ಮನೆ ಮನರಂಜನೆ ತೆರೆಗೆ ಬರಲಿದೆ ಸಿದ್ದರಾಮಯ್ಯ ಜೀವನಾಧರಿತ ಸಿನಿಮಾ

ತೆರೆಗೆ ಬರಲಿದೆ ಸಿದ್ದರಾಮಯ್ಯ ಜೀವನಾಧರಿತ ಸಿನಿಮಾ

0

ದಾವಣಗೆರೆ (Davanagere): ಸ್ಯಾಂಡಲ್‌ ವುಡ್‌ ನಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಜೀವನಾಧರಿತ ಸಿನಿಮಾ ಬರಲಿದೆ.

ಹೌದು, ತೆಲಂಗಾಣದ ಉದ್ಯಮಿ ಶ್ರೀಧರ ರಾವ್ ಅವರು ಸಿದ್ದರಾಮಯ್ಯ ಅವರ ಜೀವನಾಧರಿತ ಸಿನಿಮಾ ನಿರ್ಮಿಸಲು ಸಿದ್ಧತೆ ನಡೆಸಿದ್ದಾರೆ. ಈ ಸಿನಿಮಾ ಕನ್ನಡ, ತಮಿಳು, ತೆಲಗು ಸೇರಿ ವಿವಿಧ ಭಾಷೆಗಳಲ್ಲಿ ನಿರ್ಮಾಣವಾಗಲಿದೆ.

ಈ ಬಗ್ಗೆ ಸ್ವತಃ ಶ್ರೀಧರ್‌ ರಾವ್‌ ಅವರು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ಚಿತ್ರಕಥೆ ತಯಾರಿಸಿ ಸಿದ್ದರಾಮಯ್ಯ ಅವರ ಒಪ್ಪಿಗೆ ಪಡೆದ ಬಳಿಕವೇ ಚಿತ್ರ ನಿರ್ಮಿಸುತ್ತೇವೆ. ದೊಡ್ಡ ಬಜೆಟ್‌ನಲ್ಲೇ ಚಿತ್ರ ತಯಾರಿಸಲಾಗುವುದು.

ಸಿದ್ದರಾಮಯ್ಯ ಅವರು ನಡೆದು ಬಂದ ದಾರಿ, ರಾಜಕೀಯ ಜೀವನ, ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಅವರು ಮಾಡಿದ ಸಾಧನೆಗಳನ್ನು ಬಿಂಬಿಸುವ ಸಿನಿಮಾ ಇದಾಗಲಿದೆ. ಸಿದ್ದರಾಮಯ್ಯ ಅವರ ಸ್ನೇಹಿತರು, ಅಭಿಮಾನಿಗಳ ಜೊತೆ ಚರ್ಚಿಸಿ ಸಿನಿಮಾ ಮಾಡಲಾಗುವುದು ಎಂದು ಮಾಹಿತಿ ನೀಡಿದರು.