ಮನೆ ಜ್ಯೋತಿಷ್ಯ ಇಂದಿನ ರಾಶಿ ಭವಿಷ್ಯ

ಇಂದಿನ ರಾಶಿ ಭವಿಷ್ಯ

0

ಇಂದಿನ ರಾಶಿ ಭವಿಷ್ಯ ಇಂತಿದೆ. ನಿಮ್ಮ ರಾಶಿಯ ಫಲಾನುಫಲ ನೋಡಿ ದಿನ ಆರಂಭಿಸಿ.

ಮೇಷ ರಾಶಿ

ಚಂದ್ರನು ಕುಜನ ನಕ್ಷತ್ರವಾದ ಮೃಗಶಿರಾದಲ್ಲಿ ಇದ್ದಾನೆ. ನಿಮ್ಮ ರಾಶಿಯ ಅಧಿಪತಿಯೂ ಕುಜ. ಹೀಗಾಗಿ ನಿಮ್ಮ ರಾಶಿಗೆ ಈ ದಿನ ಶುಭ. ಅಂದುಕೊಂಡ ಕೆಲಸಕಾರ್ಯಗಳಲ್ಲಿ ಜಯ ಸಿಗುತ್ತದೆ. ಕಚೇರಿಯಲ್ಲಿ ಅನುಕೂಲಕರ ವಾತಾವರಣ. ಮನೆ ಕಟ್ಟುವ ಅಥವಾ ಕೊಳ್ಳುವ ಯೋಜನೆಯ ಮಾತುಕತೆಗೆ ಈ ದಿನ ಶುಭ. ಜಾಗಬದಲಾವಣೆಯ ಭಾಗ್ಯ ಇದೆ. ವರ್ಗಾವಣೆಯ ಸಾಧ್ಯತೆ ಇದೆ.

ವೃಷಭ ರಾಶಿ

ಚಂದ್ರನು ಮಹಾ ನಕ್ಷತ್ರವಾದ ಮೃಗಶಿರಾದಲ್ಲಿ ಈ ದಿನ ಸಂಚರಿಸುತ್ತಾನೆ. ಚಂದ್ರನು ಮನೋಕಾರಕನಾಗಿ ಪ್ರಫುಲ್ಲಿತನಾಗಿರುವಾಗ ನಿಮ್ಮ ಮನಸ್ಸಿಗೂ ಆಹ್ಲಾದತೆಯನ್ನು ಕೊಡುತ್ತಾನೆ. ನೆನ್ನೆ ಇದ್ದ ಅನಾರೋಗ್ಯ ಈ ದಿನ ಸುಧಾರಿಸುತ್ತದೆ. ದೇಹಕ್ಕೆ ಆರಾಮ ಎನಿಸುತ್ತದೆ. ಕಾರ್ಯಕ್ಷೇತ್ರದಲ್ಲಿ ಜಯ, ಬಡ್ತಿಯ ಬಗ್ಗೆ ಮಾತುಕತೆ ಇದೆ. ಧನಲಾಭ ಇದೆ.

ಮಿಥುನ ರಾಶಿ

ಮೃಗಶಿರಾದಲ್ಲಿ ಸಂಚರಿಸುವ ಚಂದ್ರನಿಂದ ನಿಮಗೆ ಧನಹಾನಿ, ಕಾರ್ಯನಷ್ಟ. ಆದರೂ ಬೇಸರಿಸಬೇಡಿ. ನಿಮ್ಮ ರಾಶಿಯಲ್ಲಿರುವ ಶುಕ್ರ ನಿಮಗೆ ಶುಭಫಲಗಳನ್ನು ನೀಡುತ್ತಾನೆ. ಎರಡನೇ ಮನೆಯಲ್ಲಿ ಇರುವ ಬುಧ ಸಹ ಕುಟುಂಬಸೌಖ್ಯವನ್ನು ವೃದ್ಧಿಸುತ್ತಾನೆ. ಕುಂಟುಂಬದೊಂದಿಗೆ ಉಲ್ಲಾಸಮಯ ಸಮಯ ಕಳೆಯುತ್ತೀರಿ.

ಕರ್ಕಾಟಕ ರಾಶಿ

ಈ ದಿನ ನೀವು ಅಂದುಕೊಂಡ ಕೆಲಸ ಕಾರ್ಯಗಳಲ್ಲಿ ಜಯ ಸಿಗುತ್ತದೆ. ಕಚೇರಿಯಲ್ಲಿ ಹಿತಕರ ವಾತಾವರಣ. ನಿಮ್ಮ ಕೆಲಸಕ್ಕೆ ಪ್ರಶಂಸೆ ಸಿಗುತ್ತದೆ. ಬಡ್ತಿಯ ಬಗ್ಗೆ ಮಾತುಕತೆಯೂ ನಡೆಯಬಹುದು. ಕೊಂಚ ಧನನಷ್ಟವಾದರೂ ಅಡ್ಡಿಯಿಲ್ಲ. ಗುರುವಿನ ಅನುಗ್ರಹದಿಂದ ತೊಂದರೆ ಹೆಚ್ಚು ಇಲ್ಲ. ವ್ಯಾಪಾರಿಗಳಿಗೆ ಶುಭದಿನ.

ಸಿಂಹ ರಾಶಿ

ನಿಮ್ಮ ಬಹುದಿನಗಳ ಯೋಜನೆಯೊಂದು ಸಾಕಾರಗೊಳ್ಳುವ ಸಮಯ. ಹಣದ ಹರಿವು ಚೆನ್ನಾಗಿದ್ದರೂ ಖರ್ಚುಗಳೂ ಭರದಿಂದ ಮುನ್ನುಗ್ಗಿ ಬರುತ್ತದೆ. ಗೃಹಾಲಂಕಾರಕ್ಕಾಗಿ ಖರ್ಚು ಮಾಡುತ್ತೀರಿ. ಸರ್ಕಾರಿ ಯೋಜನೆಗಳಿಂದ ನಿಮ್ಮ ವಹಿವಾಟಿಗೆ ಹಿನ್ನಡೆ ಇದೆ. ಕಚೇರಿಯಲ್ಲಿ ನಿಮಗೆ ಅನುಕೂಲಕರ ವಾತಾವರಣ ಇರುತ್ತದೆ.

ಕನ್ಯಾ ರಾಶಿ

ಕಾರ್ಯಕ್ಷೇತ್ರದಲ್ಲಿ ಪ್ರಶಂಸೆ ಸಿಗುತ್ತದೆ. ದೈವಕಾರ್ಯದಲ್ಲಿ ಆಸಕ್ತಿ ವಹಿಸುತ್ತೀರಿ. ಸರ್ಕಾರಿ ಕೆಲಸಗಳು ಈ ದಿನ ನಿಮಗೆ ಸಲೀಸು. ಶತ್ರುಗಳು ಸುತ್ತಮುತ್ತ ಇದ್ದಾರೆ. ಎಚ್ಚರಿಕೆಯಿಂದ ಇರಿ. ಅನಿರೀಕ್ಷಿತ ಧನಲಾಭ ಇದೆ. ನೂತನ ವಸ್ತ್ರಾಭರಣಗಳನ್ನು ಖರೀದಿ ಮಾಡಲು ಇಂದು ಶುಭ ದಿನ.

ತುಲಾ ರಾಶಿ

ಕೆಲಸ ಕಾರ್ಯಗಳು ಈ ದಿನ ನಿಧಾನಗತಿ. ಆದರೆ ಹಣದ ಹರಿವು ಉತ್ತಮವಾಗಿದೆ. ಚಿನ್ನ ಖರೀದಿ ಮಾಡಲು ಒಳ್ಳೆಯ ದಿನ. ಆಭರಣ ವ್ಯಾಪಾರಿಗಳಿಗೂ ಶುಭದಿನ. ಆಸ್ತಿ ವ್ಯವಹಾರ ಮಾತುಕತೆಯನ್ನು ಕೊಂಚ ಮುಂದೂಡಿ. ಆರೋಗ್ಯದ ಬಗ್ಗೆ ಗಮನ ಇರಲಿ.

ವೃಶ್ಚಿಕ ರಾಶಿ

ಈ ದಿನ ಮನಸ್ಸಿಗೇ ಏನೋ ಕಳವಳ. ನೀವಂದುಕೊಂಡ ಯೋಜನೆಗಳು ಕಾರ್ಯಗತವಾಗುವುದೋ ಇಲ್ಲವೋ ಎಂಬ ಶಂಕೆ. ಭಯ ಬೇಡ. ಗುರುವಿನ ಅನುಗ್ರಹದಿಂದ ಎಲ್ಲವೂ ಶುಭರೀತಿಯಲ್ಲಿ ಅಂತ್ಯಕಾಣುತ್ತದೆ. ನಿಮ್ಮಕೆಲಸಗಳಿಗೆ ವಿಘ್ನ ಬಂದರೂ ದಿನಾಂತ್ಯದಲ್ಲಿ ಸುಖಾಂತ್ಯವಾಗುತ್ತದೆ. ಶಿಕ್ಷಕ ವೃತ್ತಿಯವರಿಗೆ ಈ ದಿನ ಶುಭ.

ಧನಸ್ಸು ರಾಶಿ

ನೀವು ನಿಮ್ಮ ಬಗ್ಗೆ ಹೆಚ್ಚಿನ ಎಚ್ಚರಿಕೆ ತೆಗೆದುಕೊಳ್ಳಬೇಕು. ಕಟ್ಟಡ ಸಂಬಂಧಿತ ಕೆಲಸಗಳಲ್ಲಿ ನಷ್ಟ ಇದೆ. ಬಿದ್ದು ಕೈಕಾಲಿಗೆ ಗಾಯ ಮಾಡಿಕೊಳ್ಳುವ ಸಾಧ್ಯತೆಯೂ ಇದೆ. ತಾಯಿಯ ಆರೋಗ್ಯದಲ್ಲಿ ಕೊಂಚ ಮಟ್ಟಿನ ಸುಧಾರಣೆ ಇದೆ. ನಡೆಯುವಾಗ, ವಾಹನ ಚಲಾಯಿಸುವಾಗ ಎಚ್ಚರಿಕೆ ಅಗತ್ಯ.

ಮಕರ ರಾಶಿ

ಮಕ್ಕಳ ಪ್ರಗತಿಗೆ ಸಹಕಾರ ನೀಡುತ್ತೀರಿ. ದೂರ ಪ್ರಯಾಣ ಇದೆ. ಪ್ರಯಾಣದಲ್ಲಿ ಅನುಕೂಲವೂ ಇದೆ. ಹೊಸಯೋಜನೆಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸಮಯ. ಯಾವುದೋ ಒಂದು ಘಟನೆ ಅಥವಾ ಕೆಲಸದಿಂದ ಮನಸ್ಸಿಗೆ ಉಲ್ಲಾಸ ನೆಮ್ಮದಿ ಸಿಗುತ್ತದೆ. ಸ್ನೇಹಿತರಿಂದ ಸಹಾಯ ಇದೆ.

ಕುಂಭ ರಾಶಿ

ಶುಭಕಾರ್ಯಕ್ಕೆ ಧನವ್ಯಯ ಮಾಡುತ್ತೀರಿ. ಆಭರಣ ಖರೀದಿ ಯೋಗ ಇದೆ. ಬರಹಗಾರರಿಗೆ ಈ ದಿನ ಶುಭ. ಕುಂಭರಾಶಿಯ ಶಿಕ್ಷಕರು, ಅಧ್ಯಾಪಕರು, ಪ್ರವಚನಕಾರರು ಇವರಿಗೆ ಈದಿನ ಅದೃಷ್ಟದ ದಿನ. ನಿಮ್ಮ ಮಾತಿನಿಂದ ಎಷ್ಟೋ ತಡೆಹಿಡಿದ ಕೆಲಸಗಳು ಮುಂದುವರೆಯುತ್ತದೆ. ಎದುರಿನವರು ನಿಮ್ಮ ಮಾತಿನಿಂದ ಪ್ರಭಾವಿತರಾಗುತ್ತಾರೆ.

ಮೀನ ರಾಶಿ

ಮೈಯಲ್ಲಿ ಕೊಂಚ ಇರಿಸುಮುರಿಸು, ಶೀತಬಾಧೆ ಉಂಟಾಗಬಹುದು. ಕೆಲಸಕಾರ್ಯಗಳಲ್ಲಿ ಅಲ್ಪ ಪ್ರಗತಿಯಿಂದ ಮನಸ್ಸಿಗೆ ವ್ಯಥೆ. ಬಂಧುವರ್ಗ ಹಾಗೂ ಸ್ನೇಹಿತರಿಂದ ಸಹಾಯ ಬೆಂಬಲ ಇದ್ದು ಮನಸ್ಸಿಗೆ ಉಲ್ಲಾಸ ಕೊಡುತ್ತದೆ. ಭೂ ವ್ಯವಹಾರಗಳು ಈದಿನ ಬೇಡ.