ಮನೆ ರಾಷ್ಟ್ರೀಯ ದೇಶದಲ್ಲಿ 21,566 ಮಂದಿಗೆ ಕೋವಿಡ್‌ ಪಾಸಿಟಿವ್‌

ದೇಶದಲ್ಲಿ 21,566 ಮಂದಿಗೆ ಕೋವಿಡ್‌ ಪಾಸಿಟಿವ್‌

0

ನವದೆಹಲಿ (New Delhi): ದೇಶದಲ್ಲಿ ಕೋವಿಡ್‌ ಸೋಂಕಿನ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿದೆ. ಒಂದೇ ದಿನ 21,566 ಹೊಸ ಕೋವಿಡ್‌ ಪ್ರಕರಣಗಳು ದೃಢಪಟ್ಟಿದೆ.

ಇದರಿಂದ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 4,38,25,185ಕ್ಕೆ ಏರಿದೆ. ಇದು ಕಳೆದ 152 ದಿನಗಳಲ್ಲೇ ದಾಖಲಾದ ಗರಿಷ್ಠ ಪ್ರಮಾಣವಾಗಿದೆ.

ಅಲ್ಲದೆ 45 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ. ಇದರಿಂದ ಒಟ್ಟು ಮೃತರ ಸಂಖ್ಯೆ 5,25,870ಕ್ಕೆ ತಲುಪಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 1,48,881ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.‌

ಒಟ್ಟು ಸಕ್ರಿಯ ಪ್ರಕರಣಗಳ ದರವು ಶೇ 0.34ರಷ್ಟಿದ್ದರೆ, ಚೇತರಿಕೆ ದರವು ಶೇ 98.46ರಷ್ಟಿದೆ. ದೈನಂದಿನ ಪಾಸಿಟಿವಿಟಿ ದರವು ಶೇ.4.25ರಷ್ಟಿದ್ದರೆ, ವಾರದ ಪಾಸಿಟಿವಿಟಿ ದರವು ಶೇ.4.51ರಷ್ಟಿದೆ.