ಮೈಸೂರು: ವಿದ್ಯಾರ್ಥಿಗಳನ್ನು ಕಳ್ಳರೆಂದು ಭಾವಿಸಿ ಪೊಲೀಸರು ಅವರ ಬೈಕ್ ಹಿಂಬಾಲಿಸಿದ ಪರಿಣಾಮ ಇಬ್ಬರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಕುವೆಂಪು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ಬೆಳಗ್ಗೆ ಘಟನೆ ನಡೆದಿದ್ದು, ಇದರ ದೃಶ್ಯ ಸಮೀಪದ ಮನೆಯ ಬಳಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಇಬ್ಬರು ವಿದ್ಯಾರ್ಥಿಗಳು ಅನುಮಾನಾಸ್ಪದವಾಗಿ ಬೈಕ್ ಓಡಿಸುತ್ತಿದ್ದಾರೆ ಎಂದು ನಿವಾಸಿಯೊಬ್ಬರು ಕುವೆಂಪು ನಗರದ 112 ಗಸ್ತುವಾಹನಕ್ಕೆ ಫೋನ್ ಮಾಡಿ ತಿಳಿಸಿದ್ದಾರೆ ಎನ್ನಲಾಗಿದೆ.

ಹಾಗೂ ಸ್ಥಳಕ್ಕೆ ಪೊಲೀಸರು ಬರುತ್ತಿದ್ದಂತೆ ಹೆದರಿದ ವಿದ್ಯಾರ್ಥಿಗಳು ಜೋರಾಗಿ ಬೈಕ್ ಓಡಿಸಿಕೊಂಡು ಹೋಗಿದ್ದಾರೆ. ಪೊಲೀಸರು ಗಸ್ತು ವಾಹನದ ಮೂಲಕ ಅವರನ್ನು ಹಿಂಬಾಲಿಸಿ ಬೈಕ್ಗೆ ಗುದ್ದಿ ಬೀಳಿಸಿದ್ದಾರೆ. ಬೈಕ್ನಿಂದ ಕೆಳಗೆ ಬಿದ್ದು ವಿದ್ಯಾರ್ಥಿಗಳು ಗಾಯಗೊಂಡಿದ್ದು, ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆದರೆ, ಮದ್ಯಪಾನ ಮಾಡಿದ್ದ ವಿದ್ಯಾರ್ಥಿಗಳು ತಮ್ಮ ಮನೆಗೆ ಹೋಗದೆ ಬೈಕ್‌ನಲ್ಲಿ ತಿರುಗಾಡುತ್ತಿದ್ದರು. ಪೊಲೀಸರು ತಪಾಸಣೆ ಮಾಡುವ ಭಯದಲ್ಲಿ ಬೈಕ್‌ನಲ್ಲಿ ವೇಗವಾಗಿ ಸ್ಥಳದಿಂದ ತೆರಳಲು ಮುಂದಾಗಿದ್ದರು. ಆದರೆ ಪೊಲೀಸರು ವಿದ್ಯಾರ್ಥಿಗಳನ್ನು ಕಳ್ಳರೆಂದು ತಿಳಿದು, ಹಿಂಬಾಲಿಸಿದ್ದಾರೆ ಎಂಬುದ್ದಾಗಿದೆ.













