ಮನೆ ಕವನ ನಂಬಿಕೆಯಷ್ಟೆ ಸತ್ಯ – ಕವನ

ನಂಬಿಕೆಯಷ್ಟೆ ಸತ್ಯ – ಕವನ

0

ಕಾಯುವವನ ಪ್ರೀತಿ

ಎಡಬಿಡದೆ ಕಾಯುವಾಗ

ಕಳೆದುಕೊಳ್ಳುವ ಭೀತಿಯೇಕೆ.

ಬೆಳಕಿಡುವವನ ಜ್ಯೋತಿ

ಬೆಂಬಿಡದೆ ಬೆಳಗುವಾಗ

ಕಣ್ಣ್ಮುಚ್ಚಿ ಹೆದರುವ ರೀತಿಯೇಕೆ.

ನಡೆಸುವವನ ನೀತಿ

ಕೈಬಿಡದೆ ಪೊರೆಯುವಾಗ

ಕಲ್ಲಾಗಿ ನಿಲ್ಲುವ ಛಾತಿಯೇಕೆ.

ನಡೆದುಬಿಡು ನಗುನಗುತ ನಿತ್ಯ

ನಡೆಸುವವನ ನಂಬಿಕೆಯಷ್ಟೆ ಸತ್ಯ

ಉಳಿದುದೆಲ್ಲವೂ ಅಕ್ಷರಶಃ ಮಿಥ್ಯ.

  • ಎಎನ್ಆರ್