ಮನೆ ರಾಜ್ಯ ರಾಜ್ಯದಲ್ಲಿ 891 ಮಂದಿಗೆ ಕೋವಿಡ್‌ ಪಾಸಿಟಿವ್‌

ರಾಜ್ಯದಲ್ಲಿ 891 ಮಂದಿಗೆ ಕೋವಿಡ್‌ ಪಾಸಿಟಿವ್‌

0

ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 891 ಹೊಸ ಪ್ರಕರಣ ದೃಢಪಟ್ಟಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 39,80,585ಕ್ಕೆ ಏರಿಕೆಯಾಗಿದೆ.

ಸೋಂಕಿನಿಂದ ಒಬ್ಬರು ಮೃತಪಟ್ಟಿದ್ದಾರೆ. ಇದರಿಂದ ಮೃತರ ಸಂಖ್ಯೆ 40083ಕ್ಕೆ ಏರಿಕೆಯಾಗಿದೆ. 1,189 ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್‌ ಆಗಿದ್ದಾರೆ. ಒಟ್ಟು ಗುಣಮುಖರ ಸಂಖ್ಯೆ 3934041ಕ್ಕೆ ತಲುಪಿದೆ.

ರಾಜ್ಯದಲ್ಲಿ ಸದ್ಯ 6, 419 ಸಕ್ರಿಯ ಪ್ರಕರಣಗಳಿದ್ದು, ಸೋಂಕಿನ ಪ್ರಮಾಣ ಶೇ. 4.51 ರಷ್ಟಿದೆ. ಬೆಂಗಳೂರಿನಲ್ಲಿ 832 ಪ್ರಕರಣಗಳು ಪತ್ತೆಯಾಗಿದ್ದು, 1,101 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ನಗರದಲ್ಲಿ ಸದ್ಯ 5,987 ಸಕ್ರಿಯ ಪ್ರಕರಣಗಳಿದೆ.

ರಾಜ್ಯದಲ್ಲಿ ಇಂದು 19, 738 ಟೆಸ್ಟ್ ಮಾಡಲಾಗಿದೆ. ಇದರೊಂದಿಗೆ ಇಲ್ಲಿಯವರೆಗೂ ಒಟ್ಟಾರೇ 67, 26,9052 ಟೆಸ್ಟ್ ಮಾಡಲಾಗಿದೆ ಮಾಹಿತಿ ಇದೆ.