ಮನೆ ಅಪರಾಧ ಕಾಲೇಜಿಗೆ ತೆರಳಿದ ನಾಲ್ವರು ವಿದ್ಯಾರ್ಥಿನಿಯರು ಒಂದೇ ದಿನ ನಾಪತ್ತೆ

ಕಾಲೇಜಿಗೆ ತೆರಳಿದ ನಾಲ್ವರು ವಿದ್ಯಾರ್ಥಿನಿಯರು ಒಂದೇ ದಿನ ನಾಪತ್ತೆ

0

ರಾಯಚೂರು(Rayachuru): ನಗರದ ಸರ್ಕಾರಿ ಬಾಲಕಿಯರ ಕಾಲೇಜಿನ ನಾಲ್ವರು ವಿದ್ಯಾರ್ಥಿನಿಯರು ಕಾಲೇಜಿಗೆ ತೆರಳುವುದಾಗಿ ಹೇಳಿ ಹೋಗಿದ್ದು ಒಂದೇ ದಿನ ನಾಪತ್ತೆಯಾಗಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.

ಕಾಲೇಜಿನ ನಾಲ್ವರು ವಿದ್ಯಾರ್ಥಿನಿಯರು ನಾಪತ್ತೆಯಾಗಿರುವ ಪ್ರಕರಣ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.  ಮೂವರು ದ್ವಿತೀಯ ಪಿಯುಸಿ ಓರ್ವ ವಿದ್ಯಾರ್ಥಿನಿ ಪ್ರಥಮ ಪಿಯು ವ್ಯಾಸಂಗ ಮಾಡುತ್ತಿದ್ದರು ಎನ್ನಲಾಗಿದೆ.

ಜುಲೈ 23 ರಂದು ನಾತ್ತೆಯಾಗಿರುವ ವಿದ್ಯಾರ್ಥಿನಿಯರಿಗಾಗಿ 2 ದಿನದಿಂದ ಹುಡುಕಾಟ ನಡೆಸಲಾಗುತ್ತಿದೆ. ಶನಿವಾರ ಕಾಲೇಜಿಗೆ ಆಗಮಿಸಿದ್ದು, ಮರಳಿ ಮನೆಗೆ ಹೋಗಿಲ್ಲ ಎಂದು ಹೇಳಿದ್ದರು. ಈ ಘಟನೆಯಿಂದಾಗಿ ಪೋಷಕರು ಆತಂಕಗೊಂಡಿದ್ದು, ಕಾಲೇಜಿನಲ್ಲೂ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.