ಮನೆ ಸುದ್ದಿ ಜಾಲ ಗಲ್ಫ್​​ನಲ್ಲಿ ಸಂಕಷ್ಟಕ್ಕೆ ಸಿಲುಕಿದ ಮತ್ತೊಂದು ಹಡಗು

ಗಲ್ಫ್​​ನಲ್ಲಿ ಸಂಕಷ್ಟಕ್ಕೆ ಸಿಲುಕಿದ ಮತ್ತೊಂದು ಹಡಗು

0

ನವದೆಹಲಿ: ಇರಾನ್, ಇಸ್ರೇಲ್ ಮತ್ತು ಅಮೆರಿಕ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆ ಮಧ್ಯ ಮಸ್ಕತ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಗುರುವಾರ ಓಮನ್ ಬಂದರಿನಲ್ಲಿ ಹಡಗೊಂದು ಸಿಲುಕಿಕೊಂಡಿರುವ ಘಟನೆಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದೆ ಎಂದು ಹೇಳಿದೆ. ಈ ಬಗ್ಗೆ X ಪೋಸ್ಟ್ ಮಾಡಿದ ಭಾರತೀಯ ರಾಯಭಾರ ಕಚೇರಿ, ಇಂದು ಮುಂಜಾನೆ ಓಮನ್‌ನ ಶಿನಾಸ್ ಬಂದರಿನಲ್ಲಿ ಹಡಗೊಂದು ಸಿಲುಕಿಕೊಂಡಿರುವ ಘಟನೆಯ ಬಗ್ಗೆ ನಮಗೆ ತಿಳಿದುಬಂದಿದೆ. ನಾವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ಮತ್ತು ಹೆಚ್ಚಿನ ವಿವರಗಳಿಗಾಗಿ ಸ್ಥಳೀಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುತ್ತಿದ್ದೇವೆ ಎಂದು ಹೇಳಿದೆ. ಹಡಗಿನ ಹೆಸರು MT ಜಲವೀರ್ ಎಂದು ಹಲವಾರು ವರದಿಗಳು ಸೂಚಿಸಿದರೂ, ಅಧಿಕಾರಿಗಳು ಹಡಗಿನ ಬಗ್ಗೆ ಹಾಗೂ ಹಡಗಿನಲ್ಲಿರುವ ಜನರ ಸಂಖ್ಯೆ, ಘಟನೆಯ ಸ್ವರೂಪ, ಯಾವುದೇ ಹಾನಿಯ ಪ್ರಮಾಣ ಅಥವಾ ಸಾವುನೋವುಗಳು ಸಂಭವಿಸಿವೆಯೇ ಎಂಬುದರ ಕುರಿತು ಇನ್ನೂ ಅಧಿಕೃತವಾಗಿ ಏನನ್ನೂ ಬಹಿರಂಗಪಡಿಸಿಲ್ಲ ಎಂಬುದ್ದಾಗಿದೆ.

ಹಾಗೂ ಭಾರತೀಯ ನಾವಿಕರನ್ನು ಹೊಂದಿದ್ದ ‘ಸೆಟ್ಟೆಬೆಲ್ಲೊ’ ವಾಣಿಜ್ಯ ಹಡಗು ಒಮಾನ್ ಕರಾವಳಿಯಲ್ಲಿ ಅಮೆರಿಕದ ಮಿಲಿಟರಿ ದಾಳಿಗೆ ಒಳಗಾದ ಒಂದು ದಿನದ ನಂತರ ಈ ಇತ್ತೀಚಿನ ಎಚ್ಚರಿಕೆ ಬಂದಿದೆ. ನಂತರ ವಿದೇಶಾಂಗ ಸಚಿವಾಲಯ (MEA) ಅಮೆರಿಕದ ಚಾರ್ಜ್ ಡಿ’ಅಫೇರ್‌ಗಳನ್ನು ಕರೆಸಿ ಬಲವಾದ ಪ್ರತಿಭಟನೆ ಸಲ್ಲಿಸಿದೆ. ಈ ಘಟನೆಯ ಕುರಿತು ಚಾರ್ಜ್ ಡಿ’ಅಫೇರ್‌ ಜೇಸನ್ ಮೀಕ್ಸ್ ಅವರಿಗೆ ಡಿಮಾರ್ಚ್ ಅಥವಾ ರಾಜತಾಂತ್ರಿಕ ಪ್ರತಿಭಟನೆಯ ಟಿಪ್ಪಣಿಯನ್ನು ನೀಡಲಾಗಿದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ. ಬುಧವಾರದ ದಾಳಿಯಲ್ಲಿ ಮೂವರು ಭಾರತೀಯ ನಾವಿಕರು ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಲಾಗಿದೆ ಎಂದು ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವ ಸರ್ಬಾನಂದ ಸೋನೋವಾಲ್ ದೃಢಪಡಿಸಿದ್ದಾರೆ. ಏತನ್ಮಧ್ಯೆ, ಫಾರ್ವರ್ಡ್ ಸೀಮೆನ್ಸ್ ಯೂನಿಯನ್ ಆಫ್ ಇಂಡಿಯಾ (FSUI) ಹಡಗಿನಿಂದ ದಟ್ಟವಾದ ಹೊಗೆ ಹೊರಬರುತ್ತಿರುವ ಛಾಯಾಚಿತ್ರಗಳನ್ನು ಪೋಸ್ಟ್ ಮಾಡಿದೆ. 20 ಭಾರತೀಯ ನಾವಿಕರು ಅದರಲ್ಲಿರಬಹುದು ಎಂದು ಹೇಳಲಾಗುತ್ತಿದೆ. ಓಮನ್ ಕರಾವಳಿಯಲ್ಲಿ ಹಡಗಿನ ಮೇಲೆ ನಡೆದ ದಾಳಿಯಲ್ಲಿ ಭಾರತೀಯ ನಾವಿಕರ ಹತ್ಯೆಯನ್ನು ಖಂಡಿಸಿದ FSUI ಪ್ರಧಾನ ಕಾರ್ಯದರ್ಶಿ ಮನೋಜ್ ಯಾದವ್, ವ್ಯಾಪಾರಿ ಹಡಗುಗಳ ಮೇಲೆ ಅಮೆರಿಕದಿಂದಲೇ ದಾಳಿ ನಡೆಯುತ್ತಿರುವುದು ಆಶ್ಚರ್ಯಕರವಾಗಿದೆ ಎಂದು ಹೇಳಿದ್ದಾರೆ. ಆರಂಭದಲ್ಲಿ ಇರಾನಿನ ಕ್ಷಿಪಣಿಗಳು ಮತ್ತು ಡ್ರೋನ್‌ಗಳು ದಾಳಿ ಮಾಡುತ್ತಿವೆ ಎಂದು ಇರಾನ್ ಮೇಲೆ ನಿರಂತರವಾಗಿ ದೂಷಿಸಲಾಗುತ್ತಿತ್ತು. ನಾವಿಕನಾಗಿ, ಅಮೆರಿಕದ ನೌಕಾ ನೆಲೆ ಅಥವಾ ಅದರ ಮಿಲಿಟರಿ ಸಿಬ್ಬಂದಿ ಮತ್ತು ಅದರಲ್ಲಿದ್ದ ಅವರ ರಾಷ್ಟ್ರೀಯತೆಯ ವಿವರಗಳನ್ನು ಹೊಂದಿಲ್ಲ ಎಂಬುದನ್ನು ನಾನು ಒಪ್ಪಿಕೊಳ್ಳಲು ಸಿದ್ಧನಿಲ್ಲ ಎಂದಿದ್ದಾರೆ.

ಹಡಗಿನ ಮೇಲಿನ ದಾಳಿಯ ನಂತರ, ಅಂತಾರಾಷ್ಟ್ರೀಯ ಸಾಗರ ಸಂಸ್ಥೆ (IMO) ಸಹ ತೀವ್ರ ಕಳವಳ ವ್ಯಕ್ತಪಡಿಸಿದೆ ಮತ್ತು ನಾವಿಕರ ಜೀವ ಮತ್ತು ಅಂತಾರಾಷ್ಟ್ರೀಯ ಸಾಗಣೆಯ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಯಾವುದೇ ಕೃತ್ಯವನ್ನು ಸ್ವೀಕಾರಾರ್ಹವಲ್ಲ ಎಂದು ಹೇಳಿದೆ. ಇದಕ್ಕೂ ಮೊದಲು, ಒಮಾನ್ ಕರಾವಳಿಯಲ್ಲಿ ಹಡಗಿನ ಮೇಲೆ ಕ್ಷಿಪಣಿ ದಾಳಿಯ ನಂತರ, ಒಮಾನ್ ಅಧಿಕಾರಿಗಳ ಸಮನ್ವಯದೊಂದಿಗೆ ವ್ಯಾಪಾರಿ ಟ್ಯಾಂಕರ್‌ನ ಸುಮಾರು ಎರಡು ಡಜನ್ ಭಾರತೀಯ ಸಿಬ್ಬಂದಿಯನ್ನು ರಕ್ಷಣೆ ಮಾಡಲಾಗಿದೆ. ಭಾರತವು ಉದ್ವಿಗ್ನತೆಯನ್ನು ಕಡಿಮೆ ಮಾಡಲು, ವಾಣಿಜ್ಯ ಸಾಗಣೆಯ ರಕ್ಷಣೆ ಮತ್ತು ಅಂತಾರಾಷ್ಟ್ರೀಯ ಜಲಗಡಿಯಲ್ಲಿ ಸುರಕ್ಷಿತ ಸಂಚಾರವನ್ನು ಪುನಃಸ್ಥಾಪಿಸಲು ತನ್ನ ಕರೆಯನ್ನು ಪುನರುಚ್ಚರಿಸಿದೆ. ಈ ಪ್ರದೇಶದಲ್ಲಿ ಹಡಗುಗಳ ಮೇಲೆ ನಡೆಯುತ್ತಿರುವ ದಾಳಿಯ ಘಟನೆಗಳು ತೀವ್ರ ಕಳವಳಕಾರಿ ಮತ್ತು ಈ ಪ್ರದೇಶದಲ್ಲಿ ನಡೆಯುತ್ತಿರುವ ಸಂಘರ್ಷದ ನೇರ ಪರಿಣಾಮವಾಗಿದೆ ಎಂದು MEA ಬುಧವಾರ ರಾತ್ರಿ ಬಿಡುಗಡೆ ಮಾಡಿದ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಉದ್ವಿಗ್ನತೆಯ ಉಲ್ಬಣವನ್ನು ತಕ್ಷಣವೇ ಕಡಿಮೆ ಮಾಡಲು ಮತ್ತು ರಾಜತಾಂತ್ರಿಕ ಪರಿಹಾರಕ್ಕಾಗಿ ನಡೆಯುತ್ತಿರುವ ಮಾತುಕತೆಗಳನ್ನು ಮುಕ್ತಾಯಗೊಳಿಸುವಂತೆ ನಾವು ಒತ್ತಾಯಿಸುತ್ತೇವೆ ಮತ್ತು ಪುನರುಚ್ಚರಿಸುತ್ತೇವೆ. ಇದರಿಂದಾಗಿ ಈ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆ ಮರಳಬಹುದು. ಈ ಪ್ರದೇಶದಲ್ಲಿ ವಾಣಿಜ್ಯ ಹಡಗು ಸಾಗಣೆ ಮತ್ತು ನಾಗರಿಕ ಮೂಲಸೌಕರ್ಯವನ್ನು ಗುರಿಯಾಗಿಸಿಕೊಂಡು ನಡೆಸುವ ದಾಳಿಗಳು ಕೊನೆಗೊಳ್ಳಬೇಕು ಎಂದು ವಿದೇಶಾಂಗ ಇಲಾಖೆ ತಿಳಿಸಿದೆ ಎನ್ನಬಹುದು .