್​ ಅನ್ನು ಶೀಘ್ರದಲ್ಲೇ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಇತ್ತೀಚಿಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿರುವುದಕ್ಕೆ ನೆಹರು, ಕರ್ನಾಟಕದ ಕಾಂಗ್ರೆಸ್​​ ದುರಹಂಕಾರಿ ಮತ್ತು ತಮಿಳುನಾಡಿಗೆ ದ್ರೋಹ ಬಗೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಇದರಿಂದ ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ, ಕೆಳಗಿನ ನದಿಪಾತ್ರದ ರಾಜ್ಯಗಳ ಪೂರ್ವಾನುಮತಿ ಇಲ್ಲದೆ ಮೇಕೆದಾಟುವಿನಲ್ಲಿ ಯಾವುದೇ ನಿರ್ಮಾಣ ಚಟುವಟಿಕೆಗಳನ್ನು ಮಾಡುವಂತಿಲ್ಲ ಎಂಬುದು ಅವರ ವಾದ. ಡಿ.ಕೆ.ಶಿವಕುಮಾರ್​ ಅವರು ಅಣೆಕಟ್ಟು ವಿಚಾರವಾಗಿ ಆಕ್ಷೇಪ ವ್ಯಕ್ತಪಡಿಸುವ ಯಾವುದೇ ಹಕ್ಕು ತಮಿಳುನಾಡಿಗಿಲ್ಲ ಎನ್ನುತ್ತಾರೆ. ಇದು ಅವರ ದುರಂಹಕಾರವನ್ನು ತೋರಿಸುತ್ತದೆ. ತಮಿಳುನಾಡಿನಲ್ಲಿ ದುರ್ಬಲ ಸಮ್ಮಿಶ್ರ ಸರ್ಕಾರ ಅಸ್ತಿತ್ವದಲ್ಲಿದೆ ಎಂದು ಭಾವಿಸಿ ಅವರು ಇಂತಹ ಹೇಳಿಕೆಗಳನ್ನು ನೀಡಿದಂತೆ ಕಾಣುತ್ತದೆ. ಕಾಂಗ್ರೆಸ್ ಪಕ್ಷ ಟಿವಿಕೆ ಸರ್ಕಾರದ ಭಾಗವಾಗಿರುವುದರಿಂದ ಯಾವುದೇ ವಿರೋಧ ಇರುವುದಿಲ್ಲ ಎಂದು ಭಾವಿಸಿ ಅವರು ಇಂಥ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಹೇಳಿದ್ದಾರೆ. ಡಿಎಂಕೆ ಮೈತ್ರಿಯೊಂದಿಗೆ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಐದು ಸ್ಥಾನ ಗೆದ್ದಿರುವ ಕಾಂಗ್ರೆಸ್​​, ಇದೀಗ ಟಿವಿಕೆ ಸರ್ಕಾರದ ಭಾಗವಾಗಿದೆ. ಕಾಂಗ್ರೆಸ್​ನ ಇಬ್ಬರು ಶಾಸಕರು ಸಿಎಂ ಜೋಸೆಫ್​ ವಿಜಯ್​ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿದ್ದಾರೆ. ಇದಾದ ಬಳಿಕ ಡಿಎಂಕೆ ಮತ್ತು ಕಾಂಗ್ರೆಸ್ ಸಂಬಂಧದಲ್ಲಿ ಬಿರುಕು ಮೂಡಿದೆ ಎಂಬುದ್ದಾಗಿದೆ.