ಮನೆ ಸುದ್ದಿ ಜಾಲ ಮಿಸ್ ಸ್ಟೇಟ್ ಕಿರೀಟ ಗೆದ್ದ ಮಾಡೆಲ್ ಹರ್ಷಾ ಸನ್ನಿ ಬಂಧನ

ಮಿಸ್ ಸ್ಟೇಟ್ ಕಿರೀಟ ಗೆದ್ದ ಮಾಡೆಲ್ ಹರ್ಷಾ ಸನ್ನಿ ಬಂಧನ

0

ಬ್ಯೂಟಿ ಕ್ಷೇತ್ರದಲ್ಲಿ ಮಿಂಚುತ್ತಿದ್ದ ಮಾಡೆಲ್ ಹಲವು ಬ್ಯೂಟಿ ಕಿರೀಟ ಗೆದ್ದುಕೊಂಡಿದ್ದಾರೆ. ಇದೀಗ ಪೊಲೀಸರ ಅತಿಥಿಯಾದ ಕತೆ ಇದು. ಕೇರಳ ಮಿಸ್ ಇಂಡಿಯಾ ಕಿರೀಟ ಗೆದ್ದ 28ರ ಹರೆಯದ ಮಾಡೆಲ್ ಹರ್ಷಾ ಸನ್ನಿ ಮುಂಬನ ಛತ್ರಪತಿ ಶಿವಾಜಿ ಮಹಾರಾಜ್ ವಿಮಾನ ನಿಲ್ದಾಣದಲ್ಲಿ ಅರೆಸ್ಟ್ ಆಗಿದ್ದು ಥಾಯ್ಲೆಂಡ್‌ನಿಂದ ಮುಂಬೈ ವಿಮಾನ ನಿಲ್ದಾಣಕ್ಕೆ ಮರಳಿದ ಮಾಡೆಲ್ ಹರ್ಷಾ ಸನ್ನಿಯನ್ನು ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ಟ್ರೋಲಿ ಬ್ಯಾಗ್‌ಯನ್ನು ಏರ್ ಇಂಟಲಿಜೆನ್ಸ್ ಯುನಿಟ್ ಮೂಲಕ ಚೆಕ್ ಮಾಡಿದ್ದಾರೆ. ಈ ವೇಳೆ ಬ್ಯಾಗ್‌ನಲ್ಲಿ 11.82 ಕೋಟಿ ರೂಪಾಯಿ ಮೌಲ್ಯದ ಗಾಂಜಾ ಪತ್ತೆಯಾಗಿದೆ ಎನ್ನಲಾಗುತ್ತಿದೆ.

ಇದರ ಕುರಿತು ಬ್ಯಾಂಕಾಕ್‌ನಿಂದ ಮುಂಬೈನ ಛತ್ರಪತಿ ಶಿವಾಜಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮಾಡೆಲ್ ಹರ್ಷಾ ಸನ್ನಿ ಮೇಲೆ ಕಸ್ಟಮ್ಸ್ ಅಧಿಕಾರಿಗಳು ಕಣ್ಣಿಟ್ಟಿದ್ದರು. ಈಕೆಯ ನಡೆಯ ಮೇಲೂ ಅನುಮಾನ ಮೂಡಿಸಿತ್ತು ಹೀಗಾಗಿ ತೀವ್ರ ತಪಾಸಣೆಗೆ ಒಳಪಡಿಸಲಾಗಿತ್ತು. ಈ ವೇಳೆ 12 ಪ್ಯಾಕೆಟ್ ಮೂಲಕ ಟ್ರೋಲಿ ಬ್ಯಾಗ್‌ನಲ್ಲಿ ರಹಸ್ಯವಾಗಿ ಇಡಲಾಗಿತ್ತು. ಕಸ್ಟಮ್ಸ್ ಅಧಿಕಾರಿಗಳು ಮಾಡೆಲ್ ಹರ್ಷಾ ಸನ್ನಿ ಟ್ರೋಲಿ ಬ್ಯಾಗ್ ವಶಕ್ಕೆ ಪಡೆದು ಗಾಂಜಾ ಪತ್ತೆ ಹಚ್ಚಿದ್ದಾರೆ. ಇದರ ಬೆನ್ನಲ್ಲೇ ಇದು ತನ್ನ ಬ್ಯಾಗ್ ಅಲ್ಲ ಎಂದು ಮಾಡೆಲ್ ವಾದ ಮಂಡಿಸಿದ್ದಾಳೆ. ವಿಮಾನ ಇಳಿದು ನಿಲ್ದಾಣಕ್ಕೆ ಬರುತ್ತಿದ್ದಂತೆ ಯಾರೋ ಬ್ಯಾಗ್ ಕೊಟ್ಟರು ಅಮೇಲೆ ಅವರು ಕಾಣುತ್ತಿಲ್ಲ. ಈ ಬ್ಯಾಗ್ ನನ್ನದಲ್ಲ ಎಂದು ಹರ್ಷಾ ಹೇಳಿದ್ದಾರೆ.

ಆದರೆ ಹರ್ಷಾ ಸನ್ನಿ ವಾದ ಮಂಡಿಸಿದರೂ ಕಸ್ಟಮ್ಸ್ ಅಧಿಕಾರಿಗಳು ಕೇಳಲೇ ಇಲ್ಲ. ಹರ್ಷಾ ಸನ್ನಿಯನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಇದೀಗ ಪೊಲೀಸರು ಹರ್ಷಾ ಸನ್ನಿ ಥಾಯ್ಲೆಂಡ್ ಭೇಟಿ ಹಾಗೂ ಇತರ ವಿದೇಶಿ ಪ್ರವಾಸದ ಮೇಲೆ ತನಿಖೆ ಆರಂಭಗೊಂಡಿದೆ. ಹರ್ಷಾ ಸನ್ನಿ ಈಗಾಗಲೇ ಹಲವು ಬಾರಿ ಇದೇ ರೀತಿ ಕಳ್ಳ ಸಾಗಾಣಿಕೆ ನಡೆಸಿರುವ ಸಾಧ್ಯತೆ ಇದೆ. ಪ್ರಭಾವಿ ವ್ಯಕ್ತಿಗಳು ಪ್ರಭಾವ ಬಳಸಿಕೊಂಡಿರುವ ಸಾಧ್ಯತೆಯನ್ನು ಪೊಲೀಸರು ಹೇಳಿದ್ದಾರೆ. ಮಾಡೆಲ್ ಹರ್ಷಾ ಸನ್ನಿ ಅರೆಸ್ಟ್ ಮಾಡಿದ ಪೊಲೀಸರು ಕೋರ್ಟ್‌ಗೆ ಹಾಜರುಪಡಿಸಿದ್ದಾರೆ. ಇದೀಗ ಕೋರ್ಟ್ ಹೆಚ್ಚಿನ ತನಿಖೆಗಾಗಿ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ್ದಾರೆ. ಇತ್ತ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ. ಕಳ್ಳ ಸಾಗಾಣೆ ಹಾಗೂ ಕೇರಳಕ್ಕೆ ಭಾರಿ ನಂಟಿರುವುದು ತನಿಖೆಯಲ್ಲಿ ಪತ್ತೆಯಾಗಿರುವುದು ಎಂದು ತಿಳಿದುಬಂದಿದೆ.