ಮನೆ ರಾಷ್ಟ್ರೀಯ ಉಪ ರಾಷ್ಟ್ರಪತಿ ಚುನಾವಣೆ: ಶೇ. 93 ರಷ್ಟು ಮತದಾನ, ಮತ ಎಣಿಕೆ ಆರಂಭ

ಉಪ ರಾಷ್ಟ್ರಪತಿ ಚುನಾವಣೆ: ಶೇ. 93 ರಷ್ಟು ಮತದಾನ, ಮತ ಎಣಿಕೆ ಆರಂಭ

0

ನವದೆಹಲಿ(New Delhi): ಇಂದು ಬೆಳಿಗ್ಗೆ 10 ಗಂಟೆಯಿಂದ 5 ಗಂಟೆವರೆಗೆ ನಡೆದ ಉಪರಾಷ್ಟ್ರಪತಿ ಚುನಾವಣೆಯ ಮತ ಎಣಿಕೆ ಸಂಸತ್ ಭವನದಲ್ಲಿ ಆರಂಭವಾಗಿದೆ.

ಕೆಲವೇ ಗಂಟೆಗಳಲ್ಲಿ ಫಲಿತಾಂಶ ಹೊರಬೀಳುವ ನಿರೀಕ್ಷೆ ಇದೆ.

ಎನ್ ಡಿ ಎ ಅಭ್ಯರ್ಥಿ ಜಗದೀಪ್ ಧನಕರ್(71) ಮತ್ತು ವಿಪಕ್ಷಗಳ ಅಭ್ಯರ್ಥಿ ಮಾರ್ಗರೇಟ್ ಆಳ್ವಾ(80) ಕಣದಲ್ಲಿದ್ದಾರೆ.

ಉಪರಾಷ್ಟ್ರಪತಿ ಚುನಾವಣೆಯಲ್ಲಿ ಶೇಕಡ 93ರಷ್ಟು ಮತದಾನವಾಗಿದ್ದು, 50ಕ್ಕೂ ಅಧಿಕ ಸಂಸದರು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿಲ್ಲ.

ಲೋಕಸಭೆ ಮತ್ತು ರಾಜ್ಯಸಭೆ ಸೇರಿ ಒಟ್ಟು 780 ಸಂಸದರಿದ್ದು, ಸಂಜೆ 5 ಗಂಟೆ ವೇಳೆಗೆ 725 ಮಂದಿ ಮತದಾನ ಮಾಡಿದ್ದರು ಎಂದು ವರದಿ ತಿಳಿಸಿದೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಬೆಳಿಗ್ಗೆಯೇ ಮತದಾನ ಮಾಡಿದರು. 23 ಲೋಕಸಭಾ ಸದಸ್ಯರು ಸೇರಿ ಟಿಎಂಸಿಯ 39 ಸಂಸದರು ಮತದಾನ ಮಾಡಲಿಲ್ಲ. ಬಿಜೆಪಿಯು ಲೋಕಸಭೆಯಲ್ಲಿ ಸಂಪೂರ್ಣ ಬಹುಮತ ಹೊಂದಿದ್ದು, ರಾಜ್ಯಸಭೆಯಲ್ಲಿ 91 ಸದಸ್ಯರ ಬಲವಿದೆ. ಹೀಗಾಗಿ ಧನಕರ್ ಗೆಲ್ಲುವ ಸಾಧ್ಯತೆಗಳು ನಿಚ್ಚಳವಾಗಿವೆ