ಮುಂಬೈ (Mumbai): ನಟ ಆರ್.ಮಾಧವನ್ ಅವರ ಪುತ್ರ ವೇದಾಂತ್ ಅವರು 48ನೇ ಜೂನಿಯರ್ ರಾಷ್ಟ್ರೀಯ ಅಕ್ವಾಟಿಕ್ ಚಾಂಪಿಯನ್ಶಿಪ್ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.
16ವರ್ಷದ ವೇದಾಂತ್ 1500 ಮೀಟರ್ ಫ್ರೀಸ್ಟೈಲ್ ಈಜು ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಅಲ್ಲದೆ, ಸ್ಪರ್ಧೆಯಲ್ಲಿ ಈ ಹಿಂದಿನ 16 ನಿಮಿಷಗಳ ದಾಖಲೆ ಮಾಡಿದ್ದ ವಿಜೇತರ ರೆಕಾರ್ಡ್ ಮುರಿದು ಹೊಸ ದಾಖಲೆಯನ್ನು ಬರೆದಿದ್ದಾರೆ.
ಮಾಧವನ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ ಮತ್ತು “ಅಸಾಧ್ಯವೆಂದು ಎಂದಿಗೂ ಹೇಳಬೇಡಿ. 1500 ಮೀಟರ್ ಫ್ರೀಸ್ಟೈಲ್ನಲ್ಲಿ ರಾಷ್ಟ್ರೀಯ ಜೂನಿಯರ್ ದಾಖಲೆ ಮುರಿದಿದ್ದಾರೆ” ಎಂದಿದ್ದಾರೆ.
ಸುಮಾರು 16 ನಿಮಿಷಗಳ ಕಾಲದ ಅದ್ವೈತ್ ಪೇಜ್ ಅವರ ದಾಖಲೆಯನ್ನು ವೇದಾಂತ್ ಅವರು ಮುರಿದಿದ್ದಾರೆ ಎಂದು ವಿಡಿಯೋದಲ್ಲಿ ಕಾಮೆಂಟೇಟರ್ ಗಳು ಹೇಳಿದ್ದಾರೆ.
ಆರ್ ಮಾಧವನ್ ಪೋಸ್ಟ್ ಅನ್ನು ಹಂಚಿಕೊಂಡ ಕೂಡಲೇ, ಹಿಂದಿನ ದಾಖಲೆ ಹೊಂದಿರುವ ಅದ್ವೈತ್ ಪೇಜ್, ವೇದಾಂತ್ ಸಾಧನೆ ಬಗ್ಗೆ ತುಂಬಾ ಸಂತೋಷವಾಗಿದೆ. ಅಭಿನಂದನೆಗಳು!! ಎಂದಿದ್ದಾರೆ.
ಏಪ್ರಿಲ್ನಲ್ಲಿ, ಕೂಪನ್ಹೇಗನ್ನಲ್ಲಿ ನಡೆದ ಡ್ಯಾನಿಶ್ ಓಪನ್ನಲ್ಲಿ ಪುರುಷರ 800 ಮೀಟರ್ ಫ್ರೀಸ್ಟೈಲ್ನಲ್ಲಿ ಆರ್. ಮಾಧವನ್ ಅವರ ಪುತ್ರ ವೇದಾಂತ್ ಚಿನ್ನದ ಪದಕ ಗೆದಿದ್ದರು.