ಮನೆ ರಾಜ್ಯ ಅವರ ಪ್ಲೇಟ್ ನಲ್ಲಿ ಏನಿದೆ ಎಂದು ಮೊದಲು ನೋಡಿಕೊಳ್ಳಲಿ: ಡಿಕೆಶಿಗೆ ಸಿಎಂ ಬೊಮ್ಮಾಯಿ ತಿರುಗೇಟು

ಅವರ ಪ್ಲೇಟ್ ನಲ್ಲಿ ಏನಿದೆ ಎಂದು ಮೊದಲು ನೋಡಿಕೊಳ್ಳಲಿ: ಡಿಕೆಶಿಗೆ ಸಿಎಂ ಬೊಮ್ಮಾಯಿ ತಿರುಗೇಟು

0

ಮೈಸೂರು(Mysuru): ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಾನೊಂದು ತೀರ ನೀನೊಂದು ತೀರ ಆಗಿದ್ದಾರೆ. ಮೊದಲು ಅವರ ಪ್ಲೇಟ್ ನಲ್ಲಿ ಏನು ಇದೆ ಎಂದು ನೋಡಿಕೊಳ್ಳಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಡಿ.ಕೆ.ಶಿವಕುಮಾರ್ ಗೆ ತಿರುಗೇಟು ನೀಡಿದ್ದಾರೆ.

ಇಂದು ಮೈಸೂರು- ಮಂಡ್ಯ ಜಿಲ್ಲಾ ಪ್ರವಾಸ ಕೈಗೊಂಡಿರುವ ಮುಖ್ಯಮಂತ್ರಿಗಳು ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಡಿ.ಕೆ.ಶಿವಕುಮಾರ್ ಅವರ ರಿಮೋಟ್ ಕಂಟ್ರೋಲ್ ಸಿಎಂ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದರು.

ಡಿ.ಕೆ.ಶಿವಕುಮಾರ್ ಅವರ ಬಹಳ ವರ್ಷಗಳ ಕನಸು ಸಿಎಂ ಆಗುವುದು.ಅದಕ್ಕೆ ಅವರು ಒದ್ದಾಡುತ್ತಿದ್ದಾರೆ. ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿಯೇ ಸರಿಯಾಗಿ ಕೆಲಸ ಮಾಡಲು ಬಿಡುತ್ತಿಲ್ಲ. ನಾವು ದಿನ ನೋಡುತ್ತಿದ್ದೇವೆ ಎಂದರು.

ಚಾಮುಂಡೇಶ್ವರಿ ವರ್ಧಂತಿ ಸಮಾರಂಭದಲ್ಲಿ ಭಾಗವಹಿಸಿ, ಕಬಿನಿಹಾಗೂ ಕೆಆರ್ಎಸ್ ನಲ್ಲಿಬಾಗೀನ ಅರ್ಪಣೆ ಮಾಡಲಾಗುವುದು. ಆಷಾಡ ಮಾಸದಲ್ಲಿ ಜಲಾಶಯ ತುಂಬಿರುವುದು ಅಪರೂಪ. ಈ ಬಾರಿ ಮಳೆ ಚೆನ್ನಾಗಿ ಆಗಿದೆ. ರೈತರು ಹೊಲ ಗದ್ದೆಗಳಲ್ಲಿ ಕೆಲಸ ಮಾಡಲು ಅನುಕೂಲವಾಗಿದೆ ಎಂದರು.

ಜಿಎಸ್‍ಟಿಯ ರಾಜ್ಯದ ಪಾಲನ್ನು ನೀಡುತ್ತಿದ್ದಾರೆ. ಜಿಎಸ್‍ಟಿ ಸಂವಿಧಾನಾತ್ಮಕವಾಗಿ ಇದೆ. ರಾಜ್ಯಕ್ಕೆ ಐದು ವರ್ಷ ಎಂದು ನಿಗದಿ ಮಾಡಿದ್ದಾರೆ.  ಕೋವಿಡ್ ಬಂದಂತಹ ಸಂದರ್ಭದಲ್ಲಿಯೂ ಕೂಡ ಯಾವುದೇ ರೀತಿಯ ಕಲೆಕ್ಷನ್ ಆಗಿರಲಿಲ್ಲ. ಕಲೆಕ್ಷನ್ ಮಾಡಿದ ನಂತರ ಅದರಲ್ಲಿ ಪಾಲು ನೀಡಬೇಕು ಎಂದಿದೆ. ಕಲೆಕ್ಷನ್ ಆಗದಿದ್ದರೂ ಪರಿಹಾರವನ್ನು ಕೇಂದ್ರ ಸರ್ಕಾರ ನೀಡಿದೆ. ನಾವೆಲ್ಲರೂ 2 ವರ್ಷ ಮುಂದುವರೆಸಿ ಎಂದು ಕೇಳಿದ್ದೆವು ಆದರೆ ಕಾನೂನಿನ್ವಯ ಆಗುವುದಿಲ್ಲ ಎಂದು ಹೇಳಿದ್ದಾರೆ ಎಂದು ತಿಳಿಸಿದರು.

ಆದರೆ ರಾಜ್ಯಕ್ಕೆ ಬರಬೇಕಾದ ಜಿಎಸ್‍ಟಿ ಪಾಲನ್ನು ನೀಡಲಾಗಿದೆ. ಮೊನ್ನೆಯಷ್ಟೇ  8800 ಕೋಟಿ ರೂ ಕೊಟ್ಟಿದ್ದಾರೆ. ಬಾಕಿ ಇರುವುದನ್ನು ನೀಡುತ್ತಾರೆ. ಅದರಲ್ಲೇನು ತೊಂದರೆ ಇಲ್ಲ ಎಂದು ಹೇಳಿದರು.