ಮನೆ ಮನರಂಜನೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಟ್ವಿಟ್ಟರ್ ಖಾತೆಗೆ ಮತ್ತೆ ಬ್ಲೂಟಿಕ್

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಟ್ವಿಟ್ಟರ್ ಖಾತೆಗೆ ಮತ್ತೆ ಬ್ಲೂಟಿಕ್

0

ಬೆಂಗಳೂರು (Bengaluru): ಪವರ್ ಸ್ಟಾರ್ ದಿವಂಗತ ಪುನೀತ್ ರಾಜ್‌ಕುಮಾರ್ ಅವರ ಟ್ವಿಟರ್ ಖಾತೆಗೆ ಮತ್ತೆ ಬ್ಲೂಟಿಕ್ ಸಿಕ್ಕಿದೆ.
ಇತ್ತೀಚೆಗೆ ಪುನೀತ್ ಟ್ವಿಟರ್ ಖಾತೆಯಿಂದ ಬ್ಲೂಟಿಕ್ ತೆಗೆದಿದ್ದು, ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಿತ್ತು. ಟ್ವಿಟರ್ ಸಂಸ್ಥೆಯ ವಿರುದ್ಧ ಅಸಮಾಧಾನ ಹೊರಹಾಕಿ ಅಭಿಯಾನವನ್ನು ಸಹ ಆರಂಭಿಸಿದ್ದರು.


ನಿರ್ದೇಶಕ ಸಂತೋಷ್ ಆನಂದರಾಮ್ ಸೇರಿದಂತೆ ಚಂದನವನದ ಹಲವು ಕಲಾವಿದರೂ ಈ ಕುರಿತು ಟ್ವೀಟ್ ಮಾಡಿದ್ದರು. ಇದರಿಂದ ಎಚ್ಚೆತ್ತ ಟ್ವಿಟರ್ ಸಂಸ್ಥೆ ಖಾತೆಯನ್ನು ಮರುಪರಿಶೀಲಿಸಿ ಮತ್ತೆ ಬ್ಲೂಟಿಕ್ ನೀಡಿದೆ.
ಪುನೀತ್ ರಾಜ್ ಕುಮಾರ್ ಅಕ್ಟೋಬರ್ 29ರಂದು ಭಜರಂಗಿ2 ಚಿತ್ರಕ್ಕೆ ಶುಭಕೋರಿ ತಮ್ಮ ಖಾತೆಯಿಂದ ಕೊನೆಯ ಟ್ವೀಟ್ ಮಾಡಿದ್ದರು.