ಮನೆ ಸುದ್ದಿ ಜಾಲ ಜ್ಞಾನಜ್ಯೋತಿ ಜ್ಯೋತಿಷ್ಯ ಮಂದಿರ : ಒಂದು ದಿನದ ವಿಶೇಷ ಜ್ಯೋತಿಷ್ಯ ಕಾರ್ಯಗಾರ

ಜ್ಞಾನಜ್ಯೋತಿ ಜ್ಯೋತಿಷ್ಯ ಮಂದಿರ : ಒಂದು ದಿನದ ವಿಶೇಷ ಜ್ಯೋತಿಷ್ಯ ಕಾರ್ಯಗಾರ

0

ಮೈಸೂರು, ಜೂನ್ 2: ಜ್ಯೋತಿಷ್ಯ ಶಾಸ್ತ್ರದ ಬಗ್ಗೆ ಆಸಕ್ತಿ ಹೊಂದಿರುವವರಿಗೆ ಜ್ಞಾನಜ್ಯೋತಿ ಜ್ಯೋತಿಷ್ಯ ಮಂದಿರವು ವಿಶೇಷ ಅವಕಾಶವನ್ನು ಕಲ್ಪಿಸಿದೆ. ಸಂಸ್ಥೆಯ ವತಿಯಿಂದ ಶ್ರೀ ವಿದ್ವಾನ್ ಜೆ. ಇ. ಶಿವಕುಮಾರ್ ಗುರೂಜಿಯವರ ನೇತೃತ್ವದಲ್ಲಿ ಮೊಟ್ಟ ಮೊದಲ ಬಾರಿಗೆ ಒಂದು ದಿನದ ವಿಶೇಷ ಜ್ಯೋತಿಷ್ಯ ಕಾರ್ಯಗಾರವನ್ನು ಆಯೋಜಿಸಲಾಗಿದೆ.

ಈ ಕಾರ್ಯಗಾರವು 2026ರ ಜೂನ್ 13ರಂದು, ಶನಿವಾರ ನಡೆಯಲಿದ್ದು, ಬೆಳಿಗ್ಗೆ 9:30 ಗಂಟೆಯಿಂದ ಸಂಜೆ 5:00 ಗಂಟೆಯವರೆಗೆ ನಡೆಯಲಿದೆ. ಮೈಸೂರು ನಗರದ ಮೂಡ ಕಚೇರಿ ಎದುರಿನ ರೋಟರಿ ಸಭಾಂಗಣದಲ್ಲಿ ಕಾರ್ಯಕ್ರಮಕ್ಕೆ ವೇದಿಕೆ ಸಿದ್ಧಗೊಂಡಿದೆ ಎನ್ನಲಾಗಿದೆ.

ಈ ಕುರಿತು ಕಾರ್ಯಗಾರದಲ್ಲಿ ಜ್ಯೋತಿಷ್ಯದ ಮೂಲಭೂತ ತತ್ವಗಳು, ಗ್ರಹಗಳ ಪ್ರಭಾವ, ಜಾತಕ ವಿಶ್ಲೇಷಣೆ ಹಾಗೂ ಜ್ಯೋತಿಷ್ಯ ಶಾಸ್ತ್ರದ ವಿವಿಧ ಆಯಾಮಗಳ ಕುರಿತು ಸಮಗ್ರ ಮಾಹಿತಿ ಮತ್ತು ಮಾರ್ಗದರ್ಶನ ನೀಡಲಾಗುತ್ತದೆ. ಜ್ಯೋತಿಷ್ಯ ಕಲಿಯಲು ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು, ಯುವಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.

ಕಾರ್ಯಕ್ರಮದ ಕುರಿತು ಹೆಚ್ಚಿನ ಮಾಹಿತಿಗಾಗಿ 7204618956 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ. ಜ್ಯೋತಿಷ್ಯ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ಎಲ್ಲರಿಗೂ ಈ ಕಾರ್ಯಗಾರವು ಉಪಯುಕ್ತವಾಗಲಿದೆ ಎಂದು ಆಯೋಜಕರು ತಿಳಿಸಿದ್ದಾರೆ ಎನ್ನಲಾಗುತ್ತಿದೆ.