ಮನೆ ಅಪರಾಧ ಆಟೋ-ಕಾರು ನಡುವೆ ಭೀಕರ ಅಪಘಾತ: ಮಹಿಳೆ ಸಾವು

ಆಟೋ-ಕಾರು ನಡುವೆ ಭೀಕರ ಅಪಘಾತ: ಮಹಿಳೆ ಸಾವು

0

ಮೈಸೂರು(Mysuru): ಆಪೆ ಆಟೋ ಮತ್ತು ಓಮಿನಿ ಕಾರಿನ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನರಸೀಪುರ ತಾಲೂಕಿನ ಸೋಸಲೆ ಗ್ರಾಮದ ಸಮೀಪ ಸೋಮವಾರ ಮುಂಜಾನೆ ಸಂಭವಿಸಿದೆ

ಮೈಸೂರಿನ ಜೆಪಿ ನಗರ ನಿವಾಸಿ ವಿಶಾಲಾಕ್ಷಿ (29) ಮೃತ ಮಹಿಳೆ.

ಅಪಘಾತದಲ್ಲಿ ಮೃತ ವಿಶಾಲಾಕ್ಷಿ ಪತಿ ಶಂಕರ್ ಹಾಗೂ ಇಬ್ಬರು ಮಕ್ಕಳು ಗಂಭೀರ ಗಾಯಗೊಂಡಿದ್ದಾರೆ. ಇವರನ್ನು ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಆಪೇ ಆಟೋದಲ್ಲಿ ಪ್ರಯಾಣ ಮಾಡುತ್ತಿದ್ದ ಮಳವಳ್ಳಿ ತಾಲೂಕಿನ ನಂಜೇಗೌಡನಪುರ ಗ್ರಾಮಸ್ಥರಾದ ರಾಜು, ಮಣಿ, ರತ್ನಮ್ಮ ಎಂಬುವರಿಗೆ ಸಣ್ಣಪುಟ್ಟ ಗಾಯಗಳಾಗಿವೆ

ಸ್ಥಳೀಯರ ಸಹಾಯದಿಂದ ಗಾಯಾಳುಗಳ ರಕ್ಷಣೆ‌ ಮಾಡಲಾಗಿದೆ. ಸ್ಥಳಕ್ಕೆ ಬನ್ನೂರು ಠಾಣೆ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.