ಮೈಸೂರು ಪ್ರಾದೇಶಿಕ ಶಿಕ್ಷಣ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಜೆಪಿಎಫ್, ವೈದ್ಯಕೀಯ ಅಧಿಕಾರಿ ಸೇರಿದಂತೆ 10 ಹುದ್ದೆಗಳಿಗೆ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ವಾಕ್ ಇನ್ ಇಂಟರ್ ವ್ಯೂ ಅಲ್ಲಿ ಭಾಗಿಯಾಗಬಹುದಾಗಿದೆ.
ಈ ಹುದ್ದೆಗಳನ್ನು 2022- 23ನೇ ಶೈಕ್ಷಣಿಕ ವರ್ಷಕ್ಕೆ ನೇಮಕ ಮಾಡಲಾಗುತ್ತಿದೆ. ಈ ಹುದ್ದೆಗಳು ಸಂಪೂರ್ಣವಾಗಿ ಒಪ್ಪಂದ ಆಧಾರಿತವಾಗಿದೆ.
ಜೆಪಿಎಫ್, ವೈದ್ಯಕೀಯ ಅಧಿಕಾರಿಯ 10 ಹುದ್ದೆಗಳು ಖಾಲಿ ಇದ್ದು, ಮೈಸೂರಿನಲ್ಲಿ ಕೆಲಸ ಮಾಡಲು ಇಚ್ಛಿಸುವವರು ಅರ್ಜಿ ಸಲ್ಲಿಸಬಹುದಾಗಿದೆ. ಪ್ರತಿ ತಿಂಗಳು 17000-100000 ರೂ. ನಿಗಧಿಪಡಿಸಲಾಗಿದೆ.
ಅರ್ಜಿ ಶುಲ್ಕ: ವಿನಾಯಿತಿ ನೀಡಲಾಗಿದೆ.
ವಯೋಮಿತಿ: ಪ್ರಾದೇಶಿಕ ಶಿಕ್ಷಣ ಸಂಸ್ಥೆ ಮೈಸೂರು ನಿಯಮ ಅನುಸಾರ
ಆಯ್ಕೆ ಪ್ರಕ್ರಿಯೆ: ನೇರ ಸಂದರ್ಶನ
ನೇರ ಸಂದರ್ಶನ ದಿನಾಂಕ: 21, 22 ಜುಲೈ 2022
ನೇರ ಸಂದರ್ಶನ ನಡೆಯುವ ಸ್ಥಳ: ಪ್ರಾದೇಶಿಕ ಶಿಕ್ಷಣ ಸಂಸ್ಥೆ ಮೈಸೂರು- 570006
ಅಧಿಸೂಚನೆಯನ್ನು ಬಿಡುಗಡೆ ಮಾಡಿದ ದಿನಾಂಕ: 07 ಜುಲೈ 2022
ವಾಕ್-ಇನ್ ದಿನಾಂಕ: 22 ಜುಲೈ 2022
ಅಧಿಕೃತ ವೆಬ್‌ಸೈಟ್: riemysore.ac.in
ಅರ್ಜಿ ಸಲ್ಲಿಕೆ ವಿಧಾನ: ಆಫ್ಲೈನ್
ನೇರ ಸಂದರ್ಶನದ ವೇಳೆ ಈ ದಾಖಲೆ ಅವಶ್ಯ
ಎರಡು ಪಾಸಪೋರ್ಸ್ ಸೈಜ್ ಫೋಟೋ
ವಯಸ್ಸಿನ ದೃಢೀಕರಣ ಅಥವಾ ವಯಸ್ಸು ದಾಖಲಾಗಿರುವ ಎಸ್ಎಸ್ಎಲ್ಸಿ ಪ್ರಮಾಣ ಪ್ರತ್ರ, ಶೈಕ್ಷಣಿಕ ದಾಖಲೆ, ಅನುಭವ, ಸಂಶೋಧಾನ ಪತ್ರಗಳು
ಜಾತಿ ಮತ್ತು ಮೀಸಲಾತಿ ಪ್ರಮಾಣ ಪತ್ರಗಳೊಂದಿಗೆ ನೇರ ಸಂದರ್ಶನಕ್ಕೂ 30 ನಿಮಿಷ ಮೊದಲೇ ಹಾಜರಿರಬೇಕು.
ಅಭ್ಯರ್ಥಿಗಳು ನೇರ ಸಂದರ್ಶನದ ದಿನಾಂಕ ಆಡಳಿತ ಕಚೇರಿಗೆ ಭೇಟಿ ನೀಡಿ. ಮಾಹಿತಿ, ದಾಖಲೆಗಳನ್ನು ನೀಡಬೇಕು. ಬಳಿಕ ನೇರ ಸಂದರ್ಶನ ನಡೆಯಲಿದೆ.